ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಮನೆಯಲ್ಲಿ ಯುವಕನ ಶವ ಪತ್ತೆ
ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಮನೆಯಲ್ಲಿ 24 ವರ್ಷದ ಯುವಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಯೂಷ್ ಸಿಂಗ್, ನೀತು ಸಿಂಗ್ ಅವರ ದೂರದ ಸಂಬಂಧಿಯಾಗಿದ್ದು, ಪೊಲೀಸರು ಶವವನ್ನು ಪತ್ತೆ ಮಾಡಿದಾಗ ಶಾಸಕಿ ಅವರ ಮನೆಯಲ್ಲಿ ಇರಲಿಲ್ಲ ಎಂದು ನಾವಡಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಬರೀಶ್ ರಾಹುಲ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ನೀತು ಸಿಂಗ್ ಪಾಟ್ನಾದಲ್ಲಿ ಇರಲಿಲ್ಲ ಮತ್ತು ಘಟನೆಯ ಸಮಯದಲ್ಲಿ ಇತರ ಕುಟುಂಬ ಸದಸ್ಯರು ಸಹ ಅಲ್ಲಿರಲಿಲ್ಲ. ಸಂಜೆ 4.30 ಕ್ಕೆ ಶಾಸಕರ ಮನೆಯಲ್ಲಿ ಮೃತದೇಹ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು, ನಂತರ ತಂಡವು ಸ್ಥಳಕ್ಕೆ ಧಾವಿಸಿತು ಎಂದು ಎಸ್ಪಿ ಮಾಹಿತಿ ನೀಡಿದರು.
ನೀತು ಸಿಂಗ್ ಅವರ ಸೋದರಳಿಯ ಗೋಲು ಸಿಂಗ್ ಅವರಿಗೆ ಸೇರಿದ ಕೋಣೆಯಲ್ಲಿ ಪಿಯೂಷ್ ಸಿಂಗ್ ಅವರ ಶವ ಬಿದ್ದಿತ್ತು. ಪೊಲೀಸರು ಪ್ರಕರಣದ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರು ಮತ್ತು ಶ್ವಾನ ದಳವನ್ನು ಸಹಾಯ ಪಡೆದಿದ್ದಾರೆ.
ಮತ್ತಷ್ಟು ಓದಿ: ರೌಡಿಯಂತೆ ಮಚ್ಚಿನಿಂದ ಯುವಕರ ಮೇಲೆ ಹಲ್ಲೆ ನಡೆಸಿದ ASI, FRI ದಾಖಲಾಗುತ್ತಿದ್ದಂತೆ ಎಸ್ಕೇಪ್
ಗೋಲು ಸಿಂಗ್ ಅವರ ಕೊಠಡಿಯಲ್ಲಿ ಶವ ಪತ್ತೆಯಾಗಿದ್ದು, ನೀತು ಸಿಂಗ್ ಅವರ ಸೋದರ ಮಾವ ಸುಮನ್ ಸಿಂಗ್ ಮತ್ತು ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷ ಅಭಾ ಸಿಂಗ್ ಅವರ ಪುತ್ರ.
ಶನಿವಾರ ಸಂಜೆ 7 ಗಂಟೆಗೆ ಗೋಲು ಸಿಂಗ್ ಮನೆಗೆ ತೆರಳಿದ್ದ ಪಿಯೂಷ್ ಸಿಂಗ್ ಮನೆಗೆ ವಾಪಸ್ ಬಂದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಾತ್ರಿ ಪಿಯೂಷ್ ಸಿಂಗ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನೀತು ಸಿಂಗ್ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯನ್ನು ಮಾಡಿದಾಗ, ಘಟನೆ ನಡೆದ ನಿಖರವಾದ ಸಮಯ ನಮಗೆ ತಿಳಿಯುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕಾರಣ ತಿಳಿದುಬಂದಿಲ್ಲ, ತನಿಖೆ ನಡೆಸಲಾಗುವುದು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ