ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ

| Updated By: Lakshmi Hegde

Updated on: Mar 26, 2022 | 8:18 AM

ರಷ್ಯಾ ಸೇನೆಗಳು ಆಸ್ಪತ್ರೆಗಳನ್ನೂ ಬಿಟ್ಟಿಲ್ಲ ಎಂದೂ ಈ ಹಿಂದೆಯೂ ವರದಿಯಾಗಿತ್ತು. ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಕ್ಸಿ ಕೂಡ ಆರೋಪಿಸಿದ್ದರು.

ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ
ಉಕ್ರೇನ್ ಆಸ್ಪತ್ರೆಗಳ ಮೇಲೆ ರಷ್ಯಾ ದಾಳಿ
Follow us on

ಉಕ್ರೇನ್​ ಮೇಲೆ ರಷ್ಯಾ ಯುದ್ಧ (Russia-Ukraine War) ಸಾರಿ ಒಂದು ತಿಂಗಳಾಯಿತು. ಇಲ್ಲಿಯವರೆಗೆ ಉಕ್ರೇನ್​​ನ ವೈದ್ಯಕೀಯ ವ್ಯವಸ್ಥೆಗಳು, ಆಸ್ಪತ್ರೆಗಳ ಮೇಲೆ ರಷ್ಯಾ ಪಡೆಗಳು ಸುಮಾರು 34 ಬಾರಿ ದಾಳಿ ನಡೆಸಿವೆ ಎಂದು ಅಸೋಸಿಯೇಟೆಡ್​ ಪ್ರೆಸ್​ನಲ್ಲಿ ವರದಿಯಾಗಿದೆ. ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಅವರು ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆಗೆ ಆದೇಶಿಸಿದ್ದರು. ನಮಗೆ ಉಕ್ರೇನ್ (Ukraine)​ ವಶಪಡಿಸಿಕೊಳ್ಳುವ ಇರಾದೆಯಿಲ್ಲ. ಉಕ್ರೇನ್​ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಉದ್ದೇಶ ಎಂದಿದ್ದರು. ಆದರೆ ಬರುಬರುತ್ತ ಸೇನಾ ಪಡೆಗಳು ಸಿಕ್ಕಸಿಕ್ಕಲ್ಲ ದಾಳಿ ನಡೆಸಿವೆ. ರಷ್ಯಾ ವಾರ್​ ಕ್ರೈಂ (ಯುದ್ಧಾಪರಾಧ) ನಡೆಸುತ್ತಿದೆ ಎಂದು ಉಕ್ರೇನ್​ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೂ ದೂರು ನೀಡಿತ್ತು.

ರಷ್ಯಾ ಸೇನೆಗಳು ಆಸ್ಪತ್ರೆಗಳನ್ನೂ ಬಿಟ್ಟಿಲ್ಲ ಎಂದೂ ಈ ಹಿಂದೆಯೂ ವರದಿಯಾಗಿತ್ತು. ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಕ್ಸಿ ಕೂಡ ಆರೋಪಿಸಿದ್ದರು. ರಷ್ಯಾ ಸೇನೆಗಳ ಆಕ್ರಮಣ ಮಿತಿಮೀರಿದೆ. ಆಸ್ಪತ್ರೆಗಳ ಹೆರಿಗೆ ಆಸ್ಪತ್ರೆಗಳ ಮೇಲೆ ಬಾಂಬ್​ ದಾಳಿ ಮಾಡುತ್ತಿದ್ದಾರೆ. ನಾಗರಿಕರ ವಸತಿ ಪ್ರದೇಶಗಳನ್ನೂ ಬಿಡುತ್ತಿಲ್ಲ. ಪತ್ರಕರ್ತರನ್ನೂ ಹತ್ಯೆ ಮಾಡುತ್ತಿದ್ದಾರೆ ಎಂದು ಎಪಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಯುದ್ಧ ಶುರುವಾದಾಗಿನಿಂದ ಇಲ್ಲಿಯವರೆಗೂ ಸಂಗ್ರಹಿಸಿದ ಡಾಟಾಗಳು, ಸ್ವತಂತ್ರವಾಗಿ ಮಾಡಿದ ತನಿಖೆಯ ಪ್ರಕಾರ, ರಷ್ಯಾ ಸೈನಿಕರು ಉಕ್ರೇನ್​ ಆಸ್ಪತ್ರೆಗಳ ಮೇಲೆ ಇದುವರೆಗೆ 34 ಬಾರಿ ದಾಳಿ ನಡೆಸಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ. ರಷ್ಯಾ ಯುದ್ಧ ಅಪರಾಧ ನಡೆಸುತ್ತಿದೆ ಎಂಬುದಕ್ಕೆ ಇವು ಸಾಕ್ಷಿಗಳಾಗಬಹುದು ಎಂದೂ ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಜೀವನ ನಡೆಸಲು, ನಿರಾಶ್ರಿತರು ವಾಸವಾಗಿರಲು ಕಟ್ಟಲಾದ ವಸತಿ ಕಟ್ಟಡಗಳೂ, ಸೌಕರ್ಯಗಳ ಮೇಲೆಲ್ಲ ದಾಳಿ ನಡೆಸಿ, ಅದನ್ನು ಹಾಳುಗೆಡವಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ ಎಂದೂ ಹೇಳಿದೆ.

ಇದನ್ನೂ ಓದಿ: ರಜೆಯನ್ನ ಯಾವ ರೀತಿಯಾಗಿ ಸದ್ಬಳಕೆ ಮಾಡಿಕೊಳ್ಬೇಕು ಗೊತ್ತಾ..! ಡಾ. ಸೌಜನ್ಯ ವಶಿಷ್ಟ ಹೇಳ್ತಾರೆ ಕೇಳಿ