AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಲೆಸ್ತೀನ್‌ಗೆ ಷಿ ಬೆಂಬಲ ನೀಡುತ್ತಿದ್ದಂತೆ ಡಿಜಿಟಲ್ ನಕ್ಷೆಗಳಿಂದ ‘ಇಸ್ರೇಲ್’ ತೆಗೆದುಹಾಕಿದ ಚೀನೀ ಕಂಪನಿಗಳು

ಬೈಡೂವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಗಳು ಇಸ್ರೇಲ್‌ನ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳು, ಹಾಗೆಯೇ ಪ್ಯಾಲೆಸ್ತೀನಿಯನ್  ಪ್ರದೇಶಗಳು ಮತ್ತು ಪ್ರಮುಖ ನಗರಗಳನ್ನು ಗುರುತಿಸುತ್ತವೆ, ಆದರೆ ದೇಶವನ್ನು ಹೆಸರಿನಿಂದ ಸ್ಪಷ್ಟವಾಗಿ ಗುರುತಿಸುವುದಿಲ್ಲ" ಎಂದು ವರದಿ ಹೇಳಿದೆ.

ಪ್ಯಾಲೆಸ್ತೀನ್‌ಗೆ ಷಿ ಬೆಂಬಲ ನೀಡುತ್ತಿದ್ದಂತೆ ಡಿಜಿಟಲ್ ನಕ್ಷೆಗಳಿಂದ 'ಇಸ್ರೇಲ್' ತೆಗೆದುಹಾಕಿದ ಚೀನೀ ಕಂಪನಿಗಳು
ಷಿ ಜಿಂಗ್​​​ಪಿಂಗ್
ರಶ್ಮಿ ಕಲ್ಲಕಟ್ಟ
|

Updated on:Oct 31, 2023 | 1:57 PM

Share

ಮಾಸ್ಕೋ ಅಕ್ಟೋಬರ್ 31: ಚೀನಾದ (China) ಉನ್ನತ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಮತ್ತು ಬೈಡೂ ಆನ್‌ಲೈನ್‌ನಲ್ಲಿ ಲಭ್ಯವಿರುವ ತಮ್ಮ ಡಿಜಿಟಲ್ ನಕ್ಷೆಗಳಿಂದ ಇಸ್ರೇಲ್‌ನ (Israel) ಅಧಿಕೃತ ಹೆಸರನ್ನು ಕೈಬಿಟ್ಟಿವೆ. ಯಹೂದಿ ದೇಶ ಮತ್ತು ಇಸ್ಲಾಮಿ ಭಯೋತ್ಪಾದಕ ಸಂಘಟನೆ ಹಮಾಸ್ (hamas) ನಡುವಿನ ಯುದ್ಧದ ನಂತರ ಚೀನೀ ಅಂತರ್ಜಾಲವು ಈ ಕ್ರಮ ತೆಗೆದುಕೊಂಡಿದೆ. ಬೈಡೂ ಮತ್ತು ಅಲಿಬಾಬಾ ಇನ್ನು ಮುಂದೆ ಇಸ್ರೇಲ್ ಅನ್ನು ಹೆಸರಿನಿಂದ ಉಲ್ಲೇಖಿಸುವುದಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ.

“ಬೈಡೂವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಗಳು ಇಸ್ರೇಲ್‌ನ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳು, ಹಾಗೆಯೇ ಪ್ಯಾಲೆಸ್ತೀನಿಯನ್  ಪ್ರದೇಶಗಳು ಮತ್ತು ಪ್ರಮುಖ ನಗರಗಳನ್ನು ಗುರುತಿಸುತ್ತವೆ, ಆದರೆ ದೇಶವನ್ನು ಹೆಸರಿನಿಂದ ಸ್ಪಷ್ಟವಾಗಿ ಗುರುತಿಸುವುದಿಲ್ಲ” ಎಂದು ವರದಿ ಹೇಳಿದೆ. ಲಕ್ಸೆಂಬರ್ಗ್‌ನಷ್ಟು ಚಿಕ್ಕ ರಾಷ್ಟ್ರಗಳ ಹೆಸರುಗಳನ್ನು ಸಂಪೂರ್ಣವಾಗಿ ನೋಡಬಹುದು, ಆದರೆ ಇಸ್ರೇಲ್‌ನದ್ದಲ್ಲ. ಚೀನಾದ ಕಂಪನಿಗಳು ಈ ಕ್ರಮದ ಹಿಂದೆ ಯಾವುದೇ ವಿವರಣೆಯನ್ನು ನೀಡಿಲ್ಲ.

ಕಳೆದ ತಿಂಗಳಿನಿಂದ, ಚೀನೀ ಕಮ್ಯುನಿಸ್ಟ್ ಪಕ್ಷವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ಪ್ರದೇಶದಲ್ಲಿ ಯಹೂದಿಯರ ವಿರುದ್ಧ ಇಂಟರ್ನೆಟ್ ನಲ್ಲಿ ದನಿಯೆದ್ದಿದೆ.ಹಿಂದೆ, ಜರ್ಮನಿ ನಿಮಗೆ ಕಿರುಕುಳ ನೀಡಿತು. ಈಗ, ನೀವು ಪ್ಯಾಲೆಸ್ತೀನಿಯರನ್ನು  ಹಿಂಸಿಸುತ್ತೀರಿ. ಈ ಜಗತ್ತಿನಲ್ಲಿ, ಇತರರನ್ನು ಮೂಲೆಗೆ ತಳ್ಳಬೇಡಿ ಏಕೆಂದರೆ ನೀವು ನಿಮ್ಮ ಸ್ವಂತ ಸಮಾಧಿಯನ್ನು ಮಾತ್ರ ಅಗೆಯುತ್ತೀರಿ ಎಂದು ಉನ್ನತ ಚೀನೀ ರಾಷ್ಟ್ರೀಯತಾವಾದಿಯೊಬ್ಬರು ‘ವೈಬೋ’ದಲ್ಲಿ ಬರೆದಿದ್ದರು.

“ಯಹೂದಿಗಳು ಯಾವಾಗಲೂ ವಿಶ್ವ ಯುದ್ಧ II ರ ಸಮಯದಲ್ಲಿ ಮತ್ತು ಇತಿಹಾಸದುದ್ದಕ್ಕೂ ತಮ್ಮನ್ನು ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ. ಆದರೆ ಏಕೆ ಎಂದು ನೀವು ಕೇಳಲು ಸಾಧ್ಯವಿಲ್ಲ. ಇಲ್ಲದಿದ್ದರೆ, ನಿಮ್ಮನ್ನು ಜನಾಂಗೀಯ ಎಂದು ಕರೆಯಲಾಗುತ್ತದೆ ಅಥವಾ ನೀವು ಅವರ ಹಣ ನೋಡಿ ಅಸೂಯೆಪಡುತ್ತೀರಿ” ಎಂದು ವೈಬೋ ಪೋಸ್ಟ್‌ನಲ್ಲಿ ಮತ್ತೊಬ್ಬರು ಹೇಳಿದ್ದಾರೆ.

“ಗಾಜಾದ ಇತಿಹಾಸದ ತಪ್ಪು ಭಾಗದಲ್ಲಿ” ನಿಂತಿದ್ದಕ್ಕಾಗಿ ಚೀನಾದ ಮಾಧ್ಯಮಗಳು ಯುಎಸ್ ಅನ್ನು ಛೀಮಾರಿ ಹಾಕುತ್ತಿವೆ. ಚೈನೀಸ್ ಅಧ್ಯಕ್ಷ ಷಿ ಜಿನ್‌ಪಿಂಗ್ ಸ್ವತಃ ಪ್ಯಾಲೆಸ್ತೀನ್ ಗೆ ಬೆಂಬಲ ನೀಡಿದ್ದಾರೆ.

ಇದನ್ನೂ ಓದಿ:  Viral Video: ರೂ 6 ಕೋಟಿಯನ್ನು ಬ್ಯಾಂಕ್​ ಸಿಬ್ಬಂದಿಗೆ ಕೈಯ್ಯಾರೆ ಎಣಿಸಲು ಹೇಳಿದ ಚೀನೀ ಮಿಲೆನಿಯರ್

ಪ್ಯಾಲೆಸ್ತೀನಿಯರು ಅನುಭವಿಸಿದ ಅನ್ಯಾಯವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾದಲ್ಲಿ ಸಹಕಾರ ಮತ್ತು ಅಭಿವೃದ್ಧಿಗಾಗಿ ರಿಯಾದ್-ಗಲ್ಫ್-ಚೀನೀ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಚೀನಾ ಅಧ್ಯಕ್ಷರು ಹೇಳಿದರು.

ಯಹೂದಿಗಳ ಬಗ್ಗೆ ಚೀನಿಯರು ಏನಂತಾರೆ?

ಯಹೂದಿ ಪ್ರಭಾವದ ಕುರಿತಾದ ಪಿತೂರಿ ಸಿದ್ಧಾಂತಗಳು ಚೀನಾದ ಅಂತರ್ಜಾಲದಲ್ಲಿ ಬಹಳ ಹಿಂದಿನಿಂದಲೂ ಹರಡಿಕೊಂಡಿವೆ, ಫ್ರೀಮ್ಯಾಸನ್ರಿಯಂತಹ ಸಂಸ್ಥೆಗಳು ಅಮೆರಿಕ ಸರ್ಕಾರ ಮತ್ತು ಜಾಗತಿಕ ವ್ಯವಹಾರಗಳ ಮೇಲೆ ರಹಸ್ಯವಾಗಿ ನಿಯಂತ್ರಣವನ್ನು ಹೊಂದಿವೆ ಎಂದು ಸೂಚಿಸುತ್ತದೆ. ಚೀನಾದ ಸರ್ಕಾರಿ ಸ್ವಾಮ್ಯದ ಸಿಸಿಟಿವಿಯೊಂದಿಗೆ ಸಂಯೋಜಿತವಾಗಿರುವ ವೈಬೊ ಖಾತೆಯು ಯಹೂದಿ ಸಮುದಾಯವು ಯುಎಸ್ ಹಣಕಾಸು ಮತ್ತು ರಾಜಕೀಯದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದೆ ಎಂದು ಆರೋಪಿಸಿದೆ, ಆಗಾಗ್ಗೆ ಇಸ್ರೇಲ್ ಅನ್ನು ಅಮೆರಿಕನ್ ಚುನಾವಣೆಗಳಲ್ಲಿ ನಿರ್ಣಾಯಕ ಅಂಶವೆಂದು ಉಲ್ಲೇಖಿಸುತ್ತದೆ. ಆ ಪೋಸ್ಟ್ ಈಗ ಡಿಲೀಟ್ ಆಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:55 pm, Tue, 31 October 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ