Satya Nadella: ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್​​ ನೂತನ ಚೇರ್ಮನ್!

| Updated By: Digi Tech Desk

Updated on: Jun 17, 2021 | 11:30 AM

Microsoft Chairman: ಜಗತ್ತಿನ ಸಾಫ್ಟ್​ವೇರ್​ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್​ ತನ್ನ ಮುಖ್ಯ ನಿರ್ವಹಣಾಧಿಕಾರಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ.

Satya Nadella: ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್​​ ನೂತನ ಚೇರ್ಮನ್!
Satya Narayana Nadella: ಭಾರತೀಯ ಮೂಲದ ಸತ್ಯ ನಾಡೆಲ್ಲಾ ಮೈಕ್ರೋಸಾಫ್ಟ್​​ ನೂತನ ಚೇರ್ಮನ್!
Follow us on

ವಾಷಿಂಗ್ಟನ್​: ಜಗತ್ತಿನ ಸಾಫ್ಟ್​ವೇರ್​ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್​ ತನ್ನ ಮುಖ್ಯ ನಿರ್ವಹಣಾಧಿಕಾರಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ. ಜಾನ್​ ಥಾಮ್ಸನ್​ ಮೈಕ್ರೋಸಾಫ್ಟ್​ ಕಂಪನಿಯ ಹಾಲಿ ಅಧ್ಯಕ್ಷರಾಗಿದ್ದಾರೆ.  ಸತ್ಯನಾರಾಯಣ ನಾಡೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್​ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದರು.

ಮೈಕ್ರೋಸಾಫ್ಟ್​ ಕಂಪನಿಯು (Microsoft Corp) ಬುಧವಾರದಂದು (ಜೂನ್​ 16) ಜಾನ್​ ಥಾಂಪ್ಸನ್ ಅವರ ಸ್ಥಾನದಲ್ಲಿ ಸತ್ಯ ನಾಡೆಲ್ಲಾ ಅವರನ್ನು ನೂತನ ಚೇರ್ಮನ್ ಆಗಿ ನೇಮಿಸಿದೆ.

2014ರಲ್ಲಿ ಮೈಕ್ರೋಸಾಫ್ಟ್​ ಕಂಪನಿಯ ಸಹ ಸ್ಥಾಪಕರಾಗಿದ್ದ ಬಿಲ್​ ಗೆಟ್ಸ್​ ಅವರಿಂದ ಚೇರ್ಮನ್ ಸ್ಥಾನವನ್ನು ಪಡೆದಿದ್ದ ಜಾನ್​ ಥಾಮ್ಸನ್​ ಇನ್ನು ಮುಂದೆ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಮೈಕ್ರೋಸಾಫ್ಟ್​ ಕಂಪನಿಯು ಹಿಂದಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಶೇ. 56 ಸೆಂಟ್ಸ್ ಡಿವಿಡೆಂಡ್​ ಘೋಷಿಸಿದೆ. ಸೆಪ್ಟೆಂಬರ್ 9ರಿಂದ ಈ ಲಾಭಾಂಶವನ್ನು ಷೇರುದಾರರಿಗೆ ನೀಡಲಿದೆ. ​

Sundar Pichai Birthday: ಗೂಗಲ್​ ಸಿಇಓ ಸುಂದರ್​ ಪಿಚೈ ಅವರ ನಿಜವಾದ ಹೆಸರೇನು ಗೊತ್ತಾ? ಪಿಚೈ ಕುರಿತಾದ ಅಪರೂಪದ 5 ಸಂಗತಿಗಳು ಇಲ್ಲಿವೆ

(Satya Narayana Nadella new chairman of Microsoft)

Published On - 11:09 am, Thu, 17 June 21