ಸೈಬೀರಿಯಾ ಜುಲೈ 27:ರಷ್ಯಾದ (Russia) ಸೈಬೀರಿಯಾದಲ್ಲಿ (Siberia) ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ (chopper crash) ಆರು ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಎಂಐ-8 ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡು ದಕ್ಷಿಣ ಸೈಬೀರಿಯಾದ ಅಲ್ಟಾಯ್ ರಿಪಬ್ಲಿಕ್ ನಲ್ಲಿ ಪತನ ಆಗಿದೆ ಎಂದು ನ್ಯೂಸ್ 9 ವರದಿ ಮಾಡಿದೆ. ಹೆಲಿಕಾಪ್ಟರ್ ಜೋರಾಗಿ ಸಿಡಿದು ಬೆಂಕಿ ಹೊತ್ತಿಕೊಂಡಿತು ಎಂದು ರಷ್ಯಾದ ತುರ್ತು ಸಚಿವಾಲಯದ ಅಲ್ಟಾಯ್ ಶಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಹೆಲಿಕಾಪ್ಟರ್ ಅಪಘಾತಕ್ಕೀಡಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಾಸಗಿ ಕಂಪನಿಯೊಂದರ ಹೆಲಿಕಾಪ್ಟರ್ ಪ್ರವಾಸಿಗರ ಗುಂಪನ್ನು ಹೊತ್ತೊಯ್ಯುತ್ತಿತ್ತು ಎಂದು ರಷ್ಯಾದ ಸುದ್ದಿ ಸಂಸ್ಥೆ RIA ನೊವೊಸ್ಟಿಯನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್‌ನ ವರದಿ ತಿಳಿಸಿದೆ.
ಚಾಪರ್‌ನಲ್ಲಿ ಮೂವರು ಸಿಬ್ಬಂದಿ ಸೇರಿದಂತೆ 15 ಪ್ರಯಾಣಿಕರು ಇದ್ದರು ಎಂದು ಆರ್‌ಐಎ ನೊವೊಸ್ಟಿ ವರದಿ ಮಾಡಿದೆ. ಆದಾಗ್ಯೂ, ಅಲ್ಟಾಯ್ ತುರ್ತು ಸಚಿವಾಲಯವು ಅದರಲ್ಲಿ 13 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಿದೆ.
ಇದನ್ನೂ ಓದಿ: ಭಾರತದ ರಫ್ತು ನಿಷೇಧದಿಂದಾಗಿ ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದ ಜನ; ಮೂರು ಪಟ್ಟು ಏರಿದ ಬೆಲೆ
Mi-8 ಒಂದು ಅವಳಿ-ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಮೂಲತಃ ರಷ್ಯಾದಿಂದ 1960 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ರಷ್ಯಾ ಮತ್ತು ಇತರ ವಿದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Thu, 27 July 23