ಉಕ್ರೇನ್‌ ಮೇಲೆ ರಷ್ಯಾದ ಡ್ರೋನ್ ದಾಳಿಯಲ್ಲಿ 3 ಜನ ಸಾವು, 64 ಜನರಿಗೆ ಗಾಯ

ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ, 64 ಜನರಿಗೆ ಗಾಯವಾಗಿದೆ. ಖಾರ್ಕಿವ್‌ನಲ್ಲಿ ಅತ್ಯಂತ ಭೀಕರ ಹಾನಿಯಾಗಿದೆ. ಉಕ್ರೇನಿಯನ್ ವಾಯುಪಡೆಯು ತನ್ನ ದೇಶದ ಮೇಲೆ ರಷ್ಯಾ 85 ಡ್ರೋನ್‌ಗಳನ್ನು ಹಾರಿಸಿದೆ ಎಂದು ಹೇಳಿದೆ. ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆಗಳು ಅವುಗಳಲ್ಲಿ 40 ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದವು.

ಉಕ್ರೇನ್‌ ಮೇಲೆ ರಷ್ಯಾದ ಡ್ರೋನ್ ದಾಳಿಯಲ್ಲಿ 3 ಜನ ಸಾವು, 64 ಜನರಿಗೆ ಗಾಯ
Kharkiv Attack

Updated on: Jun 11, 2025 | 8:21 PM

ಕೈವ್, ಜೂನ್ 11: ನಿನ್ನೆ ರಾತ್ರಿ ರಷ್ಯಾದ ಸೇನಾ ಪಡೆಗಳು ಉಕ್ರೇನ್‌ನಾದ್ಯಂತ ಡ್ರೋನ್ ದಾಳಿಯನ್ನು ನಡೆಸಿದವು. ಅದರಿಂದ 3 ಜನರು ಸಾವನ್ನಪ್ಪಿದ್ದು, 64 ಜನರು ಗಾಯಗೊಂಡರು ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ಉಕ್ರೇನ್‌ನ ಖಾರ್ಕಿವ್ ನಗರವು ಹೆಚ್ಚಿನ ದಾಳಿಯನ್ನು ಅನುಭವಿಸಿತು. 17 ಡ್ರೋನ್‌ಗಳು ಎರಡು ಜನನಿಬಿಡ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡವು. ತುರ್ತು ಸಿಬ್ಬಂದಿ, ಪುರಸಭೆಯ ಕಾರ್ಮಿಕರು ಮತ್ತು ಸ್ವಯಂಸೇವಕರು ಬೆಂಕಿಯನ್ನು ನಂದಿಸಲು, ದಾಳಿಯಲ್ಲಿ ಸಿಕ್ಕಿಬಿದ್ದ ನಿವಾಸಿಗಳನ್ನು ರಕ್ಷಿಸಲು ವಿದ್ಯುತ್, ನೀರು ಮತ್ತು ಅನಿಲದಂತಹ ಅಗತ್ಯ ಸೇವೆಗಳನ್ನು ಪುನಃಸ್ಥಾಪಿಸಲು ರಾತ್ರಿಯಿಡೀ ಕೆಲಸ ಮಾಡಿದ್ದಾರೆ.

ಖಾರ್ಕಿವ್‌ನ ಪ್ರಾದೇಶಿಕ ಮುಖ್ಯಸ್ಥ ಒಲೆಹ್ ಸಿನಿಹುಬೊವ್ ಸಾವಿನ ಸಂಖ್ಯೆಯನ್ನು ದೃಢಪಡಿಸಿದರು. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ವಿರುದ್ಧ ಬಲವಾದ ಅಂತಾರಾಷ್ಟ್ರೀಯ ಕ್ರಮಕ್ಕಾಗಿ ತಮ್ಮ ಕರೆಯನ್ನು ಪುನರುಚ್ಚರಿಸಿದರು. “ಪ್ರತಿದಿನ ರಷ್ಯಾ ಹೊಸ ದಾಳಿಯನ್ನು ನಡೆಸುತ್ತಿದೆ” ಎಂದು ಝೆಲೆನ್ಸ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ರಷ್ಯಾವನ್ನು ತಡೆಯಬಹುದಾದ ನಿರ್ಧಾರಗಳನ್ನು ವಿಳಂಬ ಮಾಡುವುದನ್ನು ಜಗತ್ತು ನಿಲ್ಲಿಸಬೇಕು. ಒತ್ತಡವಿಲ್ಲದೆ ನಿಜವಾದ ರಾಜತಾಂತ್ರಿಕತೆ ಇರುವುದಿಲ್ಲ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಇದನ್ನೂ ಓದಿ
ವಿದೇಶಕ್ಕೆ ತೆರಳಿದ್ದ ವಿವಿಧ ಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಔತಣಕೂಟ
ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಜೈಶಂಕರ್ ಎಚ್ಚರಿಕೆ
ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
ಲೋಕಸಭೆಗೆ ಉಪಸಭಾಪತಿ ಆಯ್ಕೆ ಮಾಡುವಂತೆ ಪ್ರಧಾನಿ ಮೋದಿಗೆ ಖರ್ಗೆ ಪತ್ರ


ಇದನ್ನೂ ಓದಿ: ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಬೆಲ್ಜಿಯಂನಲ್ಲಿ ಸಚಿವ ಜೈಶಂಕರ್ ಎಚ್ಚರಿಕೆ

ಖಾರ್ಕಿವ್‌ನಲ್ಲಿನ ಕಟ್ಟಡಗಳು, ಮನೆಗಳು ಮತ್ತು ಆಟದ ಮೈದಾನಗಳ ಮೇಲೆ ರಷ್ಯಾದ ಡ್ರೋನ್‌ಗಳು ದಾಳಿ ನಡೆಸಿದವು. ಖಾರ್ಕಿವ್‌ನ ಸ್ಲೋಬಿಡ್ಸ್ಕಿ ಮತ್ತು ಓಸ್ನೋವಿಯನ್ಸ್ಕಿ ಜಿಲ್ಲೆಗಳಲ್ಲಿ ದಾಳಿಗಳು ತೀವ್ರವಾಗಿ ಅಪ್ಪಳಿಸಿದವು. ಅಪಾರ್ಟ್‌ಮೆಂಟ್ ಕಟ್ಟಡಗಳು, ಖಾಸಗಿ ಮನೆಗಳು, ಆಟದ ಮೈದಾನಗಳು, ಸಾರ್ವಜನಿಕ ಸಾರಿಗೆ ಮೂಲಸೌಕರ್ಯ ಮತ್ತು ಕೈಗಾರಿಕಾ ಸ್ಥಳಗಳಿಗೆ ಹಾನಿಯಾಯಿತು. ವಿನಾಶವನ್ನು ನಿಯಂತ್ರಿಸಲು ಅಗ್ನಿಶಾಮಕ ದಳದವರು ಹೋರಾಡುತ್ತಿದ್ದಂತೆ ಅಪಾರ್ಟ್‌ಮೆಂಟ್‌ಗಳು ಬೆಂಕಿಯಲ್ಲಿ ಮುಳುಗಿ ಕಟ್ಟಡಗಳು ಛಿದ್ರಗೊಂಡಿರುವುದನ್ನು ತೋರಿಸುವ ಫೋಟೋಗಳನ್ನು ಉಕ್ರೇನ್‌ನ ತುರ್ತು ಸೇವೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಭಯೋತ್ಪಾದನೆ ನಿಮ್ಮನ್ನೂ ಕಾಡಬಹುದು; ಪಾಶ್ಚಿಮಾತ್ಯ ದೇಶಗಳಿಗೆ ಸಚಿವ ಜೈಶಂಕರ್ ಎಚ್ಚರಿಕೆ

ಡೆಕಾಯ್‌ಗಳು ಸೇರಿದಂತೆ 85 ಡ್ರೋನ್‌ಗಳನ್ನು ಉಕ್ರೇನ್ ದೇಶದ ಮೇಲೆ ಹಾರಿಸಲಾಗಿದೆ ಎಂದು ಉಕ್ರೇನಿಯನ್ ವಾಯುಪಡೆ ವರದಿ ಮಾಡಿದೆ. ವಾಯು ರಕ್ಷಣಾ ವ್ಯವಸ್ಥೆಗಳು ಅವುಗಳಲ್ಲಿ 40 ಅನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. ಜೂನ್ 2ರಂದು ಇಸ್ತಾನ್‌ಬುಲ್‌ನಲ್ಲಿ ನಡೆದ ಇತ್ತೀಚಿನ ಶಾಂತಿ ಮಾತುಕತೆಗಳು ಸೇರಿದಂತೆ ಸಂಭಾವ್ಯ ಕದನ ವಿರಾಮದ ಕುರಿತು ನಡೆಯುತ್ತಿರುವ ಚರ್ಚೆಗಳ ಹೊರತಾಗಿಯೂ ದಾಳಿಗಳು ನಡೆಯುತ್ತಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ