ಕೀವ್: ರಷ್ಯಾ-ಉಕ್ರೇನ್ (Russia-Ukraine) ಮಧ್ಯೆ ಯುದ್ಧ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದ್ದು, ಇಂದು (ಜೂನ್ 27) ರಷ್ಯಾ, ಪೂರ್ವ ಉಕ್ರೇನ್ನ (East Ukraine) ನಗರವಾದ ಕ್ರೆಮೆನ್‌ಚುಕ್‌ನಲ್ಲಿರುವ ಮಾಲ್ ಒಂದರ ಮೇಲೆ ಕ್ಷಿಪಣಿ ದಾಳಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ (volodymyr zelensky) ಹೇಳಿದ್ದಾರೆ. ದಾಳಿಯ ವೇಳೆ 1,000 ಕ್ಕೂ ಹೆಚ್ಚು ಜನರು ಶಾಪಿಂಗ್ ಮಾಲ್ (Shopping Mall) ನಲ್ಲಿದ್ದರು ಎಂದು ಅವರು ಹೇಳಿದ್ದಾರೆ. ಆದರೆ ಸಾವುನೋವುಗಳ ವಿವರಗಳನ್ನು ನೀಡಲಿಲ್ಲ. “ರಷ್ಯಾದಿಂದ ಸಭ್ಯತೆಯ ನಡೆ ಮತ್ತು ಮಾನವೀಯತೆಯನ್ನು ನಿರೀಕ್ಷಿಸುವುದು ಅಸಾಧ್ಯ ” ಎಂದು ಝೆಲೆನ್ಸ್ಕಿ ಟೆಲಿಗ್ರಾಮ್ನಲ್ಲಿ ಬರೆದಿದ್ದಾರೆ.