SpaceX: ಸ್ಪೇಸ್​ಎಕ್ಸ್​ನ ರಾಕೆಟ್​ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾತ್ರಿ ಪ್ರಯಾಣ

ಸ್ಪೇಸ್​ ಎಕ್ಸ್​(SpaceX) ನ ಚಾರ್ಟೆಡ್​ ರಾಕೆಟ್​ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾತ್ರಿ ರಾಯನಾ ಬರ್ನಾವಿ ಪ್ರಯಾಣ ಬೆಳೆಸಿದ್ದಾರೆ. ಇದು ಹ್ಯೂಸ್ಟನ್ ಮೂಲದ ಆಕ್ಸಿಯಮ್ ಸ್ಪೇಸ್ ನಡೆಸಿದ ಎರಡನೇ ಚಾರ್ಟರ್ ಫ್ಲೈಟ್ ಆಗಿದೆ.

SpaceX: ಸ್ಪೇಸ್​ಎಕ್ಸ್​ನ ರಾಕೆಟ್​ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾತ್ರಿ ಪ್ರಯಾಣ
ಸ್ಪೇಸ್​ಎಕ್ಸ್​

Updated on: May 22, 2023 | 11:34 AM

ಸ್ಪೇಸ್​ಎಕ್ಸ್​(SpaceX) ನ ಚಾರ್ಟೆಡ್​ ರಾಕೆಟ್​ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾತ್ರಿ ರಾಯನಾ ಬರ್ನಾವಿ ಪ್ರಯಾಣ ಬೆಳೆಸಿದ್ದಾರೆ. ಇದು ಹ್ಯೂಸ್ಟನ್ ಮೂಲದ ಆಕ್ಸಿಯಮ್ ಸ್ಪೇಸ್ ನಡೆಸಿದ ಎರಡನೇ ಚಾರ್ಟರ್ ರಾಕೆಟ್ಇದಾಗಿದೆ. ಹೊಸ ಟಿಕೆಟ್‌ಗಳ ಬೆಲೆಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಹಿಂದೆ ಕಂಪನಿಯು ಪ್ರತಿ ಸೀಟಿಗೆ 55 ಮಿಲಿಯನ್ ಡಾಲರ್ ಬೆಲೆಗಳನ್ನು ಉಲ್ಲೇಖಿಸಿತ್ತು.

ಬರ್ನಾವಿ ಸೌದಿಯ ಮೊದಲ ಮಹಿಳಾ ಗಗನಯಾತ್ರಿ
ಈ ಬಾರಿ ಸೌದಿ ಅರೇಬಿಯಾ ಸರ್ಕಾರವನ್ನು ಸ್ಟೆಮ್ ಸೆಲ್ ಸಂಶೋಧಕರಾಗಿರುವ ರಾಯನಾ ಬರ್ನಾವಿ ಪ್ರತಿನಿಧಿಸುತ್ತಿದ್ದಾರೆ. ಅವರು ಬಾಹ್ಯಾಕಾಶದಲ್ಲಿ ಹಾರಾಡಿದ ಸೌದಿಯ ಮೊದಲ ಮಹಿಳೆಯಾಗಲಿದ್ದಾರೆ. ಈ ನಾಲ್ವರು ಗಗನಯಾತ್ರಿಗಳು ಸೋಮವಾರ ಬೆಳಗ್ಗೆ  ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ.

ಮತ್ತಷ್ಟು ಓದಿ: ಸ್ಪೇಸ್ ಶಿಪ್ ರಾಕೆಟ್ ಉಡಾವಣೆಯನ್ನು ಮುಂದೂಡಿದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರೆಲ್ಲರೂ ಒಂದು ವಾರಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. ಸೌದಿ ರಾಜಕುಮಾರ 1985 ರಲ್ಲಿ ಸುಲ್ತಾನ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಬಾಹ್ಯಾಕಾಶಯಾನ ಮಾಡಿದ್ದರು. ಬಳಿಕ ಇದೀಗ ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಸೌದಿ ಅರೇಬಿಯಾದ ಈ ಗಗನಯಾತ್ರಿಗಳು ರಾಕೆಟ್‌ ಸವಾರಿ ಮಾಡಿದ್ದಾರೆ.

ಸ್ತನ ಕ್ಯಾನ್ಸರ್ ಸಂಶೋಧಕರಾದ ರೈಯಾನಾ ಬರ್ನಾವಿ ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಸೌದಿ ಮಹಿಳೆಯಾಗಿದ್ದಾರೆ. ಅವರೊಂದಿಗೆ ಸೌದಿ ಅಲಿ ಅಲ್-ಕರ್ನಿ ಎಂಬ ಫೈಟರ್ ಪೈಲಟ್ ಕೂಡ ಇದ್ದಾರೆ. ಸಿಬ್ಬಂದಿ ISS ನಲ್ಲಿ ಸುಮಾರು 10 ದಿನಗಳನ್ನು ಕಳೆಯಬೇಕಾಗಿದೆ. ನಾಲ್ಕು ಸದಸ್ಯರ ತಂಡವು ISS ನಲ್ಲಿದ್ದಾಗ ಸುಮಾರು 20 ಪ್ರಯೋಗಗಳನ್ನು ಕೈಗೊಳ್ಳಲು ಸಜ್ಜಾಗಿದೆ.

ಅವುಗಳಲ್ಲಿ ಒಂದು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಕಾಂಡಕೋಶಗಳ ನಡವಳಿಕೆಯನ್ನು ಅಧ್ಯಯನ ಮಾಡುವುದನ್ನು ಒಳಗೊಂಡಿರುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ