ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕಂತೆ, ಕುಂದಾಪುರ ಯುವಕ ಅರೆಸ್ಟ್

|

Updated on: Dec 23, 2019 | 10:31 AM

ಉಡುಪಿ: ಫೇಸ್‌ಬುಕ್‌ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಆರೋಪ ಹಿನ್ನೆಲೆ ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಹರೀಶ್ ಬಂಗೇರ ಎಂಬವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಖಾತೆಯ ಬಳಸಿ ಪೌರತ್ವ ಮಸೂದೆ ಕುರಿತು ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ. ಅಲ್ಲದೆ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ಮೋದಿ ನಮ್ಮ ಜೊತೆ ಇದ್ದಾರೆ. ಯುದ್ಧಕ್ಕೆ ಸಿದ್ಧರಾಗಿ ಎಂದು ಪೋಸ್ಟ್ ಶೇರ್ ಮಾಡಿದ್ದ. ನಕಲಿ ಖಾತೆಯ ಮೂಲಕ ಪೋಸ್ಟ್ ಶೇರ್ ಆಗಿರುವ […]

ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕಂತೆ, ಕುಂದಾಪುರ ಯುವಕ ಅರೆಸ್ಟ್
Follow us on

ಉಡುಪಿ: ಫೇಸ್‌ಬುಕ್‌ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಆರೋಪ ಹಿನ್ನೆಲೆ ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಹರೀಶ್ ಬಂಗೇರ ಎಂಬವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಖಾತೆಯ ಬಳಸಿ ಪೌರತ್ವ ಮಸೂದೆ ಕುರಿತು ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾನೆ.

ಅಲ್ಲದೆ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ಮೋದಿ ನಮ್ಮ ಜೊತೆ ಇದ್ದಾರೆ. ಯುದ್ಧಕ್ಕೆ ಸಿದ್ಧರಾಗಿ ಎಂದು ಪೋಸ್ಟ್ ಶೇರ್ ಮಾಡಿದ್ದ. ನಕಲಿ ಖಾತೆಯ ಮೂಲಕ ಪೋಸ್ಟ್ ಶೇರ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹರೀಶ್​ನನ್ನು ಬಂಧಿಸಿದ್ದಾರೆ.

Published On - 10:22 am, Mon, 23 December 19