ನುಡಿದಂತೆ ನಡೆದ ಇಸ್ರೇಲ್​​​: ಹಮಾಸ್​​​​ ಸುರಂಗದ ಮೇಲೆ ದಾಳಿ, 150 ಉಗ್ರರ ಹತ್ಯೆ

ಇಸ್ರೇಲ್​​​ ಭೂಸೇನೆ ಮಹತ್ವದ ದಾಳಿಯನ್ನು ಶುಕ್ರವಾರ ರಾತ್ರಿ ಹಮಾಸ್​​ ತಾಣಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್​ಗೆ​​​ ದೊಡ್ಡ ಕಂಟಕವಾಗಿದ್ದ ಹಮಾಸ್​​ ಸುರಂಗದ ಮೇಲೆ ಇಸ್ರೇಲ್​​ ಭೂಸೇನೆ ದಾಳಿ ಮಾಡಿ, 150ಕ್ಕೂ ಹೆಚ್ಚು ಹಮಾಸ್​​​​ ಉಗ್ರರನ್ನು ಹತ್ಯೆ ಮಾಡಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್​​ ಭೂ ಪಡೆ ಶುಕ್ರವಾರ (ಅ.27)ದಂದು ಭಾರೀ ದೊಡ್ಡ ಕಾರ್ಯಚರಣೆ ಮಾಡಿದೆ. ಈ ಹಿಂದೆ ಹಮಾಸ್​​ ಉಗ್ರರ ಸುರಂಗ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲು ಇಸ್ರೇಲ್​​ ಭಾರೀ ದೊಡ್ಡ ಪ್ಲಾನ್​​ ಮಾಡಿತ್ತು ಎಂದು ಹೇಳಲಾಗಿದೆ.

ನುಡಿದಂತೆ ನಡೆದ ಇಸ್ರೇಲ್​​​: ಹಮಾಸ್​​​​ ಸುರಂಗದ ಮೇಲೆ ದಾಳಿ, 150 ಉಗ್ರರ ಹತ್ಯೆ
ಸಾಂದರ್ಭಿಕ ಚಿತ್ರ
Follow us
|

Updated on:Oct 28, 2023 | 4:22 PM

ಇಸ್ರೇಲ್​​​ ಭೂಸೇನೆ ಮಹತ್ವದ ದಾಳಿಯನ್ನು ಶುಕ್ರವಾರ ರಾತ್ರಿ ಹಮಾಸ್​​ ತಾಣಗಳ ಮೇಲೆ ದಾಳಿ ಮಾಡಿದೆ. ಇಸ್ರೇಲ್​ಗೆ​​​ ದೊಡ್ಡ ಕಂಟಕವಾಗಿದ್ದ ಹಮಾಸ್​​ ಸುರಂಗದ ಮೇಲೆ ಇಸ್ರೇಲ್​​ ಭೂಸೇನೆ ದಾಳಿ ಮಾಡಿ, 150ಕ್ಕೂ ಹೆಚ್ಚು ಹಮಾಸ್​​​​ ಉಗ್ರರನ್ನು ಹತ್ಯೆ ಮಾಡಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್​​ ಭೂ ಪಡೆ ಶುಕ್ರವಾರ (ಅ.27)ದಂದು ಭಾರೀ ದೊಡ್ಡ ಕಾರ್ಯಚರಣೆ ಮಾಡಿದೆ. ಈ ಹಿಂದೆ ಹಮಾಸ್​​ ಉಗ್ರರ ಸುರಂಗ ಮಾರ್ಗಗಳನ್ನು ಸಂಪೂರ್ಣವಾಗಿ ಮುಚ್ಚಲು ಇಸ್ರೇಲ್​​ ಭಾರೀ ದೊಡ್ಡ ಪ್ಲಾನ್​​ ಮಾಡಿತ್ತು ಎಂದು ಹೇಳಲಾಗಿದೆ. ನೆನ್ನೆ ಇಸ್ರೇಲ್​​  ನಡೆಸಿದ ದಾಳಿಯಲ್ಲಿ ತನ್ನ ​​ ಸೈನಿಕರಿಗೆ ಯಾವುದೇ ತೊಂದರೆ ಆಗಿಲ್ಲ, ಆದರೆ 150ಕ್ಕೂ ಹೆಚ್ಚು ಹಮಾಸ್​​ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನೆ ಹೇಳಿದೆ.

ಇನ್ನು ಇಸ್ರೇಲ್ IDF (Israel Defense Forces) ಹಮಾಸ್​​ ಸುರಂಗ ನೆಲೆಗಳನ್ನು ನಾಶ ಮಾಡುವ ಪ್ರಯತ್ನ ಸಫಲಗೊಂಡಿದೆ. ಇದರ ಜತೆಗೆ ಹಮಾಸ್​​ ಮೂಲಸೌಕರ್ಯಗಳನ್ನು ನಾಶ ಮಾಡಿದೆ. IDF ಪದಾತಿದಳ, ಯುದ್ಧ ಎಂಜಿನಿಯರಿಂಗ್ ಪಡೆಗಳು ಮತ್ತು ಟ್ಯಾಂಕ್‌ಗಳು ಗಾಜಾ ಪಟ್ಟಿಯೊಳಗೆ ನೆಲೆ ನಿಂತಿದೆ. ಈಗಾಗಲೇ ಗಾಜಾ ಪಟ್ಟಿಯ ಸುತ್ತ ಇಸ್ರೇಲ್​​ ಸೇನೆ ಸುತ್ತುವರಿದಿದೆ. IDF ಫೈಟರ್ ಜೆಟ್‌ಗಳು ಟುನೈಟ್ ಉತ್ತರ ಗಾಝಾ ಸ್ಟ್ರಿಪ್‌ನಲ್ಲಿ ಸುಮಾರು 150 ಹಮಾಸ್​​​ ಉಗ್ರರನ್ನು ಹತ್ಯೆ ಮಾಡಿದೆ.

ಇಸ್ರೇಲ್​​ ಈ ಹಿಂದೆ ಹೇಳಿರುವಂತೆ ಹಮಾಸ್​​​ ಸಂಘಟನೆಯನ್ನು ನಿರ್ಮೂಲನೆ ಮಾಡುವೇ ಎಂದಿತ್ತು. ಇದೀಗ ಅದೇ ರೀತಿಯಲ್ಲಿ ಹಮಾಸ್​​ ತಾಣಗಳು, ಸುರಂಗ, ಇತರ ತಾಣಗಳನ್ನು ನಾಶ ಮಾಡುತ್ತಿದೆ. ಇಸ್ರೇಲಿ ಫೈಟರ್ ಜೆಟ್‌ಗಳು ಹಮಾಸ್‌ನ ಏರಿಯಲ್ ಅರೇ ಮುಖ್ಯಸ್ಥ ಅಸೆಮ್ ಅಬು ರಕಾಬಾ ಅವರ ಮೇಲೂ ದಾಳಿ ಮಾಡಿತು.ಹಮಾಸ್‌ನ UAVಗಳು, ಡ್ರೋನ್‌ಗಳು, ಪ್ಯಾರಾಗ್ಲೈಡರ್‌ಗಳು, ವೈಮಾನಿಕ ಪತ್ತೆ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಅಬು ರಕಾಬಾ ವಹಿಸಿದ್ದರು.

ಇದನ್ನೂ ಓದಿ:ಸ್ಪಾಂಜ್ ಬಾಂಬ್ಸ್ ಪ್ರಯೋಗಕ್ಕೆ ಮುಂದಾದ ಇಸ್ರೇಲ್​​​, ಹಮಾಸ್ ಸುರಂಗಗಳ ನಾಶಕ್ಕೆ ಹೊಸ ಪ್ಲಾನ್​ ​​

ಅಕ್ಟೋಬರ್​​ 7ರಂದು ಹಮಾಸ್​​ ದಾಳಿಯ ಹಿಂದೆ ಅಸೆಮ್ ಅಬು ರಕಾಬಾ ಅವರ ಕೈವಾಡ ಇದೆ ಎಂದು ಹೇಳಲಾಗಿದೆ. ಇನ್ನು IDF ಮೇಲೆಯು ದಾಳಿ ಮಾಡಿತ್ತು. ಈ ದಾಳಿಯ ರೂವರಿ ಅಸೆಮ್ ಅಬು ರಕಾಬಾ ಇದ್ದರೆ ಎಂದು ಹೇಳಿದೆ. ಇನ್ನು ಈ ದಾಳಿಯ ಬಗ್ಗೆ ಫೋನ್​​, ಸಂದೇಶಗಳು ಕೂಡ ಇಸ್ರೇಲ್​​ ಮತ್ತು ಪ್ಯಾಲೇಸ್ಟಿನಿಯನ್ ನಡುವೆ ನಡೆದಿದೆ ಎಂದು ಹೇಳಲಾಗಿದೆ . ಇನ್ನು ಅಕ್ಟೋಬರ್​​ 7ರಂದು ನಡೆದ ದಾಳಿಯಲ್ಲಿ ಎರಡು ಕಡೆ ಹಲವು ಸಾವು -ನೋವು ಸಂಭವಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Sat, 28 October 23