Mann Ki Baat: ದೇಶದ ಜನತೆ ಬೆವರು ಸುರಿಸಿ ತಯಾರಿಸಿರುವ ವಸ್ತುಗಳನ್ನು ಮಾತ್ರ ಖರೀದಿಸಿ: ಪ್ರಧಾನಿ ಮೋದಿ

ದೇಶದ ಜನತೆ ಬೆವರು ಸುರಿಸಿ ತಯಾರಿಸಿರುವ ವಸ್ತುಗಳನ್ನು ಮಾತ್ರ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 106ನೇ ಮನ್​ಕಿ ಬಾತ್​ನಲ್ಲಿ ಮಾತನಾಡಿರುವ ಅವರು, ನೀವು ದೇಶದಲ್ಲಿ ಎಲ್ಲೇ ಪ್ರವಾಸಕ್ಕೆ ಹೋದರೂ, ಉಳಿದ ಹಣದಲ್ಲಿ ಅಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಿರುವ ವಸ್ತುಗಳನ್ನು ಖರೀದಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದಿದ್ದಾರೆ.

Mann Ki Baat: ದೇಶದ ಜನತೆ ಬೆವರು ಸುರಿಸಿ ತಯಾರಿಸಿರುವ ವಸ್ತುಗಳನ್ನು ಮಾತ್ರ ಖರೀದಿಸಿ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Oct 29, 2023 | 12:05 PM

ದೇಶದ ಜನತೆ ಬೆವರು ಸುರಿಸಿ ತಯಾರಿಸಿರುವ ವಸ್ತುಗಳನ್ನು ಮಾತ್ರ ಖರೀದಿಸಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. 106ನೇ ಮನ್​ಕಿ ಬಾತ್​ನಲ್ಲಿ ಮಾತನಾಡಿರುವ ಅವರು, ನೀವು ದೇಶದಲ್ಲಿ ಎಲ್ಲೇ ಪ್ರವಾಸಕ್ಕೆ ಹೋದರೂ, ಉಳಿದ ಹಣದಲ್ಲಿ ಅಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಿರುವ ವಸ್ತುಗಳನ್ನು ಖರೀದಿ ಮಾಡುವುದನ್ನು ರೂಢಿಸಿಕೊಳ್ಳಿ ಎಂದಿದ್ದಾರೆ.

ಕೇವಲ ಹಬ್ಬದ ದಿನಗಳಲ್ಲಿ ಸ್ಥಳೀಯವಾಗಿ ತಯಾರಿಸಿರುವ ದೀಪವನ್ನು ಖರೀದಿ ಮಾಡಿ ಸುಮ್ಮನಾಗುವುದಲ್ಲ, ಸಣ್ಣ ಸಣ್ಣ ಅಂಗಡಿಗಳು ಮಾತ್ರವಲ್ಲ ಇಡೀ ದೇಶವೇ ಮ್ಯಾನ್ಯುಫ್ಯಾಕ್ಚರಿಂಗ್ ಹಬ್ಬ ಆಗಿದ್ದು, ದೇಶದಲ್ಲೇ ತಯಾರಿಸಿರುವ ವಸ್ತುಗಳನ್ನು ಖರೀದಿ ಮಾಡುವ ಮೂಲಕ ದೇಶದ ಜನತೆಯ ಬೆವರು, ಯುವಕರ ಟಾಲೆಂಟ್​ಗೆ ಗೌರವ ನೀಡಬೇಕು. ವೋಲಕ್ ಫಾರ್ ಲೋಕಲ್ ಜತೆ, ಆತ್ಮನಿರ್ಭರ ಭಾರತವು ಕೂಡ ಮುಖ್ಯ , ಹಾಗೆಯೇ ಏನೇ ಖರೀದಿ ಮಾಡಿದರೂ ಹಣವನ್ನು ಯುಪಿಐ ಮೂಲಕವೇ ನೀಡಿ ಎಂದು ಸಲಹೆ ನೀಡಿದರು.

ಇಂದು ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಎಂದು ಹೇಳಿದರು. ಅನೇಕ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಅಳವಡಿಸಿಕೊಂಡರೆ, ಮೇಕ್ ಇನ್ ಇಂಡಿಯಾ ಪ್ರಚಾರ ಪಡೆಯುತ್ತದೆ.

ಗಾಂಧಿ ಜಯಂತಿಯಂದು ದೆಹಲಿಯಲ್ಲಿ ದಾಖಲೆಯ ಖಾದಿ ಮಾರಾಟವಾಗಿದೆ, ಕನ್ನಾಟ್ ಪ್ಲೇಸ್‌ನಲ್ಲಿರುವ ಒಂದೇ ಖಾದಿ ಅಂಗಡಿಯಿಂದ ಜನರು ಒಂದೇ ದಿನದಲ್ಲಿ 1.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ. ಖಾದಿ ಮಹೋತ್ಸವ ಮತ್ತೊಮ್ಮೆ ತನ್ನ ಹಳೆಯ ಮಾರಾಟ ದಾಖಲೆಗಳನ್ನೆಲ್ಲ ಮುರಿದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಮನ್​ ಕಿ ಬಾತ್​ನ ಪ್ರಮುಖಾಂಶಗಳು

ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ ಇಂದು ಭಾರತವು ವಿಶ್ವದ ಅತಿದೊಡ್ಡ ಉತ್ಪಾದನಾ ಕೇಂದ್ರವಾಗುತ್ತಿದೆ, ಅನೇಕ ದೊಡ್ಡ ಬ್ರ್ಯಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ತಯಾರಿಸುತ್ತಿವೆ. ನಾವು ಆ ಉತ್ಪನ್ನಗಳನ್ನು ಅಳವಡಿಸಿಕೊಂಡರೆ, ಮೇಕ್ ಇನ್ ಇಂಡಿಯಾ ಪ್ರಚಾರ ದೊರೆತಂತಾಗುತ್ತದೆ ಎಂದರು.

ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿ, ಮೇಕ್ ಇನ್ ಇಂಡಿಯಾ ಆಯ್ಕೆ ಮಾಡಿಕೊಳ್ಳಿ ನಮ್ಮ ಕನಸು ಸ್ವಾವಲಂಬಿ ಭಾರತ, ಪ್ರತಿ ಬಾರಿಯಂತೆ ಈ ಬಾರಿಯೂ ನಮ್ಮ ಹಬ್ಬಗಳಲ್ಲಿ ಸ್ವದೇಶಿ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿ ಎಂದರು.

ಸರ್ದಾರ್ ಪಟೇಲ್ ಸ್ಮರಿಸಿದ ನರೇಂದ್ರ ಮೋದಿ ಅಕ್ಟೋಬರ್ 31 ನಮಗೆಲ್ಲರಿಗೂ ಬಹಳ ವಿಶೇಷವಾದ ದಿನವಾಗಿದೆ. ಈ ದಿನ ನಮ್ಮ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ನಾವು ಭಾರತೀಯರು ಅವರನ್ನು ಹಲವು ಕಾರಣಗಳಿಗಾಗಿ ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಅಕ್ಟೋಬರ್ 31ರಂದು ಮೇರಾ ಯುವ ಭಾರತ್​ಗೆ ಅಡಿಪಾಯ ಅಕ್ಟೋಬರ್ 31 ರಂದು ರಾಷ್ಟ್ರವ್ಯಾಪಿ ಬೃಹತ್ ಸಂಘಟನೆಯ ಅಡಿಪಾಯವನ್ನು ಹಾಕಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸರ್ದಾರ್ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ ಇದರ ಅಡಿಪಾಯವನ್ನು ಹಾಕಲಾಗುತ್ತಿದೆ. ಈ ಸಂಸ್ಥೆಯ ಹೆಸರು ಮೈ ಯೂತ್ ಇಂಡಿಯಾ ಅಂದರೆ MYBharat. MYBharat ಸಂಸ್ಥೆಯು ಭಾರತದ ಯುವಕರಿಗೆ ವಿವಿಧ ರಾಷ್ಟ್ರ ನಿರ್ಮಾಣ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರ ವಹಿಸುವ ಅವಕಾಶವನ್ನು ನೀಡುತ್ತದೆ.

ಇಂದಿರಾ ಗಾಂಧಿ ಪುಣ್ಯತಿಥಿ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರು ಅಕ್ಟೋಬರ್ 31 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿ ಕೂಡ ಆಗಿದೆ, ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಯನ್ನೂ ಸಲ್ಲಿಸುತ್ತೇನೆ. ಭಾರತವು ತನ್ನ ಸಂಸ್ಕೃತಿಯನ್ನು ಉಳಿಸುವ ಪ್ರತಿಯೊಂದು ಪ್ರಯತ್ನದ ಬಗ್ಗೆ ಹೆಮ್ಮೆಪಡುತ್ತದೆ, ಇದು ನಮ್ಮ ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ ಮಾತ್ರವಲ್ಲದೆ ದೇಶದ ಹೆಸರು, ದೇಶದ ಗೌರವ, ಎಲ್ಲವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.

ಅಮೃತ ವಾಟಿಕಾ ನಿರ್ಮಾಣ ಇತ್ತೀಚೆಗೆ ನಾನು ದೇಶದ ಪ್ರತಿಯೊಂದು ಹಳ್ಳಿ ಮತ್ತು ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲು ಜನತೆಯಲ್ಲಿ ಮನವಿ ಮಾಡಿದ್ದೆ, ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸಿ ನಂತರ ಅದನ್ನು ಕಲಶದಲ್ಲಿ ಇರಿಸಿ ನಂತರ ಅಮೃತ ಕಲಶ ಯಾತ್ರೆಗಳನ್ನು ಕೈಗೊಳ್ಳುವಂತೆ ಕೇಳಲಾಗಿತ್ತು, ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ ಈ ಸಾವಿರಾರು ಅಮೃತ ಕಲಶ ಯಾತ್ರೆಗಳು ಈಗ ದೆಹಲಿಯನ್ನು ತಲುಪುತ್ತಿವೆ,ಇಲ್ಲಿ ದೆಹಲಿಯಲ್ಲಿ ಆ ಮಣ್ಣನ್ನು ಬೃಹತ್ ಭಾರತ ಕಲಶಕ್ಕೆ ಹಾಕಲಾಗುವುದು ಮತ್ತು ಈ ಪವಿತ್ರ ಮಣ್ಣಿನಿಂದ ದೆಹಲಿಯಲ್ಲಿ ಅಮೃತ ವಾಟಿಕಾ ನಿರ್ಮಿಸಲಾಗುವುದು ಎಂದರು.

ಬಿರ್ಸಾ ಮುಂಡಾ ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಲಿಲ್ಲ ಲಾರ್ಡ್ ಬಿರ್ಸಾ ಮುಂಡಾ ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದರು. ಅನ್ಯಾಯಕ್ಕೆ ಅವಕಾಶವೇ ಇಲ್ಲದ ಕಾಲವನ್ನು ಕಲ್ಪಿಸಿದರು. ಪ್ರತಿಯೊಬ್ಬ ವ್ಯಕ್ತಿಯು ಗೌರವ ಮತ್ತು ಸಮಾನತೆಯ ಜೀವನವನ್ನು ಪಡೆಯಬೇಕೆಂದು ಅವರು ಬಯಸಿದರು ಎಂದು ಮೋದಿ ಹೇಳಿದರು.

ಗೋವಿಂದ ಗುರೂಜಿ ನೆನಪಿಸಿಕೊಂಡ ಪ್ರಧಾನಿ ಅಕ್ಟೋಬರ್ 30 ಗೋವಿಂದ ಗುರು ಜಿಯವರ ಪುಣ್ಯತಿಥಿ , ಅವರು ಗುಜರಾತ್ ಮತ್ತು ರಾಜಸ್ಥಾನದ ಬುಡಕಟ್ಟು ಮತ್ತು ವಂಚಿತ ಸಮುದಾಯಗಳ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಗೋವಿಂದ ಗುರುಗಳಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.

ಪ್ಯಾರಾ ಏಷ್ಯನ್ ಗೇಮ್ಸ್​ ಭಾರತದ ಆಟಗಾರರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ. ಈ ದೇಶಗಳಲ್ಲಿ ಭಾರತ 111 ಪದಕಗಳನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Sun, 29 October 23

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ