ಅಣೆಕಟ್ಟು ಸ್ಫೋಟಗೊಂಡ ನಂತರ ಪ್ರವಾಹಕ್ಕೆ ಸಿಲುಕಿದ ಉಕ್ರೇನ್​​ನ ನೊವಾಯಾ ಕಾಖೋವ್ಕಾ ನಗರ: ವರದಿ

|

Updated on: Jun 06, 2023 | 7:17 PM

ನಿಪ್ರೊ ನದಿಯ ಮೇಲೆ ಇರುವ ನಗರದ ಚಿತ್ರಗಳನ್ನು ರಷ್ಯಾದ ಮಾಧ್ಯಮಗಳು ಪ್ರಸಾರ ಮಾಡಿದ್ದು, ಅದರ ಸೆಂಟ್ರಲ್ ಸ್ಕ್ವೇರ್ ಕಟ್ಟಡ ಪ್ರವಾಹದಲ್ಲಿ ಮುಳುಗಿದೆ.ನೀರು ಏರುತ್ತಿದೆ ಎಂದು ರಷ್ಯಾದ ಸ್ಥಾಪಿತ ನಗರ ಆಡಳಿತದ ಮುಖ್ಯಸ್ಥ ವ್ಲಾಡಿಮಿರ್ ಲಿಯೊಂಟಿಯೆವ್ ಟೆಲಿಗ್ರಾಮ್‌ನಲ್ಲಿ ಹೇಳಿದರು.

ಅಣೆಕಟ್ಟು ಸ್ಫೋಟಗೊಂಡ ನಂತರ ಪ್ರವಾಹಕ್ಕೆ ಸಿಲುಕಿದ ಉಕ್ರೇನ್​​ನ ನೊವಾಯಾ ಕಾಖೋವ್ಕಾ ನಗರ: ವರದಿ
ನೊವಾಯಾ ಕಾಖೋವ್ಕಾ
Image Credit source: Twitter
Follow us on

ಮಾಸ್ಕೋ: ದಕ್ಷಿಣ ಉಕ್ರೇನ್‌ನಲ್ಲಿರುವ (Ukraine) ರಷ್ಯಾದ ಆಕ್ರಮಿತ ನಗರವಾದ ನೋವಾ ಕಾಖೋವ್ಕಾ (Novaya Kakhovka) ಪ್ರವಾಹಕ್ಕೆ ಸಿಲುಕಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ರಷ್ಯಾದ (Russia) ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ನಗರ ಪ್ರವಾಹಕ್ಕೆ ಸಿಲುಕಿದೆ ಎಂದು ರಷ್ಯಾದ ಸ್ಥಾಪಿತ ನಗರ ಆಡಳಿತದ ಮುಖ್ಯಸ್ಥ ವ್ಲಾಡಿಮಿರ್ ಲಿಯೊಂಟಿಯೆವ್ ರಷ್ಯಾದ ಮಾಧ್ಯಮಕ್ಕೆ ತಿಳಿಸಿದ್ದು ಸುಮಾರು 300 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಲಿಯೊಂಟಿಯೆವ್ ಹೇಳಿದ್ದಾರೆ. ನಿಪ್ರೊ ನದಿಯ ಮೇಲೆ ಇರುವ ನಗರದ ಚಿತ್ರಗಳನ್ನು ರಷ್ಯಾದ ಮಾಧ್ಯಮಗಳು ಪ್ರಸಾರ ಮಾಡಿದ್ದು, ಅದರ ಸೆಂಟ್ರಲ್ ಸ್ಕ್ವೇರ್ ಕಟ್ಟಡ ಪ್ರವಾಹದಲ್ಲಿ ಮುಳುಗಿದೆ. ನೀರು ಏರುತ್ತಿದೆ ಎಂದು ರಷ್ಯಾದ ಸ್ಥಾಪಿತ ನಗರ ಆಡಳಿತದ ಮುಖ್ಯಸ್ಥ ವ್ಲಾಡಿಮಿರ್ ಲಿಯೊಂಟಿಯೆವ್ ಟೆಲಿಗ್ರಾಮ್‌ನಲ್ಲಿ ಹೇಳಿದರು.

ನೊವಾಯಾ ಕಾಖೋವ್ಕಾ ಮತ್ತು ಹತ್ತಿರದ ಎರಡು ನಗರಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಅಧಿಕಾರಿಗಳು 53 ಬಸ್‌ಗಳನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಬಿಸಿ ಊಟದ ಜತೆಗೆ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಆಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ತುರ್ತು ರಕ್ಷಣಾ ಕಾರ್ಯಕರ್ತರು, ನಗರಾಡಳಿತ ಕಾರ್ಯಕರ್ತರು ಮತ್ತು ಯೋಧರು ಕೆಲಸದಲ್ಲಿದ್ದಾರೆ ಅಗತ್ಯವಿರುವ ಎಲ್ಲರಿಗೂ ಸಹಾಯವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.


ಪ್ರವಾಹಕ್ಕೆ ಒಳಗಾದ ಸೆಂಟ್ರಲ್ ಸ್ಕ್ವೇರ್ ಮತ್ತು ನಿಪ್ರೊ ನದಿಯ ಹಿನ್ನೆಲೆಯಲ್ಲಿ ಬಹುಮಹಡಿ ಕಟ್ಟಡದಿಂದ ನಗರ ಕಾಣುತ್ತಿರುವ ವಿಡಿಯೊವನ್ನು ಲಿಯೊಂಟಿಯೆವ್ ಪೋಸ್ಟ್ ಮಾಡಿದ್ದಾರೆ. ಮಾಸ್ಕೋ ಪಡೆಗಳು ತಮ್ಮ ಆಕ್ರಮಣದ ಮೊದಲ ದಿನದಂದು ನಗರದ ನಿಯಂತ್ರಣವನ್ನು ತೆಗೆದುಕೊಂಡ ನಂತರ ಸ್ಥಾಪಿಸಿದ ಲೆನಿನ್ ಪ್ರತಿಮೆಯ ಸುತ್ತಲೂ ನೀರು ಏರುತ್ತಿದೆ ಎಂದು ರಷ್ಯಾದ ರಾಜ್ಯ ದೂರದರ್ಶನದ ವರದಿಗಾರ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ  ದಕ್ಷಿಣ ಉಕ್ರೇನ್‌ನ ಕಾಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಒಡೆದಿದೆ. ಎರಡೂ ದೇಶಗಳು ಪರಸ್ಪರ ಆರೋಪ ಮಾಡಿವೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದಲ್ಲಿ ಪ್ರವಾಹದ ನೀರು ಹರಿದಿದೆ.  ಮುಂದಿನ ಐದು ಗಂಟೆಗಳಲ್ಲಿ ನೀರು ನಿರ್ಣಾಯಕ ಮಟ್ಟವನ್ನು ತಲುಪಬಹುದು ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.ರಷ್ಯಾದ ಅಧೀನದಲ್ಲಿರುವ ಕ್ರಿಮಿಯನ್ ಪರ್ಯಾಯ ದ್ವೀಪಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಲು ಉಕ್ರೇನ್‌ನಿಂದ ಅಣೆಕಟ್ಟನ್ನು ಹಾಳುಗೆಡವಲಾಗಿದ್ದು, ಇದು ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ ಎಂದು ರಷ್ಯಾ ಕರೆದಿದೆ.

ಇದನ್ನೂ ಓದಿ: Ukraine war: ಕಾಖೋವ್ಕಾದಲ್ಲಿರುವ ಅಣೆಕಟ್ಟು ಸ್ಫೋಟಗೊಂಡು ಪ್ರವಾಹ; ಪರಸ್ಪರ ಆರೋಪ ಹೊರಿಸಿದ ರಷ್ಯಾ, ಉಕ್ರೇನ್

ನಾವು ಈಗಾಗಲೇ ನಿಸ್ಸಂದಿಗ್ಧವಾಗಿ (ಇದು) ಉಕ್ರೇನಿಯನ್ ಕಡೆಯಿಂದ ಉದ್ದೇಶಪೂರ್ವಕ ವಿಧ್ವಂಸಕ ಕೃತ್ಯ ಎಂದು ಘೋಷಿಸಬಹುದ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Tue, 6 June 23