AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: 10 ವರ್ಷದಿಂದ ಹೆಂಡತಿ ಮೇಲೆ ಗಂಡ, ಇತರೆ ಪುರುಷರಿಂದ ಡ್ರಗ್ಸ್ ನೀಡಿ ಅತ್ಯಾಚಾರ

ಒಂದು ದಶಕದಿಂದ ಮಹಿಳೆಯೊಬ್ಬರಿಗೆ ಆಕೆಯ ಗಂಡ ಮತ್ತು ಇತರೆ ಪುರುಷರು ಡ್ರಗ್ಸ್ ನೀಡಿ ಅತ್ಯಾಚಾರ ನಡೆಸಿದ್ದಾರೆ. ಫ್ರಾನ್ಸ್ ದೇಶದಲ್ಲಿ ಈ ಘಟನೆ ನಡೆದಿದೆ. ಹೆಚ್ಚೂಕಡಿಮೆ 1 ದಶಕದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

Shocking News: 10 ವರ್ಷದಿಂದ ಹೆಂಡತಿ ಮೇಲೆ ಗಂಡ, ಇತರೆ ಪುರುಷರಿಂದ ಡ್ರಗ್ಸ್ ನೀಡಿ ಅತ್ಯಾಚಾರ
ಅತ್ಯಾಚಾರ
ಸುಷ್ಮಾ ಚಕ್ರೆ
|

Updated on: Sep 02, 2024 | 6:48 PM

Share

ಪ್ಯಾರಿಸ್: ಮಹಿಳೆಯೊಬ್ಬಳು ವರ್ಷಾನುಗಟ್ಟಲೆಯಿಂದ ಕೂದಲು ಮತ್ತು ತೂಕ ಕಳೆದುಕೊಳ್ಳುತ್ತಿದ್ದಳು. ಕ್ರಮೇಣ ಅವಳು ಇಡೀ ದಿನಗಳನ್ನು ಮರೆಯಲು ಪ್ರಾರಂಭಿಸಿದಳು. ಕೆಲವೊಮ್ಮೆ ಆಕೆಗೆ ಎಲ್ಲವೂ ಕನಸಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಆಕೆಯ ಮಕ್ಕಳು ಮತ್ತು ಸ್ನೇಹಿತರು ಆಕೆಗೆ ಆಲ್ಝೈಮರ್ಸ್ ಇದೆ ಎಂದು ಚಿಂತಿತರಾಗಿದ್ದರು.

ಆದರೆ 2020ರ ಕೊನೆಯಲ್ಲಿ, ಅವಳನ್ನು ದಕ್ಷಿಣ ಫ್ರಾನ್ಸ್‌ನ ಪೊಲೀಸ್ ಠಾಣೆಗೆ ಕರೆಸಿದ ನಂತರ, ಆಕೆ ಶಾಕಿಂಗ್ ಕತೆಯೊಂದನ್ನು ಹೇಳಿದಳು. ಆಕೆಯ 50 ವರ್ಷ ವಯಸ್ಸಿನ ಪತಿ ಡೊಮಿನಿಕ್ ಪೆಲಿಕಾಟ್, ಆಕೆಯ ಆಹಾರ ಮತ್ತು ಪಾನೀಯಕ್ಕೆ ನಿದ್ರೆ ಮಾತ್ರೆಗಳನ್ನು, ಕೆಲವೊಮ್ಮೆ ಡ್ರಗ್ಸ್ ಅನ್ನು ಹಾಕುತ್ತಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಲಾಗುತ್ತಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಚಿತ್ರೀಕರಿಸಲು ಡಜನ್‌ಗಟ್ಟಲೆ ಪುರುಷರನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ. 1 ದಶಕಗಳಿಂದ ಈ ರೀತಿ ಮಾಡುತ್ತಿದ್ದುದರಿಂದ ಆಕೆಯ ಆರೋಗ್ಯ ಹದಗೆಡುತ್ತಿತ್ತು.

ಇದನ್ನೂ ಓದಿ: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?

ವ್ಯಕ್ತಿಯ ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಆನ್‌ಲೈನ್ ಸಂದೇಶಗಳನ್ನು ಬಳಸಿಕೊಂಡು, ಪೊಲೀಸರು ಎರಡು ವರ್ಷಗಳಲ್ಲಿ ಆ ಇತರ ಶಂಕಿತರನ್ನು ಗುರುತಿಸಿದರು. ಆರೋಪಿಗಳು ಕಾರ್ಮಿಕ ವರ್ಗ ಮತ್ತು ಮಧ್ಯಮ ವರ್ಗದ ಫ್ರೆಂಚ್ ಸಮಾಜದ ಕೆಲಿಡೋಸ್ಕೋಪ್​ನವರಾಗಿದ್ದಾರೆ. ಟ್ರಕ್ ಚಾಲಕರು, ಸೈನಿಕರು, ಬಡಗಿಗಳು ಮತ್ತು ವ್ಯಾಪಾರ ಕೆಲಸಗಾರರು, ಜೈಲು ಸಿಬ್ಬಂದಿ, ನರ್ಸ್, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಐಟಿ ತಜ್ಞರು, ಸ್ಥಳೀಯ ಪತ್ರಕರ್ತರು ಹೀಗೆ ಎಲ್ಲರೂ ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಇದನ್ನೂ ಓದಿ: ಹೊಸದಾಗಿ ಉದ್ಘಾಟನೆಯಾದ ಅಂಗಡಿ ಮುಂದೆ ಕುಳಿತಿದ್ದವರಿಗೆ ಗುದ್ದಿದ ಸ್ಕಾರ್ಪಿಯೋ; ಓರ್ವ ಸಾವು, ಮೂವರಿಗೆ ಗಾಯ

ಹೆಚ್ಚಿನವರು ಮಹಿಳೆಯ ಮೇಲೆ ಒಮ್ಮೆ ಅತ್ಯಾಚಾರವೆಸಗಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಆಕೆಯ ಮೇಲೆ ಅತ್ಯಾಚಾರ ಮಾಡಲು 6 ಬಾರಿ ಹಿಂತಿರುಗಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ ಗಂಡನಿಂದ ಪಾರಾಗಲು ಬೇರೆ ದಾರಿ ಕಾಣದೆ ಆಕೆ ವಿಚ್ಛೇದನ ಪಡೆದಿದ್ದಾರೆ.

ಆಕೆಯ ಗಂಡ ಈ ಆರೋಪವನ್ನು ಒಪ್ಪಿಕೊಂಡಿದ್ದು, ಇತರ ಆರೋಪಿಗಳು ಅತ್ಯಾಚಾರದ ಆರೋಪಗಳನ್ನು ನಿರಾಕರಿಸಿದ್ದಾರೆ. ಕೆಲವರಿಗೆ ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಆಕೆಯ ಗಂಡ ಅನುಮತಿ ನೀಡಿದ್ದ. ಅದೇ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ