ಉಕ್ರೇನಿಯನ್ ನಗರಗಳ ಮೇಲೆ ರಷ್ಯಾ(Russia)ದ ದಾಳಿ ಮುಂದುವರೆದಿದೆ. ಇದು ಬುಧವಾರ ಉತ್ತರ ಉಕ್ರೇನ್(Ukraine) ನಗರವಾದ ಚೆರ್ನಿಹಿವ್ ಅನ್ನು ಗುರಿಯಾಗಿಸಿಕೊಂಡಿದೆ. ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 17 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಮಕ್ಕಳು ಸೇರಿದಂತೆ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ನಾಗರಿಕ ಮೂಲಸೌಕರ್ಯ ಮತ್ತು ಆಸ್ಪತ್ರೆಗೆ ಹಾನಿಯಾಗಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪಾಶ್ಚಿಮಾತ್ಯ ದೇಶಗಳಿಗೆ ದಾಳಿಯ ಗಂಟೆಗಳ ನಂತರ ಶಸ್ತ್ರಾಸ್ತ್ರಗಳನ್ನು ಪೂರೈಸಲು ಕರೆ ನೀಡಿದರು.
ಚೆರ್ನಿವ್‌ನ ಹಂಗಾಮಿ ಮೇಯರ್ ಒಲೆಕ್ಸಾಂಡರ್ ಲೋಮಿಕೊ ಅವರು ಬುಧವಾರ ಬೆಳಿಗ್ಗೆ 9 ಗಂಟೆಯ ನಂತರ ನಗರದ ಜನನಿಬಿಡ ಪ್ರದೇಶದಲ್ಲಿ ಮೂರು ಪ್ರಬಲ ಸ್ಫೋಟಗಳು ಸಂಭವಿಸಿವೆ ಎಂದು ಹೇಳಿದರು. ಇದರಿಂದಾಗಿ ಬಹುಮಹಡಿ ಕಟ್ಟಡ ಕುಸಿದಿದೆ.
ಮತ್ತಷ್ಟು ಓದಿ: Israel Iran War: ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ
ದಾಳಿಯಲ್ಲಿ ರಷ್ಯಾ ಮೂರು ಇಸ್ಕಾಂಡರ್ ಕ್ರೂಸ್ ಕ್ಷಿಪಣಿಗಳನ್ನು ಬಳಸಿದೆ ಎಂದು ಹೇಳಿದರು. ನಮ್ಮ ವಿದ್ಯುತ್ ಸ್ಥಾವರಗಳ ಮೇಲೆ ರಷ್ಯಾದ ಇತ್ತೀಚಿನ ವಾಯು ದಾಳಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ ಏಕೆಂದರೆ ನಮ್ಮಲ್ಲಿ ಕ್ಷಿಪಣಿಗಳಿಲ್ಲ ಎಂದರು.
ಉಕ್ರೇನ್ನಲ್ಲಿ ವಾಯುರಕ್ಷಣಾ ವ್ಯವಸ್ಥೆಯ ಕೊರತೆ ಇರುವುದರಿಂದ ರಷ್ಯಾದ ಮೂರು ಕ್ಷಿಪಣಿಗಳನ್ನು ತುಂಡರಿಸಲು ಸಾಧ್ಯವಾಗಲಿಲ್ಲ, ಬೇರೆ ದೇಶಗಳ ನೆರವು ತಕ್ಷಣ ದೊರೆತಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಟ್ರಿಪಿಲ್ಸ್ಕಾ ವಿದ್ಯುತ್ ಸ್ಥಾವರವನ್ನು ಗುರಿಯಾಗಿಟ್ಟುಕೊಂಡು ರಷ್ಯಾ 11 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅವರು ಹೇಳಿದರು. ನಾವು ಮೊದಲ ಏಳು ಕ್ಷಿಪಣಿಗಳನ್ನು ನಾಶಪಡಿಸಿದ್ದೇವೆ, ಆದರೆ ನಂತರದ ಕ್ಷಿಪಣಿಗಳು ಎಲ್ಲವನ್ನು ಸಂಪೂರ್ಣವಾಗಿ ನಾಶಪಡಿಸಿದವು.
ಬೆಲಾರಸ್ನ ಗಡಿಗೆ ಹತ್ತಿರದಲ್ಲಿರುವ ಚೆರ್ನಿಗಿವ್ ಪ್ರಾಂತ್ಯದ ಸ್ವಲ್ಪ ಭಾಗವನ್ನು ರಷ್ಯಾ ಈ ಮೊದಲೇ ಆಕ್ರಮಿಸಿಕೊಂಡಿತ್ತು. ಉಕ್ರೇನ್ ತೀವ್ರ ಪ್ರತಿರೋಧದ ಬಳಿಕ ಅಲ್ಲಿಂದ ಕಾಲ್ಕಿತ್ತಿತ್ತು. ಬಹುಮಹಡಿ ಕಟ್ಟಡಗಳು, ವಾಹನಗಳು, ಮೂಲಸೌಕರ್ಯಕ್ಕೆ ಧಕ್ಕೆಯಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ