ವೆನೆಜುವೆಲಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಕ್ಕೆ ರಷ್ಯಾದ ಸಂಸದರ ಎಚ್ಚರಿಕೆ

ಉತ್ತರ ಅಟ್ಲಾಂಟಿಕ್‌ನಲ್ಲಿ ಯುಎಸ್ ಪಡೆಗಳು ವಶಪಡಿಸಿಕೊಂಡ ಬೆಲ್ಲಾ 1 ಎಂದು ಕರೆಯಲಾಗುತ್ತಿದ್ದ ಟ್ಯಾಂಕರ್ ಮರಿನೆರಾವನ್ನು ವಶಪಡಿಸಿಕೊಂಡಿದ್ದಕ್ಕೆ ರಷ್ಯಾದ ಸಂಸದ ಜುರಾವ್ಲೆವ್ ಪ್ರತಿಕ್ರಿಯಿಸಿದ್ದಾರೆ. "ವೆನೆಜುವೆಲಾದಲ್ಲಿ ವಿಶೇಷ ಕಾರ್ಯಾಚರಣೆಯ ನಂತರ ಶಿಕ್ಷೆಯಿಂದ ಬಚಾವಾಗಿರುವ ಒಂದು ರೀತಿಯ ಸಂಭ್ರಮದಲ್ಲಿರುವ ಅಮೆರಿಕಕ್ಕೆ ಕಡಿವಾಣ ಹಾಕಬೇಕಿದೆ ಎಂದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ವೆನೆಜುವೆಲಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕಕ್ಕೆ ರಷ್ಯಾದ ಸಂಸದರ ಎಚ್ಚರಿಕೆ
Russia Boat

Updated on: Jan 08, 2026 | 9:47 PM

ನವದೆಹಲಿ, ಜನವರಿ 8: ಉತ್ತರ ಅಟ್ಲಾಂಟಿಕ್‌ನಲ್ಲಿ ಯುಎಸ್ ಪಡೆಗಳು ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ನಂತರ ಇಂದು ರಷ್ಯಾದ (Russia) ಸಂಸದ ಅಲೆಕ್ಸಿ ಜುರಾವ್ಲೆವ್ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾಸ್ಕೋದ ಸಮುದ್ರಗಳಲ್ಲಿ ಅಮೆರಿಕ ಕಾನೂನುಬಾಹಿರ ಕ್ರಮಗಳನ್ನು ಮುಂದುವರಿಸಿದರೆ ನಮ್ಮ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಹಾಗೇ, ಅಮೆರಿಕದ ಹಡಗುಗಳನ್ನೂ ಮುಳುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹಿಂದೆ ಬೆಲ್ಲಾ 1 ಎಂದು ಕರೆಯಲಾಗುತ್ತಿದ್ದ ಟ್ಯಾಂಕರ್ ಮರಿನೆರಾವನ್ನು ವಶಪಡಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಜುರಾವ್ಲೆವ್, ಅಮೆರಿಕವು ನಿರ್ಭಯದಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು. ಬಲವಂತದ ಪ್ರತೀಕಾರದ ಮೂಲಕ ಅದನ್ನು ನಿಲ್ಲಿಸಬೇಕು ಎಂದು ಹೇಳಿದರು.


ಇದನ್ನೂ ಓದಿ: Video: ವೆನೆಜುವೆಲಾಗೆ ತೆರಳುತ್ತಿದ್ದ ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ

ಅಮೆರಿಕದ ಫೆಡರಲ್ ನ್ಯಾಯಾಲಯ ಹೊರಡಿಸಿದ ವಾರಂಟ್ ಅಡಿಯಲ್ಲಿ, ಕೋಸ್ಟ್ ಗಾರ್ಡ್ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಮಿಲಿಟರಿ ಪಡೆಗಳು ಸ್ಕಾಟ್ಲೆಂಡ್‌ನ ಉತ್ತರದ ಅಂತಾರಾಷ್ಟ್ರೀಯ ನೀರಿನಲ್ಲಿ ರಷ್ಯಾದ ಧ್ವಜ ಹೊಂದಿರುವ ಟ್ಯಾಂಕರ್ ಅನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಜುರಾವ್ಲೆವ್ ಈ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ