Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿಗೆ ಕಸಿವಿಸಿ: ಉಕ್ರೇನ್​ ಯುದ್ಧದ ಹಿನ್ನೆಲೆ ಇಂಗ್ಲೆಂಡ್ ಪರ ರಿಷಿ ತೋರಿದ ಬದ್ಧತೆ ಏನು?

Rishi Sunak: ಇದಕ್ಕೆ ಉತ್ತರಿಸಿದ ರಿಷಿ ಸುನಕ್, ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ಏಕೆಂದರೆ ನನಗೆ ಆ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಸುನಕ್ ಹೇಳಿದರು. ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ಇನ್ಪೋಸಿಸ್‌, ರಷ್ಯಾ ಮತ್ತು ಉಕ್ರೇನ್ ನಡುವೆ "ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ" ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿಗೆ ಕಸಿವಿಸಿ: ಉಕ್ರೇನ್​ ಯುದ್ಧದ ಹಿನ್ನೆಲೆ ಇಂಗ್ಲೆಂಡ್ ಪರ  ರಿಷಿ ತೋರಿದ ಬದ್ಧತೆ ಏನು?
ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿಗೆ ಇಂಗ್ಲೆಂಡ್ ಮಾಧ್ಯಮಗಳು ಕೇಳಿದ ಪ್ರಶ್ನೆ ಏನು? ಉಕ್ರೇನ್​ ಯುದ್ಧದ ಹಿನ್ನೆಲೆ ಇಂಗ್ಲೆಂಡ್ ಪರ ರಿಷಿ ತೋರಿದ ಬದ್ಧತೆ ಏನು?
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Mar 25, 2022 | 3:00 PM

ಭಾರತದ ಖ್ಯಾತ ಸಾಫ್ಟವೇರ್ ಕಂಪನಿ ಇನ್ಫೋಸಿಸ್ ರಷ್ಯಾದಲ್ಲಿ ತನ್ನ ವ್ಯವಹಾರ ನಡೆಸುತ್ತಿರುವ ಬಗ್ಗೆ ಇನ್ಪೋಸಿಸ್ ಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ (NR Narayana murthy) ಅಳಿಯ ರಿಷಿ ಸುನಕ್‌ಗೆ (Rishi Sunak) ಇಂಗ್ಲೆಂಡ್ ನಲ್ಲಿ ಮಾಧ್ಯಮಗಳಿಂದ ಪ್ರಶ್ನೆಗಳು ಎದುರಾಗಿವೆ. ಈ ಪ್ರಶ್ನೆಗಳಿಗೆ ರಿಷಿ ಸುನಕ್ ಜಾಣ್ಮೆಯ ಉತ್ತರ ನೀಡಿದ್ದಾರೆ. ಜೊತೆಗೆ ಇನ್ಪೋಸಿಸ್ ಕಂಪನಿಯು ರಷ್ಯಾದಲ್ಲಿ ತಾನು ಬ್ಯುಸಿನೆಸ್ ನಡೆಸುತ್ತಿರುವ ಬಗ್ಗೆ ಸ್ಪಷ್ಟನೆಯನ್ನು ಸಹ ನೀಡಿದೆ. ಹಾಗಾದರೇ, ರಿಷಿ ಸುನಕ್ ಹೇಳಿದ್ದೇನು? ಇನ್ಪೋಸಿಸ್ ಉತ್ತರ ಏನು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ. ತಮ್ಮ ಪತ್ನಿ ಅಕ್ಷತಾ ಮೂರ್ತಿ ಪಾಲನ್ನು ಹೊಂದಿರುವ ಭಾರತೀಯ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ನ ರಷ್ಯಾದಲ್ಲಿ ಹೂಡಿಕೆ ಮಾಡಿ ಕಚೇರಿ ಹೊಂದಿರುವ ಕುರಿತು ಇಂಗ್ಲೆಂಡ್‌ನ ಹಣಕಾಸು ಸಚಿವ ರಿಷಿ ಸುನಕ್ ಗುರುವಾರ ಮಾಧ್ಯಮವೊಂದರಿಂದ ಪ್ರಶ್ನೆಗಳನ್ನು ಎದುರಿಸಿದರು. ರಿಷಿ ಸುನಾಕ್ ಭಾರತದ ಖ್ಯಾತ ಸಾಫ್ಟವೇರ್ ಕಂಪನಿ ಇನ್ಪೋಸಿಸ್ ಸ್ಥಾಪಕ ಎನ್‌.ಆರ್. ನಾರಾಯಣಮೂರ್ತಿ ಅವರ ಅಳಿಯ. ಭಾರತ ಮೂಲದ ರಿಷಿ ಸುನಕ್, ಸದ್ಯ ಇಂಗ್ಲೆಂಡ್‌ನ ಹಣಕಾಸು ಖಾತೆ ಮಂತ್ರಿಯಾಗಿದ್ದಾರೆ (Russia Ukraine War).

ರಷ್ಯಾದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿರುವುದನ್ನು ಉಲ್ಲೇಖಿಸಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಭಾರತೀಯ ಮೂಲದ ಹಣಕಾಸು ಸಚಿವರಿಗೆ ತಮ್ಮ ಸ್ವಂತ ದೇಶದಲ್ಲಿ ವ್ಯವಹಾರಗಳನ್ನು ನಡೆಸಲು ಸಲಹೆಯನ್ನು ಪಾಲಿಸುತ್ತಿಲ್ಲವೇ ಎಂದು ಪ್ರಶ್ನೆ ಕೇಳಲಾಯಿತು. ಪ್ರತ್ಯೇಕ ಕಂಪನಿಗಳ ಕಾರ್ಯಾಚರಣೆ ಅವರಿಗೆ ಸಂಬಂಧಿಸಿದ ವಿಷಯ ಎಂದು ಸಚಿವ ರಿಷಿ ಸುನಕ್ ಒತ್ತಿ ಹೇಳಿದರು.

ನೀವು ರಷ್ಯಾದೊಂದಿಗೆ ಕುಟುಂಬದ ಸಂಪರ್ಕವನ್ನು ಹೊಂದಿದ್ದೀರಿ ಎಂದು ವರದಿಯಾಗಿದೆ, ನಿಮ್ಮ ಪತ್ನಿ ಭಾರತೀಯ ಸಲಹಾ ಸಂಸ್ಥೆ ಇನ್ಫೋಸಿಸ್‌ನಲ್ಲಿ ಪಾಲನ್ನು ಹೊಂದಿದ್ದಾರೆಂದು ವರದಿಯಾಗಿದೆ ಎಂದು ‘ಸ್ಕೈ ನ್ಯೂಸ್’ ಟಿವಿ ಚಾನಲ್‌ ಸಂದರ್ಶನದಲ್ಲಿ ವರದಿಗಾರ ಹೇಳಿದರು. ಇಸ್ಪೋಸಿಸ್‌ ಮಾಸ್ಕೋದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ಅಲ್ಲಿ ಕಚೇರಿಯನ್ನು ಹೊಂದಿದ್ದಾರೆ, ಅವರಿಗೆ ಅಲ್ಲಿ ವಿತರಣಾ ಕಚೇರಿ ಇದೆ. ಅವರು ಮಾಸ್ಕೋದಲ್ಲಿರುವ ಆಲ್ಫಾ ಬ್ಯಾಂಕ್‌ಗೆ ಸಂಪರ್ಕವನ್ನು ಹೊಂದಿದ್ದಾರೆ. ನಿಮ್ಮ ಸ್ವಂತ ದೇಶದಲ್ಲಿ ನೀವು ವ್ಯವಹಾರ ಮಾಡುತ್ತಿಲ್ಲ ಎಂದು ನೀವು ಇತರರಿಗೆ ಸಲಹೆ ನೀಡುತ್ತೀರಾ? ” ಎಂದು ರಿಷಿ ಪ್ರಶ್ನಿಸಿದರು.

ರಿಷಿ ಸುನಕ್ ಅವರು ತಾವು ಚುನಾಯಿತ ರಾಜಕಾರಣಿಯಾಗಿದ್ದು, ಜವಾಬ್ದಾರಿಯುತವಾಗಿ ಉತ್ತರ ನೀಡುತ್ತಿದ್ದೇನೆ ಎಂದು ಸಂದರ್ಶನಕಾರರಿಗೆ ಹೇಳಿದರು. ಆದರೆ, ತಮ್ಮಂತೆ ತಮ್ಮ ಪತ್ನಿ ಅಕ್ಷತಾ ಚುನಾಯಿತ ರಾಜಕಾರಣಿ ಅಲ್ಲ ಎಂದು ರಿಷಿ ಸುನಕ್ ಹೇಳಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಡಳಿತದಿಂದ ತಮ್ಮ ಕುಟುಂಬವು “ಸಂಭಾವ್ಯವಾಗಿ ಲಾಭ ಪಡೆಯುತ್ತಿದೆಯೇ” ಎಂದು ಕೇಳಿದ್ದಕ್ಕೆ ಉತ್ತರಿಸಿದ ರಿಷಿ ಸುನಕ್‌ ಅದು ಹಾಗಲ್ಲ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಹೇಳಿದಂತೆ ಎಲ್ಲಾ ಕಂಪನಿಗಳ ಕಾರ್ಯಾಚರಣೆಗಳು ಅವರಿಗೆ ಬಿಟ್ಟದ್ದು ಎಂದು ರಿಷಿ ಸುನಕ್ ಖಡಕ್ಕಾಗಿ ಹೇಳಿದ್ದಾರೆ.

ನಾವು ಮಹತ್ವದ ನಿರ್ಬಂಧಗಳನ್ನು ಹಾಕಿದ್ದೇವೆ ಮತ್ತು ನಾವು ಜವಾಬ್ದಾರರಾಗಿರುವ ಎಲ್ಲಾ ಕಂಪನಿಗಳು ಅವುಗಳನ್ನು ಸರಿಯಾಗಿ ಅನುಸರಿಸುತ್ತಿವೆ, ಪುಟಿನ್ ಅವರ ಆಕ್ರಮಣಶೀಲತೆಗೆ ಬಲವಾದ ಸಂದೇಶವನ್ನು ಕಳುಹಿಸುತ್ತೇವೆ. ಇಂಗ್ಲೆಂಡ್ ನಲ್ಲೂ ವ್ಯವಹಾರ ಹೊಂದಿರುವ ಇನ್ಫೋಸಿಸ್ ಇದೇ ರೀತಿಯ “ಬಲವಾದ ಸಂದೇಶವನ್ನು” ಕಳುಹಿಸುತ್ತಿದೆಯೇ ಎಂದು ರಿಷಿ ಸುನಕ್ ಅವರನ್ನು ಸಂದರ್ಶನಕಾರರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರಿಷಿ ಸುನಕ್, ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ಏಕೆಂದರೆ ನನಗೆ ಆ ಕಂಪನಿಯೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಸುನಕ್ ಹೇಳಿದರು. ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ಇನ್ಪೋಸಿಸ್‌, ರಷ್ಯಾ ಮತ್ತು ಉಕ್ರೇನ್ ನಡುವೆ “ಶಾಂತಿಯನ್ನು ಬೆಂಬಲಿಸುತ್ತದೆ ಮತ್ತು ಪ್ರತಿಪಾದಿಸುತ್ತದೆ” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ಫೋಸಿಸ್ ರಷ್ಯಾದ ಮೂಲದ ಉದ್ಯೋಗಿಗಳ ಸಣ್ಣ ತಂಡವನ್ನು ಹೊಂದಿದೆ, ಅದು ನಮ್ಮ ಕೆಲವು ಜಾಗತಿಕ ಗ್ರಾಹಕರಿಗೆ ಸ್ಥಳೀಯವಾಗಿ ಸೇವೆ ಸಲ್ಲಿಸುತ್ತದೆ. ನಾವು ಸ್ಥಳೀಯ ರಷ್ಯಾದ ಉದ್ಯಮಗಳೊಂದಿಗೆ ಯಾವುದೇ ಸಕ್ರಿಯ ವ್ಯಾಪಾರ ಸಂಬಂಧವನ್ನು ಹೊಂದಿಲ್ಲ ಎಂದು ಇನ್ಪೋಸಿಸ್ ಕಂಪನಿಯು ಹೇಳಿದೆ. “ಪ್ರತಿಕೂಲ ಸಮಯದಲ್ಲಿ ಇನ್ಫೋಸಿಸ್‌ಗೆ ಪ್ರಮುಖ ಆದ್ಯತೆಯೆಂದರೆ, ಸಮುದಾಯಕ್ಕೆ ಬೆಂಬಲವನ್ನು ವಿಸ್ತರಿಸುವುದು. ಕಂಪನಿಯು ಉಕ್ರೇನ್‌ನಿಂದ ಯುದ್ಧದ ಸಂತ್ರಸ್ತರಿಗೆ ಪರಿಹಾರ ಪ್ರಯತ್ನಗಳಿಗಾಗಿ USD 1 ಮಿಲಿಯನ್ ನೀಡಲು ಬದ್ಧವಾಗಿದೆ.

ಇಂಗ್ಲೆಂಡ್, ಸದ್ಯ ರಷ್ಯಾದ ವ್ಯವಹಾರಗಳು ಮತ್ತು ವ್ಯಕ್ತಿಗಳ ಮೇಲೆ ವ್ಯಾಪಕವಾದ ನಿರ್ಬಂಧಗಳನ್ನು ವಿಧಿಸಿದೆ, ನಡೆಯುತ್ತಿರುವ ಉಕ್ರೇನಿಯನ್ ಸಂಘರ್ಷದ ಕುರಿತು ರಷ್ಯಾದಲ್ಲಿ ಯಾವುದೇ ಹೂಡಿಕೆಗಳ ಬಗ್ಗೆ “ಬಹಳ ಎಚ್ಚರಿಕೆಯಿಂದ ಯೋಚಿಸಲು” ಎಲ್ಲಾ UK ಕಂಪನಿಗಳಿಗೆ ಸುನಕ್ ಕರೆ ನೀಡಿದರು. ರಷ್ಯಾದಲ್ಲಿ ತಮ್ಮ ಹೂಡಿಕೆಗಳ ಬಗ್ಗೆ ಮತ್ತು ಅವರು ಪುಟಿನ್ ಆಡಳಿತಕ್ಕೆ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಬಹಳ ಎಚ್ಚರಿಕೆಯಿಂದ ಯೋಚಿಸಲು ನಾನು ಸಂಸ್ಥೆಗಳನ್ನು ಒತ್ತಾಯಿಸುತ್ತಿದ್ದೇನೆ. ರಷ್ಯಾದಲ್ಲಿ ಹೊಸ ಹೂಡಿಕೆಗೆ ಯಾವುದೇ ಪ್ರಕರಣವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಗರಿಷ್ಠ ಆರ್ಥಿಕ ನೋವನ್ನು ಉಂಟುಮಾಡಲು ಮತ್ತು ಮತ್ತಷ್ಟು ರಕ್ತಪಾತವನ್ನು ನಿಲ್ಲಿಸಲು ನಾವು ಒಟ್ಟಾಗಿ ನಮ್ಮ ಕಾರ್ಯಾಚರಣೆಯಲ್ಲಿ ಮುಂದುವರಿಯಬೇಕು ಎಂದು ಈ ತಿಂಗಳ ಆರಂಭದಲ್ಲಿ ರಿಷಿ ಸುನಕ್ ಹೇಳಿದ್ದರು.

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!