ದೆಹಲಿ: ಗಾಜಾದಲ್ಲಿ ನಡೆಯುತ್ತಿರುವ ನರಮೇಧ ನಿಲ್ಲಿಸುವಂತೆ ಒತ್ತಾಯಿಸಿ ಸಿಪಿಐಎಂ ಧರಣಿ, ಪಿಣರಾಯಿ ವಿಜಯನ್ ಭಾಗಿ
ಇಸ್ರೇಲ್ಗೆ ಗಾಜಾ ಮೇಲಿನ ದಾಳಿ ನಿಲ್ಲಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ನಾಯಕರು ದೆಹಲಿಯಲ್ಲಿ ಧರಣಿ ನಡೆಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸೀತಾರಾಮ್ ಯಚೂರಿ ಸೇರಿದಂತೆ ಹಲವು ನಾಯಕರು ಧರಣಿಯಲ್ಲಿ ಪಾಲ್ಗೊಂಡಿದ್ದರು
ಇಸ್ರೇಲ್ಗೆ ಗಾಜಾ ಮೇಲಿನ ದಾಳಿ ನಿಲ್ಲಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ನಾಯಕರು ದೆಹಲಿಯಲ್ಲಿ ಧರಣಿ ನಡೆಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸೀತಾರಾಮ್ ಯಚೂರಿ ಸೇರಿದಂತೆ ಹಲವು ನಾಯಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 12 ಗಂಟೆಗೆ ದೆಹಲಿಯ ಎಕೆಜಿ ಭವನದ ಮುಂದೆ ಧರಣಿ ಆರಂಭವಾಯಿತು, ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಇದಾಗಿದೆ. ಸಿಪಿಎಂ ರಾಜ್ಯ ಕಾಯದರ್ಶಿ ಗಾಜಾದ ಮೇಲಿನ ಇಸ್ರೇಲ್ ಆಕ್ರಮಣದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಇಲ್ಲಿ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೆಚೂರಿ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಾಡುತ್ತಿರುವ ಅನಾಗರಿಕ ವರ್ತನೆಗೆ ತಕ್ಷಣ ಅಂತ್ಯ ಹಾಡಬೇಕು. ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೆ 8,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಆದರೆ ಅವಶೇಷಗಳಡಿಯಲ್ಲಿ ಎಷ್ಟು ಶವಗಳಿವೆ ಎಂಬುದರ ಕುರಿತು ಯಾವುದೇ ಸುಳಿವು ಇಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ನುಡಿದಂತೆ ನಡೆದ ಇಸ್ರೇಲ್: ಹಮಾಸ್ ಸುರಂಗದ ಮೇಲೆ ದಾಳಿ, 150 ಉಗ್ರರ ಹತ್ಯೆ
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5 ಸಾವಿರ ರಾಕೆಟ್ಗಳಿಂದ ದಾಳಿ ನಡೆಸಿದ್ದರು. ಅದಾದ ಬಳಿಕ ಇಸ್ರೇಲ್ ಇದರ ಪ್ರತಿಯಾಗಿ ಗಾಜಾ ಮೇಲೆ ದಾಳಿ ನಡೆಸುತ್ತಿದೆ, ಅಷ್ಟೇ ಅಲ್ಲದೆ ಗಾಜಾದಿಂದ ನಾಗರಿಕರನ್ನು ತೆರಳುವಂತೆ ಸಲಹೆ ನೀಡಿತ್ತು, ಅಲ್ಲೇ ಉಳಿದುಕೊಂಡವರನ್ನು ಉಗ್ರರೆಂದು ಪರಿಗಣಿಸುವುದಾಗಿ ಎಚ್ಚರಿಕೆ ನೀಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ