ತೀವ್ರ ಸ್ವರೂಪ ಪಡೆದ ‘ಡ್ರ್ಯಾಗನ್’ ವಿರುದ್ಧದ ಆಕ್ರೋಶ..!
ಕೆಲದಿನಗಳಿಂದ ತಣ್ಣಗಾಗಿದ್ದ ಹಾಂಕಾಂಗ್ ಪ್ರತಿಭಟನೆ ಕಿಚ್ಚು ಈಗ ಮತ್ತೆ ಹೊತ್ತಿದೆ. ಚೀನಾ ವಿರುದ್ಧ ಹಾಂಕಾಂಗ್ನಲ್ಲಿ ಶುರುವಾಗಿರುವ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆ ನಿಯಂತ್ರಣಕ್ಕೆ ಹಾಂಕಾಂಗ್ ಪೊಲೀಸರು ಕಠಿಣ ಕ್ರಮಗಳನ್ನ ಅನುಸರಿಸುತ್ತಿದ್ದಾರೆ. ಇದು ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿದೆ. ಹಕ್ಕಿಯಂತೆ ಹಾರಾಡಿದ ಸಾಹಸಿಗರು: ಚೀನಾದಲ್ಲಿ ಆಯೋಜಿಸಿದ್ದ ವಿಂಗ್ ಸ್ಯೂಟ್ ಫ್ಲೈಯಿಂಗ್ ಸ್ಪರ್ಧೆ ಗಮನ ಸೆಳೆಯಿತು. ವಿಶ್ವದ ವಿವಿಧೆಡೆಯಿಂದ ಬಂದ ನೂರಾರು ಸ್ಪರ್ಧಿಗಳು ಆಕಾಶದಲ್ಲಿ ಹಕ್ಕಿಯಂತೆ ಹಾರಾಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಸಾವಿರಾರು ಅಡಿಗಳ ಎತ್ತರದಿಂದ ಭೂಮಿಗೆ ಜಿಗಿದು […]
ಕೆಲದಿನಗಳಿಂದ ತಣ್ಣಗಾಗಿದ್ದ ಹಾಂಕಾಂಗ್ ಪ್ರತಿಭಟನೆ ಕಿಚ್ಚು ಈಗ ಮತ್ತೆ ಹೊತ್ತಿದೆ. ಚೀನಾ ವಿರುದ್ಧ ಹಾಂಕಾಂಗ್ನಲ್ಲಿ ಶುರುವಾಗಿರುವ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನೆ ನಿಯಂತ್ರಣಕ್ಕೆ ಹಾಂಕಾಂಗ್ ಪೊಲೀಸರು ಕಠಿಣ ಕ್ರಮಗಳನ್ನ ಅನುಸರಿಸುತ್ತಿದ್ದಾರೆ. ಇದು ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿದೆ.
ಹಕ್ಕಿಯಂತೆ ಹಾರಾಡಿದ ಸಾಹಸಿಗರು: ಚೀನಾದಲ್ಲಿ ಆಯೋಜಿಸಿದ್ದ ವಿಂಗ್ ಸ್ಯೂಟ್ ಫ್ಲೈಯಿಂಗ್ ಸ್ಪರ್ಧೆ ಗಮನ ಸೆಳೆಯಿತು. ವಿಶ್ವದ ವಿವಿಧೆಡೆಯಿಂದ ಬಂದ ನೂರಾರು ಸ್ಪರ್ಧಿಗಳು ಆಕಾಶದಲ್ಲಿ ಹಕ್ಕಿಯಂತೆ ಹಾರಾಡಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ರು. ಸಾವಿರಾರು ಅಡಿಗಳ ಎತ್ತರದಿಂದ ಭೂಮಿಗೆ ಜಿಗಿದು ಸಾಹಸ ಪ್ರದರ್ಶಿಸಿದ್ರು.
ಹೊತ್ತಿ ಉರಿದ ‘ಕಾಂಗರೂ’ ನಾಡು: ಆಸ್ಟ್ರೇಲಿಯಾದ ಇಡೀ ನ್ಯೂ ಸೌತ್ ವೇಲ್ಸ್ ಭಾಗ ಹೊತ್ತಿ ಉರಿಯುತ್ತಿದೆ. ಚಿಂತಾಜನಕ ಸ್ಥಿತಿ ತಲುಪಿರುವ ಕಾಡ್ಗಿಚ್ಚು, ಲಕ್ಷಾಂತರ ಕಾಡು ಪ್ರಾಣಿಗಳನ್ನೂ ಬಲಿಪಡೆಯುತ್ತಿದ್ದು, ಬೆಂಕಿಯಿಂದ ರಕ್ಷಿಸಿದ ಕೋಲಾಗಳನ್ನ ಆರೈಕೆ ಮಾಡಲಾಗ್ತಿದೆ. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಜನರನ್ನ ಸ್ಥಳಾಂತರ ಮಾಡಲಾಗಿದೆ.
ಮತ್ತೆ ಬಾಲಬಿಚ್ಚಿದ ಐಎಸ್ ಉಗ್ರರು: ಸಿರಿಯಾದಲ್ಲಿ ಮತ್ತೆ ಐಎಸ್ ಭಯೋತ್ಪಾದಕರ ಉಪಟಳ ಹೆಚ್ಚಾಗುತ್ತಿದ್ದು, ಸಿರಿಯಾದ ಸರ್ಕಾರಿ ಪಡೆಗಳಿಂದ ಉಗ್ರರ ನೆಲೆಗಳ ಮೇಲೆ ತೀವ್ರ ಸ್ವರೂಪದ ದಾಳಿ ನಡೆಯುತ್ತಿದೆ. ಉಗ್ರರ ಅಡಗುದಾಣಗಳ ಮೇಲೆ ನಿರಂತರ ದಾಳಿ ನಡೆಸಿ, ಪಾಪಿಗಳ ಹೆಡೆಮುರಿ ಕಟ್ಟಲಾಗುತ್ತಿದೆ.