ಕಾಂಗೋ: ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನ, 129 ಕೈದಿಗಳು ಸಾವು, 59 ಜನರಿಗೆ ಗಾಯ
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಕಿನ್ಶಾಸಾದಲ್ಲಿರುವ ಕೇಂದ್ರ ಮಕಾಲಾ ಜೈಲಿನಿಂದ ಪಲಾಯನ ಮಾಡುವ ಪ್ರಯತ್ನದಲ್ಲಿ ಕನಿಷ್ಠ 129 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 59 ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಹೇಳಿದೆ.
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿರುವ ಸೆಂಟ್ರಲ್ ಮಕಾಲಾ ಜೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ 129 ಕೈದಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಜತೆಗೆ 59 ಕೈದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ಲರೂ ಸೇರಿ ಜೈಲಿನಿಂದ ಓಡಿ ಹೋಗಲು ಪ್ರಯತ್ನ ಮಾಡಿದ್ದರು. ಆಂತರಿಕ ಸಚಿವ ಶಬಾನಿ ಲುಕೋ ಈ ವಿವರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಮಕಾಲಾ ಜೈಲಿನಿಂದ ಕೈದಿಗಳು ಪರಾರಿಯಾಗಲು ಯತ್ನಿಸಿದ್ದರು, ಜೈಲು ಸಿಬ್ಬಂದಿ ಎಚ್ಚೆತ್ತು ಪರಿಸ್ಥಿತಿ ನಿಭಾಯಿಸಲು ಹೋದಾಗ ಮಾರಾಮಾರಿ ನಡೆದಿದೆ.
ಈ ವೇಳೆ ಅಡುಗೆ ಕೋಣೆಯಿಂದ ಬೆಂಕಿ ಆವರಿಸಿ 129 ಕೈದಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಜೈಲಿನ ಕಟ್ಟಡಕ್ಕೂ ಹಾನಿಯಾಗಿದೆ ಎಂದು ಸಚಿವ ಶಬಾನಿ ಲುಕೋ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಜೈಲಿನಲ್ಲಿ ಬೀಡಿ, ಸಿಗರೇಟ್ಗೆ ಅವಕಾಶ ಇರುತ್ತಾ? ನಿವೃತ್ತ ಪೊಲೀಸ್ ಅಧಿಕಾರಿ ತೆರೆದಿಟ್ಟ ಸತ್ಯ
ಕೆಲವರು ನೂಕು ನುಗ್ಗಲು ಹಾಗೂ ಉಸಿರುಗಟ್ಟುವಿಕೆಯಿಂದಾಗಿ ಸಾವನ್ನಪ್ಪಿದ್ದಾರೆ. ಯಾವುದೇ ಕೈದಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರು ಸಾವನ್ನಪ್ಪಿದ್ದಾರೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕಾಲಾ ಕಾರಾಗೃಹವು ಕಾಂಗೋದಲ್ಲಿರುವ ಪ್ರಮುಖ ಸೆರೆಮನೆಯಾಗಿದೆ ಮತ್ತು 1,500 ಸಾಮರ್ಥ್ಯವನ್ನು ಹೊಂದಿದೆ, ಆದರೆ ಪ್ರಸ್ತುತ 12,000 ಕೈದಿಗಳನ್ನು ಬಂಧಿಸಲಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಇತ್ತೀಚಿನ ದೇಶದ ವರದಿಯ ಪ್ರಕಾರ , ಹೆಚ್ಚಿನ ಕೈದಿಗಳು ವಿಚಾರಣೆಗಾಗಿ ಕಾಯುತ್ತಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ