ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ

ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗೆ ಮುಂಚಿತವಾಗಿ ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ ಪ್ರಮುಖ ದಾಳಿಯನ್ನು ಪ್ರಾರಂಭಿಸಿದೆ. ಸುಮಾರು 500 ಡ್ರೋನ್‌ಗಳು ಮತ್ತು 40 ಕ್ಷಿಪಣಿಗಳನ್ನು ಒಳಗೊಂಡ ಇತ್ತೀಚಿನ ದಾಳಿಯಲ್ಲಿ ರಾಜಧಾನಿ ಕೈವ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ 19 ಜನರು ಗಾಯಗೊಂಡಿದ್ದಾರೆ.

ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ
ದಾಳಿ-ಸಾಂದರ್ಭಿಕ ಚಿತ್ರ
Image Credit source: India TV

Updated on: Dec 28, 2025 | 8:39 AM

ಕೈವ್, ಡಿಸೆಂಬರ್ 28: ಉಕ್ರೇನ್‌(Ukraine)ನ ರಾಜಧಾನಿಯಲ್ಲಿ ರಷ್ಯಾ ಶನಿವಾರ ತೀವ್ರ ದಾಳಿ ನಡೆಸಿದ್ದು, ಓರ್ವ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶಾಂತಿ ಮಾತುಕತೆ ನಡೆಯುವ ಒಂದು ದಿನದ ಮೊದಲು ಇದು ಸಂಭವಿಸಿದೆ.

ಮುಂಜಾನೆ ದಾಳಿ ಪ್ರಾರಂಭವಾಗಿ ಗಂಟೆಗಳ ಕಾಲ ಮುಂದುವರೆದಿತ್ತು ಕೈವ್‌ನಾದ್ಯಂತ ಪ್ರಬಲ ಸ್ಫೋಟಗಳು ಸಂಭವಿಸಿವೆ. ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ನಡೆಸಿದೆ.
ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂದು ಫ್ಲೋರಿಡಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ, ಯುದ್ಧವು ಈಗ ನಾಲ್ಕನೇ ವರ್ಷವನ್ನು ಸಮೀಪಿಸುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್‌ಗೆ ದೀರ್ಘಾವಧಿಯ ಭದ್ರತಾ ಭರವಸೆಗಳು ವಿವಾದಿತ ಪ್ರದೇಶಗಳ ಭವಿಷ್ಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಚರ್ಚೆಗಳು ಒಳಗೊಂಡಿರುತ್ತವೆ ಎಂದು ಹೇಳಿದರು. ಈ ದಾಳಿಯು ನಮ್ಮ ಶಾಂತಿ ಪ್ರಯತ್ನಗಳಿಗೆ ರಷ್ಯಾದ ಉತ್ತರವಾಗಿದೆ, ಪುಟಿನ್ ಅವರಿಗೆ ಶಾಂತಿ ಬೇಕಾಗಿಲ್ಲ ಎಂದು ಇದು ನಿಜವಾಗಿಯೂ ತೋರಿಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಮತ್ತಷ್ಟು ಓದಿ: ಉಕ್ರೇನ್​​ ಮೇಲಿನ ಯುದ್ಧಕ್ಕೆ ಭಾರತ-ಚೀನಾ ಮುಖ್ಯ ಹೂಡಿಕೆದಾರರು; ವಿಶ್ವಸಂಸ್ಥೆಯಲ್ಲಿ ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಉಕ್ರೇನ್‌ಗೆ 1.8 ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ಕೆನಡಾ ಪ್ರಧಾನಿ ಕಾರ್ನಿ ಘೋಷಿಸಿದ್ದಾರೆ, ಇದು ಕೈವ್‌ನೊಂದಿಗೆ ನಿಲ್ಲುವ ಸಮಯ ಎಂದು ಹೇಳಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು.ಈ ದಾಳಿಯಲ್ಲಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ.

ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗೆ ಮುಂಚಿತವಾಗಿ ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ ಪ್ರಮುಖ ದಾಳಿಯನ್ನು ಪ್ರಾರಂಭಿಸಿದೆ. ಸುಮಾರು 500 ಡ್ರೋನ್‌ಗಳು ಮತ್ತು 40 ಕ್ಷಿಪಣಿಗಳನ್ನು ಒಳಗೊಂಡ ಇತ್ತೀಚಿನ ದಾಳಿಯಲ್ಲಿ ರಾಜಧಾನಿ ಕೈವ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ 19 ಜನರು ಗಾಯಗೊಂಡಿದ್ದಾರೆ.

ಈ ದಾಳಿಯ ನಂತರ, ಉಕ್ರೇನ್‌ನ ನೆರೆಯ ದೇಶವಾದ ಪೋಲೆಂಡ್, ಗಡಿಯ ಸಮೀಪವಿರುವ ತನ್ನ ಎರಡು ವಿಮಾನ ನಿಲ್ದಾಣಗಳನ್ನು ಮುಚ್ಚಿತು ಮತ್ತು ತನ್ನ ವಾಯುಪಡೆಯನ್ನು ಜಾಗರೂಕತೆಯಿಂದ ಇರಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ