ಕೈವ್ ಸೆಪ್ಟೆಂಬರ್ 03: ಉಕ್ರೇನ್‌ನ (Ukraine) ಪೋಲ್ಟವಾ ನಗರದಲ್ಲಿ ಮಂಗಳವಾರ ರಷ್ಯಾದ (Russia) ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskiy) ಹೇಳಿದ್ದಾರೆ. ರಷ್ಯಾದ ಪಡೆಗಳು ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಅದು ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್ ಕಟ್ಟಡವನ್ನು ಹಾನಿಗೊಳಿಸಿದವು ಎಂದು ಝೆಲೆನ್ಸ್ಕಿ ವಿಡಿಯೊದಲ್ಲಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ವೆಬ್‌ಸೈಟ್ ಎಕ್ಸ್‌ನಲ್ಲಿ ಈ ಬಗ್ಗೆ ಬರೆದ ಝೆಲೆನ್ಸ್ಕಿ, “ಪೋಲ್ಟವಾದಲ್ಲಿ ರಷ್ಯಾದ ದಾಳಿ ಬಗ್ಗೆ ನನಗೆ ಪ್ರಾಥಮಿಕ ವರದಿಗಳು ಬಂದವು. ಲಭ್ಯವಿರುವ ಮಾಹಿತಿಯ ಪ್ರಕಾರ, ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಈ ಪ್ರದೇಶ ಮೇಲೆ ದಾಳಿ ನಡೆದಿದೆ. ಅವರು ಶಿಕ್ಷಣ ಸಂಸ್ಥೆ ಮತ್ತು ಹತ್ತಿರದ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡರು, ದೂರಸಂಪರ್ಕ ಸಂಸ್ಥೆಯ ಕಟ್ಟಡಗಳಲ್ಲಿ ಒಂದನ್ನು ಭಾಗಶಃ ನಾಶಪಡಿಸಿದರು.
I received preliminary reports on the Russian strike in Poltava. According to available information, two ballistic missiles hit the area. They targeted an educational institution and a nearby hospital, partially destroying one of the telecommunications institute’s buildings.… pic.twitter.com/TNppPr1OwF
— Volodymyr Zelenskyy / Володимир Зеленський (@ZelenskyyUa) September 3, 2024
ಅನೇಕರು ಅವಶೇಷಗಳಲ್ಲಿ ಸಿಲುಕಿರುವ ಶಂಕೆ ಇದೆ. ದಾಳಿಯಲ್ಲಿ 41 ಜನರು ಸಾವಿಗೀಡಾಗಿದ್ದು, 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹಲವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಅವಶೇಷಗಳಡಿಯಲ್ಲಿ ಜನರು ಸಿಲುಕಿಕೊಂಡಿದ್ದರು. ಅನೇಕ ಜನರನ್ನು ರಕ್ಷಿಸಲಾಯಿತು, ಆದರೆ 180 ಕ್ಕೂ ಹೆಚ್ಚು ಜನರು ಗಾಯಗೊಂಡರು. ದುರದೃಷ್ಟವಶಾತ್, ಅನೇಕ ಸಾವುನೋವುಗಳು ಇವೆ. ಇಲ್ಲಿಯವರೆಗೆ 41 ಜನರು ಸಾವಿಗೀಡಾಗಿದ್ದಾರೆ ಎಂದು ನಮಗೆ ತಿಳಿದಿದೆ. ಅವರ ಎಲ್ಲಾ ಸಂಬಂಧಿಕರು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು” ಎಂದು ಅಧ್ಯಕ್ಷ ಝೆಲೆನ್ಸ್ಕಿ ಬರೆದಿದ್ದಾರೆ.
“ಈ ದಾಳಿಗೆ ರಷ್ಯಾವನ್ನು ಖಂಡಿತವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗೋ: ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನ, 129 ಕೈದಿಗಳು ಸಾವು, 59 ಜನರಿಗೆ ಗಾಯ
ಉಕ್ರೇನ್ ಅನ್ನು ರಕ್ಷಿಸುವ ಸಲುವಾಗಿ ತಮ್ಮ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ರಷ್ಯಾದ ಭೂಪ್ರದೇಶದ ಆಳವಾದ ದಾಳಿಗಳಿಗೆ ಬಳಸಲು ಅನುಮತಿಸುವಂತೆ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದ ಝೆಲೆನ್ಸ್ಕಿ, ಈ ಭಯೋತ್ಪಾದನೆಯನ್ನು ತಡೆಯುವ ಶಕ್ತಿಯನ್ನು ಹೊಂದಿರುವ ಪ್ರಪಂಚದ ಪ್ರತಿಯೊಬ್ಬರಿಗೂ ನಾವು ಹೇಳುತ್ತಲೇ ಇರುತ್ತೇವೆ. ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿಗಳು ಉಕ್ರೇನ್‌ನಲ್ಲಿ ಅಗತ್ಯವಿದೆಯೇ ಹೊರತು ಎಲ್ಲೋ ಗೋದಾಮಿನಲ್ಲಿ ಅಲ್ಲ ಎಂದಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Tue, 3 September 24