AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್-ಇಸ್ರೇಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ ಹಮಾಸ್; ಆಕೆ ಬದುಕಿಲ್ಲ ಎಂದು ಕಣ್ಣೀರಿಟ್ಟ ತಾಯಿ

ಗಾಜಾ ಪಟ್ಟಿಯ ಗಡಿಯ ಸಮೀಪ ಮರುಭೂಮಿಯಲ್ಲಿ ಭಯೋತ್ಪಾದಕರು ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದಾಗ ಶಾನಿ ಲೌಕ್ ಅವರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ನಂತರ ವರದಿಯಾಗಿದೆ. ಲೌಕ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದರೂ, ಆಕೆಯ ದೇಹವನ್ನು ಗಾಜಾದಿಂದ ಹಿಂತಿರುಗಿಸಲಾಗಿಲ್ಲ.ಸೋಮವಾರ, ಲೌಕ್ ಅವರ ಕುಟುಂಬದ ಸದಸ್ಯರು ಇಸ್ರೇಲಿ ಝಕಾ ರಕ್ಷಣಾ ಸೇವೆಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ.

ಜರ್ಮನ್-ಇಸ್ರೇಲಿ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ ಹಮಾಸ್; ಆಕೆ ಬದುಕಿಲ್ಲ ಎಂದು ಕಣ್ಣೀರಿಟ್ಟ ತಾಯಿ
ಶಾನಿ ಲೌಕ್
ರಶ್ಮಿ ಕಲ್ಲಕಟ್ಟ
|

Updated on:Oct 30, 2023 | 6:51 PM

Share

ಗಾಜಾ ಅಕ್ಟೋಬರ್ 30: ಹಮಾಸ್‌ನ  (Hamas) ಅಕ್ಟೋಬರ್ 7 ರ ದಾಳಿಯ ಸಮಯದಲ್ಲಿ ಗಾಜಾ ಪಟ್ಟಿಗೆ (Gaza) ಅಪಹರಿಸಲಾಗಿದೆ ಎಂದು ನಂಬಲಾದ ಜರ್ಮನ್-ಇಸ್ರೇಲಿ ಮಹಿಳೆ ಶಾನಿ ಲೌಕ್ ಸಾವಿಗೀಡಾದಗಿದ್ದಾರೆ. ದುರದೃಷ್ಟವಶಾತ್, ನನ್ನ ಮಗಳು ಬದುಕಿಲ್ಲ ಎಂಬ ಸುದ್ದಿ ಸಿಕ್ಕಿದೆ ಎಂದು ಲೌಕ್ ಅವರ ತಾಯಿ ರಿಕಾರ್ಡಾ ಜರ್ಮನ್ ಔಟ್ಲೆಟ್ ಆರ್​​​ಟಿಎಲ್​​​ಗೆ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. 22 ವರ್ಷದ ಶಾನಿ ಭಾಗವಹಿಸಿದ್ದ ಗಾಜಾದ ಗಡಿಯಲ್ಲಿರುವ ಸಂಗೀತ ಉತ್ಸವವು ಹಮಾಸ್ ದಾಳಿಗೆ ಒಳಗಾದ ಮೊದಲ ತಾಣಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ. ಪ್ಯಾಲೆಸ್ತೀನ್ ಸಂಘಟನೆಗಳ(Palestinian outfit) ಸದಸ್ಯರಿಂದ ಸೆರೆಹಿಡಿಯಲ್ಪಟ್ಟ ಡಜನ್ಗಟ್ಟಲೆ ಜನರಲ್ಲಿ ಆಕೆಯೂ ಒಬ್ಬಳು.ಆಕೆಯನ್ನು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಬೀದಿಗಳಲ್ಲಿ ಹಮಾಸ್ ಉಗ್ರರು  ಮೆರವಣಿಗೆ ನಡೆಸಿದ್ದರು.

ಆನ್​​ಲೈನ್​​ನಲ್ಲಿ ಪ್ರಸಾರವಾದ ವಿಡಿಯೊ ನೋಡಿ ಶಾನಿ ಲೌಕ್ ಅವರ ತಾಯಿಯು ತನ್ನ ಮಗಳನ್ನು ಗುರುತಿಸಿದ್ದರು.ಆಕೆಯ ಹಚ್ಚೆಗಳು ಮತ್ತು ಬಣ್ಣ ಹಾಕಿದ ಕೂದಲನ್ನು ನೋಡಿ ಆಕೆ ಮಗಳನ್ನು ಗುರುತಿಸಿದ್ದರು. ಅಂತರ್ಜಾಲದಲ್ಲಿ ಕಾಣಿಸಿಕೊಂಡ ವಿಡಿಯೊಗಳು, ಗಾಜಾದಲ್ಲಿ ಶಸ್ತ್ರಸಜ್ಜಿತ ಪುರುಷರಿಂದ ತುಂಬಿದ ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಅರೆಬೆತ್ತಲೆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ತೋರಿಸಿದೆ.

ಗಾಜಾ ಪಟ್ಟಿಯ ಗಡಿಯ ಸಮೀಪ ಮರುಭೂಮಿಯಲ್ಲಿ ಭಯೋತ್ಪಾದಕರು ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದಾಗ ಶಾನಿ ಲೌಕ್ ಅವರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ನಂತರ ವರದಿಯಾಗಿದೆ. ಲೌಕ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದರೂ, ಆಕೆಯ ದೇಹವನ್ನು ಗಾಜಾದಿಂದ ಹಿಂತಿರುಗಿಸಲಾಗಿಲ್ಲ. ಸೋಮವಾರ, ಲೌಕ್ ಅವರ ಕುಟುಂಬದ ಸದಸ್ಯರು ಇಸ್ರೇಲಿ ಝಕಾ ರಕ್ಷಣಾ ಸೇವೆಯಿಂದ ಪತ್ರವನ್ನು ಸ್ವೀಕರಿಸಿದ್ದಾರೆ. ಆಕೆಯ ತಲೆಬುರುಡೆಯ ಬುಡದಿಂದ ಮೂಳೆ ಸಿಕ್ಕಿದೆ ಅದು ಇಲ್ಲದೆ ಒಬ್ಬ ವ್ಯಕ್ತಿಯು ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ

“ಸಂಗೀತೋತ್ಸವದಂದು ಅಪಹರಣಕ್ಕೊಳಗಾಗಿ ಹಮಾಸ್ ಭಯೋತ್ಪಾದಕರಿಂದ ಗಾಜಾದ ಸುತ್ತಲೂ ಚಿತ್ರಹಿಂಸೆಗೊಳಗಾಗಿ ಶಾನಿಯನ್ನು ಬೆತ್ತಲೆ ಮೆರವಣಿಗೆ ಮಾಡಲಾಗಿತ್ತು. ಆಕೆ ಅತಿಯಾದ ನೋವು ಅನುಭವಿಸಿದಳಶು. ನಮ್ಮ ಎದೆಯೊಡೆದಿದೆ. ಆಕೆಯ ಸ್ಮರಣೆಯು ಆಶೀರ್ವಾದವಾಗಲಿ” ಎಂದು ಇಸ್ರೇಲ್ ಸರ್ಕಾರ ಟ್ವೀಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೇರಳ ಸಿಎಂ ಹಮಾಸ್ ಅನ್ನು ಸಮುದಾಯದೊಂದಿಗೆ ಸಮೀಕರಿಸಲು ಬಯಸಿದ್ದಾರೆ: ರಾಜೀವ್ ಚಂದ್ರಶೇಖರ್

ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿದ್ದು 1,400 ಜನರನ್ನು ಕೊಂದಿದ್ದು 230 ಜನರನ್ನು ಅಪಹರಿಸಿತು. ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯು 8,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ವರದಿಯಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Mon, 30 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ