ಕಳ್ಳಮಾರ್ಗದಲ್ಲಿ ರಷ್ಯಾಗೆ ಕರೆಸಿಕೊಂಡು ದಿವ್ಯಾಂಗನನ್ನು ಯುದ್ಧ ಭೂಮಿಯಲ್ಲಿ ಬಿಟ್ಟ ಇವರೆಂಥಾ ಜನ
ಪಂಜಾಬ್ ಮೂಲದ ದಿವ್ಯಾಂಗ ಮನ್ದೀಪ್ ಅವರನ್ನು ಕೆಲಸದ ನೆಪದಲ್ಲಿ ರಷ್ಯಾಕ್ಕೆ ಕರೆಸಿಕೊಂಡು, ಅಲ್ಲಿನ ಸೈನ್ಯಕ್ಕೆ ಬಲವಂತವಾಗಿ ಸೇರಿಸಲಾಯಿತು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹೋರಾಡಲು ಅನರ್ಹರಾಗಿದ್ದರೂ ಅವರನ್ನು ಯುದ್ಧ ಭೂಮಿಗೆ ತಳ್ಳಲಾಯಿತು. ಮಾರ್ಚ್ 2024ರಲ್ಲಿ ಕುಟುಂಬದೊಂದಿಗೆ ಕೊನೆಯದಾಗಿ ಮಾತನಾಡಿದ್ದ ಮನ್ದೀಪ್, ಡಿಸೆಂಬರ್ 2024ರಲ್ಲಿ ಮೃತಪಟ್ಟಿದ್ದಾರೆಂದು ದೃಢವಾಯಿತು. ಈ ಘಟನೆ ಮಾನವ ಕಳ್ಳಸಾಗಣೆ ಮತ್ತು ದುರ್ಬಲರನ್ನು ಶೋಷಿಸುವ ಭಯಾನಕ ಕಥೆ ಹೇಳುತ್ತದೆ.

ಮನ್ದೀಪ್ ಹುಟ್ಟಿನಿಂದಲೇ ಅಂಗವಿಕಲ, ಏನಾದರೂ ಸಾಧಿಸಬೇಕೆಂಬ ಛಲವೇನೋ ಇತ್ತು ಆದರೆ ಸಾಮರ್ಥ್ಯವಿರಲಿಲ್ಲ. ಇವರು ಮೂಲತಃ ಪಂಜಾಬಿನವರು. ಯಾವುದೇ ಮಾನದಂಡಗಳನ್ನು ಗಮನಿಸಿದರೂ ಮಿಲಿಟರಿ(Military) ಸೇವೆಗಂತೂ ಅನರ್ಹರಾಗಿದ್ದರು. ಆದರೆ ಅವರ ಜೀವ ಹೋಗಿದ್ದು ಯುದ್ಧಭೂಮಿಯಲ್ಲೇ. ಕನಸಿನಲ್ಲೂ ಊಹಿಸದ ಘಟನೆಯೊಂದು ಅವರ ಜೀವನದಲ್ಲಿ ನಡೆದೇ ಬಿಟ್ಟಿತ್ತು. ಆ ಕುರಿತು ಮಾಹಿತಿ ಇಲ್ಲಿದೆ.
ಡಿಸೆಂಬರ್ 2023ರಲ್ಲಿ ಯಾರೋ ಒಬ್ಬರು ನೀನು ದಿವ್ಯಾಂಗನಾದರೆ ಏನಂತೆ ಯುರೋಪ್ನಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆ ಬಾ ಎಂದು ಕರೆದುಕೊಂಡು ಹೋಗಿ ಯುದ್ಧ ಭೂಮಿಯಲ್ಲಿ ಬಿಟ್ಟೇ ಬಿಟ್ಟರು. ಯುದ್ಧ ಹಾಗಿರಲಿ ಸರಿಯಾಗಿ ನಡೆಯಲೂ ಆಗದ ವ್ಯಕ್ತಿ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದಾದರೂ ಹೇಗೆ? ಮನ್ದೀಪ್ ಅವರನ್ನು ಟ್ರಾವೆಲ್ ಏಜೆಂಟರು ವಂಚಿಸಿದ್ದರು, ಅರ್ಮೇನಿಯಾದ ಮೂಲಕ ಕರೆದೊಯ್ಯಲಾಯಿತು.
ದಿವ್ಯಾಂಗನಾದರೂ ಷ್ಯಾದ ಸೈನ್ಯಕ್ಕೆ ಬಲವಂತವಾಗಿ ಸೇರಿಸಿಕೊಳ್ಳಲಾಯಿತು ಎಂದು ಆರೋಪಿಸಲಾಗಿದೆ. ವಿದೇಶದಿಂದ ಬಂದ ಅವರು, ಎಂದಿಗೂ ಹೋರಾಡಲು ಯೋಗ್ಯವಲ್ಲದ ಯುದ್ಧದಿಂದ ರಕ್ಷಿಸುವಂತೆ ಮನವಿ ಮಾಡಿ ಹತಾಶ ವೀಡಿಯೊ ಸಂದೇಶಗಳನ್ನು ಕಳುಹಿಸಿದರು.
ಮತ್ತಷ್ಟು ಓದಿ: SSB Interview Guide: ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು SSB ಸಂದರ್ಶನ ಏಕೆ ಅತ್ಯಗತ್ಯ? ಸಂಪೂರ್ಣ ಮಾಹಿತಿ ಇಲ್ಲಿದೆ
ಸಹಾಯಕ್ಕಾಗಿ ಬೇಡುತ್ತಾ ವೀಡಿಯೊಗಳನ್ನು ಕಳುಹಿಸುತ್ತಲೇ ಇದ್ದರು ಎಂದು ಮಂದೀಪ್ ಸಹೋದರ ಜಗದೀಪ್ ಕುಮಾರ್ ತಿಳಿಸಿದ್ದಾರೆ. ತನ್ನನ್ನು ಸೈನ್ಯಕ್ಕೆ ಸೇರಲು ಬಲವಂತಪಡಿಸಲಾಗಿದೆ ಎಂದು ಅವನು ಹೇಳಿದ್ದರು, ಅವರಿಗೆ ಭಯವಾಗಿತ್ತು. ಮನೆಗೆ ಬರಲು ಬಯಸಿದ್ದರು ಎಂದು ಹೇಳಿದ್ದಾರೆ. ಮನ್ದೀಪ್ ಕೊನೆಯ ಬಾರಿಗೆ ತನ್ನ ಕುಟುಂಬದೊಂದಿಗೆ ಮಾತನಾಡಿದ್ದು ಮಾರ್ಚ್ 2024 ರಲ್ಲಿ. ಅದಾದ ನಂತರ, ಏನೂ ಇರಲಿಲ್ಲ ಯಾವುದೇ ಕರೆಗಳಿಲ್ಲ, ಸಂದೇಶಗಳಿಲ್ಲ,ಮಾತುಗಳಿಲ್ಲ.
ಭಯ, ಅನಿಶ್ಚಿತತೆ ಮತ್ತು ಕಾಯುವಿಕೆ ಮಾತ್ರ ಇತ್ತು. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ರಷ್ಯಾದ ಸೈನ್ಯಕ್ಕೆ ಕಳ್ಳಸಾಗಣೆ ಮಾಡಲಾದ ನೇಮಕಾತಿಗಳಲ್ಲಿ ಮನ್ದೀಪ್ ಕೂಡ ಒಬ್ಬರಾಗಿದ್ದರು.
ತಿಂಗಳುಗಳ ಕಾಲ, ಕುಟುಂಬವು ಸ್ಥಳೀಯ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿದಂತೆ ಮನ್ದೀಪ್ ಅವರನ್ನು ಪತ್ತೆಹಚ್ಚಲು ಅಥವಾ ಅವರನ್ನು ಮರಳಿ ಕರೆತರಲು ಸಹಾಯವನ್ನು ಕೋರಿ ಮನವಿ ಸಲ್ಲಿಸಲಾಯಿತು ಆದರೆ ಆ ಮನವಿ ಕೂಡ ಮೌನವಾಗಿಯೇ ಇತ್ತು.
2025 ರ ಅಂತ್ಯದ ವೇಳೆಗೆ, ಜಗದೀಪ್ ತನ್ನ ತಂದೆಯೊಂದಿಗೆ, ಕಾಣೆಯಾದ ತನ್ನ ಸಹೋದರನನ್ನು ಹುಡುಕಲು ತನ್ನ ಸ್ವಂತ ಜವಾಬ್ದಾರಿಯ ಮೇಲೆ ರಷ್ಯಾಕ್ಕೆ ಹೋದರು. ಅವನು ರಷ್ಯಾದ ಸೈನ್ಯದ ಸದಸ್ಯರನ್ನು ಪತ್ತೆಹಚ್ಚಿದರು ಮತ್ತು ಮನ್ದೀಪ್ ಗುರುತಿಸಲು ಡಿಸೆಂಬರ್‌ನಲ್ಲಿ ತನ್ನ ಡಿಎನ್‌ಎ ಮಾದರಿಯನ್ನು ಸಲ್ಲಿಸಿದರು.
ಏಳು ದಿನಗಳ ನಂತರ, ಹೊಸ ವರ್ಷ ಬರುತ್ತಿದ್ದಂತೆ, ಕೊನೆಗೂ ರಷ್ಯಾದಿಂದ ಕರೆ ಬಂದೇ ಬಿಟ್ಟಿತ್ತು, ತನ್ನ ಸಹೋದರನೆ ಇರಬೇಕು ಎಂದು ಯೋಚಿಸಿದಾಗ, ತನ್ನ ಸಹೋದರ ಬದುಕಿಲ್ಲ ಎನ್ನುವ ಸತ್ಯ ಬರಸಿಡಿಲಂತೆ ಬಡಿದಿತ್ತು. ಜಗದೀಪ್ ಅವರು ಫೆಬ್ರವರಿ 2025 ರಲ್ಲಿ ಏಮ್ಸ್‌ನಲ್ಲಿ ತಮ್ಮ ಡಿಎನ್‌ಎ ಮಾದರಿಯನ್ನು ಸಲ್ಲಿಸಿದ್ದರು, ಈ ಪ್ರಕ್ರಿಯೆಯನ್ನು ವಿದೇಶಾಂಗ ಸಚಿವಾಲಯವು ಸುಗಮಗೊಳಿಸಿತು.
ತನ್ನ ಶೋಧದ ಸಮಯದಲ್ಲಿ ಪಂಜಾಬ್ ಸರ್ಕಾರವಾಗಲಿ ಅಥವಾ ಕೇಂದ್ರವಾಗಲಿ ಯಾವುದೇ ಅರ್ಥಪೂರ್ಣ ಸಹಾಯವನ್ನು ನೀಡಲಿಲ್ಲ ಎಂದು ಅವರ ಸಹೋದರ ಹೇಳಿದ್ದಾರೆ. ರಷ್ಯಾ ಪ್ರವಾಸದ ವೆಚ್ಚವನ್ನು ಕಾಂಗ್ರೆಸ್ ಸಂಸದ ರಾಜಾ ವಾರಿಂಗ್ ಅವರು ಭರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಷ್ಯಾದ ಕಮಾಂಡರ್ ಒಬ್ಬರು ಹಂಚಿಕೊಂಡ ಚಿತ್ರಗಳಲ್ಲಿ ಮನ್ದೀಪ್ ದೇಹ ಕೊಳೆತ ಸ್ಥಿತಿಯಲ್ಲಿತ್ತು.
ಮನ್ದೀಪ್ ಪಾರ್ಥಿವ ಶರೀರವನ್ನು ಅಂತಿಮವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು., ಇದು ಕಾಯುವಿಕೆಯನ್ನು ಕೊನೆಗೊಳಿಸಿದೆ, ಆದರೆ ನೋವನ್ನು ಕೊನೆಗೊಳಿಸಿಲ್ಲ ಎಂದು ಮನ್ದೀಪ್ ಅವರ ಸಹೋದರ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
