
ವಾಷಿಂಗ್ಟನ್, ಆಗಸ್ಟ್ 19: ಈಗ ಎಲ್ಲರ ಚಿತ್ತ ಮೂರು ರಾಷ್ಟ್ರಗಳ ಮೇಲಿದೆ. ರಷ್ಯಾ-ಉಕ್ರೇನ್ ಯುದ್ಧ ಶೀಘ್ರ ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಘೋಷಣೆ ಮಾಡಿದ್ದಾರೆ. ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಜತೆ ನಡೆಸಿದ ಮಾತುಕತೆ ಬಳಿಕ ಈ ಘೋಷಣೆ ಮಾಡಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಜಗತ್ತಿನ ಕಣ್ಣುಗಳು ಅಮೆರಿಕ, ರಷ್ಯಾ ಮತ್ತು ಉಕ್ರೇನ್‌ನತ್ತ ನೆಟ್ಟಿವೆ. ಏಕೆಂದರೆ ರಷ್ಯಾ ಮತ್ತು ಉಕ್ರೇನ್ ನಡುವಿನ ಮೂರು ವರ್ಷಗಳ ಸಂಘರ್ಷವನ್ನು ಕೊನೆಗೊಳಿಸುವ ಗುರಿಯೊಂದಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲು ಅಲಾಸ್ಕಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದರು.
ಇದರ ನಂತರ, ಸೋಮವಾರ, ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶ್ವೇತಭವನದಲ್ಲಿ ಭೇಟಿಯಾದರು. ಈ ಸಭೆಯ ನಂತರ, ಟ್ರಂಪ್ ಎರಡೂ ದೇಶಗಳ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಶಾಂತಿ ಮಾತುಕತೆ ನಡೆಸಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಸದಾ ನಮ್ಮ ಜನರು ಟ್ರಂಪ್ಗೆ ಕೃತಜ್ಞರಾಗಿರಬೇಕು: ಅಮೆರಿಕ ಅಧ್ಯಕ್ಷರ ಭೇಟಿಗೂ ಮುನ್ನ ಝೆಲೆನ್ಸ್ಕಿ ಹೇಳಿದ್ದೇನು?
ಎರಡೂ ದೇಶಗಳು ಶಾಂತಿ ಮಾತುಕತೆಗೆ ಸಿದ್ಧ
ಶ್ವೇತಭವನದಲ್ಲಿ ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿಯನ್ನು ಭೇಟಿಯಾದ ನಂತರ ಟ್ರಂಪ್ ಈ ಮಾಹಿತಿಯನ್ನು ನೀಡಿದರು. ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಶಾಂತಿ ಮಾತುಕತೆ ನಡೆಯಲಿದೆ. ಆದರೆ ಸ್ಥಳವನ್ನು ಇನ್ನೂ ನಿಶ್ಚಯಿಸಲಾಗಿಲ್ಲ. ಇದರ ನಂತರ ಟ್ರಂಪ್ ಇಬ್ಬರೂ ನಾಯಕರೊಂದಿಗೆ ತ್ರಿಪಕ್ಷೀಯ ಶೃಂಗಸಭೆಯನ್ನು ನಡೆಸಲಿದ್ದಾರೆ.
ರಷ್ಯಾ-ಉಕ್ರೇನ್‌ನಲ್ಲಿ ಶಾಂತಿಯ ಸಾಧ್ಯತೆಯ ಬಗ್ಗೆ ಎಲ್ಲರೂ ತುಂಬಾ ಉತ್ಸುಕರಾಗಿದ್ದಾರೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಸೈಟ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದಾರೆ. ಮೂಲವೊಂದು ಪುಟಿನ್ ಕೂಡ ಝೆಲೆನ್ಸ್ಕಿಯನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ.
ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಸಂಭಾಷಣೆಯನ್ನು ಇದುವರೆಗಿನ ಅತ್ಯುತ್ತಮ ಮತ್ತು ಸಕಾರಾತ್ಮಕ ಸಂಭಾಷಣೆ ಎಂದು ಝೆಲೆನ್ಸ್ಕಿ ಬಣ್ಣಿಸಿದ್ದಾರೆ. ಈ ಸಭೆಯಲ್ಲಿ, ಉಕ್ರೇನ್‌ಗೆ ನೀಡಬೇಕಾದ ಭದ್ರತಾ ಖಾತರಿಯ ಕುರಿತು ಇಬ್ಬರು ನಾಯಕರ ನಡುವೆ ಮಹತ್ವದ ಚರ್ಚೆ ನಡೆದಿದೆ ಎಂದು ಅವರು ಹೇಳಿದರು.
ಸಭೆಗೂ ಮುನ್ನ ಟ್ರಂಪ್ ಏನು ಹೇಳಿದ್ದರು?
ಸಭೆಗೂ ಸ್ವಲ್ಪ ಸಮಯದ ಮೊದಲು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಝಲೆನ್ಸ್ಕಿ ಒಪ್ಪಂದಕ್ಕೆ ಸಿದ್ಧರಿದ್ದ ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬಹುದು ಎಂದು ಬರೆದಿದ್ದರು.ಉಕ್ರೇನ್ ಕ್ರೈಮಿಯಾವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಅಥವಾ NATOಗೆ ಸೇರಲು ಸಾಧ್ಯವಿಲ್ಲ ಎಂದು ಟ್ರಂಪ್ ಸ್ಪಷ್ಟವಾಗಿ ಸೂಚಿಸಿದ್ದಾರೆ.
ಕೆಲವು ವಿಷಯಗಳು ಎಂದಿಗೂ ಬದಲಾಗುವುದಿಲ್ಲ.ಎಲ್ಲರೂ ಯುದ್ಧವನ್ನು ತ್ವರಿತವಾಗಿ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಬಯಸುತ್ತಾರೆ, ಆದರೆ ಶಾಂತಿ ತಾತ್ಕಾಲಿಕವಾಗಿರಬಾರದು ಆದರೆ ಸುಸ್ಥಿರವಾಗಿರಬೇಕು.ಕ್ರೈಮಿಯಾ ಮತ್ತು ಡಾನ್ಬಾಸ್‌ನಂತೆ ರಷ್ಯಾ ಮತ್ತೊಮ್ಮೆ ದಾಳಿ ಮಾಡುವ ಅವಕಾಶ ಪಡೆಯಬಾರದು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 am, Tue, 19 August 25