ಶನಿವಾರ ವೊರೊನೆಜ್ ನಗರದ ಹೊರಗಿನ M4 ಹೆದ್ದಾರಿಯಲ್ಲಿ ವ್ಯಾಗ್ನರ್ ಮಿಲಿಟರಿ ( Wagner mercenary) ಬೆಂಗಾವಲು ಪಡೆಯ ಮೇಲೆ ರಷ್ಯಾ ಸೇನಾ (Russian Army) ಹೆಲಿಕಾಪ್ಟರ್‌ಗಳು ಗುಂಡು ಹಾರಿಸಿವೆ ಎಂದು ವರದಿಯಾಗಿದೆ. ರೋಸ್ಟೊವ್‌ನಿಂದ ಮಾಸ್ಕೋಗೆ (Moscow) ನಡುವಿನ 1,100-ಕಿಮೀ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ತೈಲ ಡಿಪೋದಲ್ಲಿ ಉರಿಯುತ್ತಿರುವ ಇಂಧನ ಟ್ಯಾಂಕ್ ಅನ್ನು ನಂದಿಸಲು ತುರ್ತು ಸೇವೆಗಳು ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವೊರೊನೆಜ್ ಪ್ರದೇಶದ ಗವರ್ನರ್ ಹೇಳಿದ ಸ್ವಲ್ಪ ಸಮಯದ ನಂತರ ಈ ಘಟನೆ ವರದಿ ಆಗಿದೆ. ಪ್ರಸ್ತುತ ಸ್ಥಳದಲ್ಲಿ 100 ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮತ್ತು 30 ಯುನಿಟ್ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯಪಾಲ ಅಲೆಕ್ಸಾಂಡರ್ ಗುಸೆವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ರಷ್ಯಾದ ಭದ್ರತಾ ಮೂಲವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ಮಾಸ್ಕೋದಿಂದ ಸುಮಾರು 500 ಕಿಮೀ ದಕ್ಷಿಣದಲ್ಲಿರುವ ವೊರೊನೆಜ್ ನಗರದಲ್ಲಿನ ಮಿಲಿಟರಿ ಸೌಲಭ್ಯಗಳನ್ನು ವ್ಯಾಗ್ನರ್ ಹೋರಾಟಗಾರರು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಇದನ್ನು ದೃಢೀಕರಿಸಲಾಗಿಲ್ಲ.
Russian military helicopters are bombing fuel depots held by the Wagner Group in the Voronezh region. #WagnerCoup #WagnerGroup #Russia #Putin pic.twitter.com/g0FF5lHFLN
— Paul Golding (@GoldingBF) June 24, 2023
ಇದನ್ನೂ ಓದಿ: ಇದು ರಷ್ಯಾಕ್ಕೆ ಮಾಡಿದ ದೇಶದ್ರೋಹ: ವ್ಯಾಗ್ನರ್ ಗ್ರೂಪ್ ವಿರುದ್ಧ ವ್ಲಾಡಿಮಿರ್ ಪುಟಿನ್ ವಾಗ್ದಾಳಿ
ರಷ್ಯಾದ ಸಂಪೂರ್ಣ ಆಕ್ರಮಣ ಪಡೆಗೆ ವ್ಯವಸ್ಥಾಪನಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ರೋಸ್ಟೊವ್‌ನಲ್ಲಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಯುದ್ಧ ಟ್ಯಾಂಕ್‌ಗಳಲ್ಲಿ ವ್ಯಾಗ್ನರ್ ಹೋರಾಟಗಾರರು ಇರುವುದನ್ನು ಅಲ್ಲಿನ ನಿವಾಸಿಗಳು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದರು.
ಮಾಸ್ಕೋ ಬೀದಿಗಳಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜಿಸಿದ್ದು, ರೆಡ್ ಸ್ಕ್ವೇರ್ ನ್ನು ಲೋಹದ ಬ್ಯಾರಿಯರ್ನಿಂದ ತಡೆಯೊಡ್ಡಲಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sat, 24 June 23