AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ಸೇನೆಗಾಗಿ ಹೋರಾಡುತ್ತಿದ್ದ ಭಾರತದ ಪ್ರಜೆ, ಉಕ್ರೇನ್ ಸೇನೆ ಮುಂದೆ ಶರಣು, ಕಾರಣವೇನು?

ರಷ್ಯಾ(Russia) ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತದ ಪ್ರಜೆಯೊಬ್ಬರು ಉಕ್ರೇನ್ ಸೇನೆ ಎದುರು ಶರಣಾಗಿದ್ದಾರೆ. ಉಕ್ರೇನಿಯನ್ ಮಿಲಿಟರಿಯ 63 ನೇ ಯಾಂತ್ರಿಕೃತ ಬ್ರಿಗೇಡ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ.ಭಾರತೀಯ ಪ್ರಜೆ ತನ್ನನ್ನು ಗುಜರಾತ್‌ನ 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ರಷ್ಯಾ ಸೇನೆಗಾಗಿ ಹೋರಾಡುತ್ತಿದ್ದ ಭಾರತದ ಪ್ರಜೆ, ಉಕ್ರೇನ್ ಸೇನೆ ಮುಂದೆ ಶರಣು, ಕಾರಣವೇನು?
ಹುಸೇನ್
ನಯನಾ ರಾಜೀವ್
|

Updated on: Oct 08, 2025 | 9:38 AM

Share

ಕೈವ್, ಅಕ್ಟೋಬರ್ 08: ರಷ್ಯಾ(Russia) ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತದ ಪ್ರಜೆಯೊಬ್ಬರು ಉಕ್ರೇನ್ ಸೇನೆ ಎದುರು ಶರಣಾಗಿದ್ದಾರೆ. ಉಕ್ರೇನಿಯನ್ ಮಿಲಿಟರಿಯ 63 ನೇ ಯಾಂತ್ರಿಕೃತ ಬ್ರಿಗೇಡ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದೆ.ಭಾರತೀಯ ಪ್ರಜೆ ತನ್ನನ್ನು ಗುಜರಾತ್‌ನ 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ವಿಷಯದ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ, ಇದುವರೆಗೆ ಉಕ್ರೇನ್ ಅಧಿಕಾರಿಗಳಿಂದ ಯಾವುದೇ ಔಪಚಾರಿಕ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಹುಸೇನ್ ಹೆಚ್ಚಿನ ಅಧ್ಯಯನಕ್ಕೆಂದು ರಷ್ಯಾಗೆ ಹೋಗಿದ್ದರು, ಅಲ್ಲಿ ಮಾದಕವಸ್ತುಗೆ ಸಂಬಂಧಿತ ಪ್ರಕರಣದಲ್ಲಿ ಸಿಲುಕಿದರು. 7 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಜೈಲು ಶಿಕ್ಷೆ ತಪ್ಪಿಸಲು ರಷ್ಯಾದ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವನ್ನು ನೀಡಲಾಯಿತು ಎಂದು ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ಶಾಂತಿ ಮಾತುಕತೆಗೆ ಸಿದ್ಧ ಎಂದ ರಷ್ಯಾ; ಆದರೆ, ಮುಂದಿಟ್ಟಿದೆ ದೊಡ್ಡ ಷರತ್ತು

‘‘ನನಗೆ ಜೈಲಿನಲ್ಲಿರಲು ಇಷ್ಟವಿರಲಿಲ್ಲ, ಆದ್ದರಿಂದ ನಾನು ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ನಾನು ಅಲ್ಲಿಂದ ಬರಲು ಬಯಸಿದ್ದೆ ’’ ಎಂದು ಹುಸೇನ್ ಹೇಳಿದ್ದಾರೆ. ಕೇವಲ 16 ದಿನಗಳ ತರಬೇತಿಯ ನಂತರ, ಅವರನ್ನು ಅಕ್ಟೋಬರ್ 1 ರಂದು ಮೂರು ದಿನಗಳ ಕಾಲ ನಡೆದ ಮೊದಲ ಯುದ್ಧ ಕಾರ್ಯಾಚರಣೆಗೆ ಕಳುಹಿಸಲಾಯಿತು ಎಂದು ಅವರು ಹೇಳಿದರು.

ತಮ್ಮ ಕಮಾಂಡರ್ ಜೊತೆಗಿನ ಘರ್ಷಣೆಯ ನಂತರ ಶರಣಾಗಲು ನಿರ್ಧರಿಸಿರುವುದಾಗಿ ಹುಸೇನ್ ಹೇಳಿದ್ದಾರೆ.ಕಳೆದ ತಿಂಗಳು, ಭಾರತದ ವಿದೇಶಾಂಗ ಸಚಿವಾಲಯ (MEA), ರಷ್ಯಾದ ಸೇನೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ 27 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸುವಂತೆ ರಷ್ಯಾವನ್ನು ಬಲವಾಗಿ ಒತ್ತಾಯಿಸಿದೆ ಎಂದು ಹೇಳಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ