AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೇಸ್ ಶಿಪ್ ರಾಕೆಟ್ ಉಡಾವಣೆಯನ್ನು ಮುಂದೂಡಿದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್

ಎಲಾನ್ ಮಸ್ಕ್ ಅವರು ತನ್ನ ಸಂಸ್ಥೆ ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಆಗಿರುವ ಸ್ಟಾರ್ ಶಿಪ್‌ನ ಉಡಾವಣೆಯನ್ನು ತಡೆಹಿಡಿದಿದ್ದಾರೆ. ಒಂದು ತಾಂತ್ರಿಕ ಸಮಸ್ಯೆಯ ಕಾರಣದಿಂದ ಉಡಾವಣೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಸ್ಪೇಸ್ ಎಕ್ಸ್ ನಿರ್ಮಾಣದ ಸೂಪರ್ ಹೆವಿ ರಾಕೆಟ್ ಯುಕೆ ಸಮಯ, ಮಧ್ಯಾಹ್ನ 2:20ಕ್ಕೆ ಉಡಾವಣೆಗೊಳ್ಳಬೇಕಿತ್ತು. ಆದರೆ ತಜ್ಞರು ಉಡಾವಣೆಯ ಕೌಂಟ್ ಡೌನ್ ಆರಂಭಗೊಂಡು, 40 ಸೆಕೆಂಡುಗಳು ಬಾಕಿ ಇದ್ದಾಗ ಉಡಾವಣೆಯನ್ನು ಸ್ಥಗಿತಗೊಳಿಸಿದರು. 390 ಅಡಿಗಳ ಬೃಹತ್ ರಾಕೆಟ್ ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ […]

ಸ್ಪೇಸ್ ಶಿಪ್ ರಾಕೆಟ್ ಉಡಾವಣೆಯನ್ನು ಮುಂದೂಡಿದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್
ಸ್ಪೇಸ್​ಎಕ್ಸ್​
ನಯನಾ ರಾಜೀವ್
|

Updated on: Apr 18, 2023 | 9:57 AM

Share

ಎಲಾನ್ ಮಸ್ಕ್ ಅವರು ತನ್ನ ಸಂಸ್ಥೆ ಸ್ಪೇಸ್ ಎಕ್ಸ್ ನಿರ್ಮಿಸಿರುವ ಜಗತ್ತಿನ ಅತಿದೊಡ್ಡ ರಾಕೆಟ್ ಆಗಿರುವ ಸ್ಟಾರ್ ಶಿಪ್‌ನ ಉಡಾವಣೆಯನ್ನು ತಡೆಹಿಡಿದಿದ್ದಾರೆ. ಒಂದು ತಾಂತ್ರಿಕ ಸಮಸ್ಯೆಯ ಕಾರಣದಿಂದ ಉಡಾವಣೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಸ್ಪೇಸ್ ಎಕ್ಸ್ ನಿರ್ಮಾಣದ ಸೂಪರ್ ಹೆವಿ ರಾಕೆಟ್ ಯುಕೆ ಸಮಯ, ಮಧ್ಯಾಹ್ನ 2:20ಕ್ಕೆ ಉಡಾವಣೆಗೊಳ್ಳಬೇಕಿತ್ತು. ಆದರೆ ತಜ್ಞರು ಉಡಾವಣೆಯ ಕೌಂಟ್ ಡೌನ್ ಆರಂಭಗೊಂಡು, 40 ಸೆಕೆಂಡುಗಳು ಬಾಕಿ ಇದ್ದಾಗ ಉಡಾವಣೆಯನ್ನು ಸ್ಥಗಿತಗೊಳಿಸಿದರು.

390 ಅಡಿಗಳ ಬೃಹತ್ ರಾಕೆಟ್ ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಉಡಾವಣಾ ವೇದಿಕೆಯಲ್ಲೇ ಇರಲಿದೆ. ಮುಂದೊಂದು ದಿನ ಈ ರಾಕೆಟ್ ನಾಸಾಗಾಗಿ ಮಾನವರನ್ನು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಒಯ್ಯಲಿದೆ.

“ರಾಕೆಟ್‌ನ ಪ್ರೆಶರ್ ವಾಲ್ವ್‌ನಲ್ಲಿ ಏನೋ ಸಮಸ್ಯೆ ಇರುವಂತೆ ಕಂಡುಬಂದಿದೆ. ಅದು ಸದ್ಯದಲ್ಲೇ ಕಾರ್ಯಾಚರಿಸಲು ಆರಂಭಿಸದಿದ್ದರೆ ಉಡಾವಣೆಯನ್ನು ಇಂದು ನಡೆಸಲು ಸಾಧ್ಯವಿಲ್ಲ” ಎಂದಿದ್ದಾರೆ ಇಲಾನ್ ಮಸ್ಕ್.

ಸ್ಪೇಸ್ ಎಕ್ಸ್ ಮುಖ್ಯ ಇಂಜಿನಿಯರ್ ಆಗಿರುವ ಜಾನ್ ಇನ್ಸ್‌ಪ್ರಕರ್ ಅವರು “ಎಲ್ಲವನ್ನೂ ಅವಲೋಕಿಸಿದ ಬಳಿಕ, ನಾವು ಉಡಾವಣೆಯನ್ನು ಇಂದು ನಡೆಸುವುದು ಬೇಡ ಎಂದು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಅವರು ಈ ಬೃಹತ್ ರಾಕೆಟ್‌ಗೆ ಇಂಧನ ತುಂಬಿಸುತ್ತಿರುವಾಗ ತಂಡದ ಸದಸ್ಯರಿಗೆ ಈ ಸಮಸ್ಯೆ ಎದುರಾಗಿರುವುದು ಅರಿವಿಗೆ ಬಂತು ಎಂದರು.

ಸ್ಪೇಸ್ ಎಕ್ಸ್‌ನ ಇಂಜಿನಿಯರಿಂಗ್ ಮುಖ್ಯಸ್ಥರಾದ ಕೇಟ್ ಟೈಸ್ ಅವರು, “ಈ್ ಎದುರಾಗಿರುವ ಸಮಸ್ಯೆಯನ್ನು ಸರಿಪಡಿಸಲು ನಮಗೆ ಕನಿಷ್ಠ 48 ಗಂಟೆಗಳು ಬೇಕಾಗಬಹುದು. ಆದರೆ ದುರದೃಷ್ಟವಶಾತ್ ನಾವು ಇಂದು ಕೌಂಟ್ ಡೌನನ್ನು ಸ್ಥಗಿತಗೊಳಿಸಬೇಕಾಯಿತು” ಎಂದರು.

ಸ್ಪೇಸ್ ಶಿಪ್ ವೈಶಿಷ್ಟ್ಯಗಳು

ಮಸ್ಕ್ ತನ್ನ ಸ್ಟಾರ್ ಶಿಪ್ ಅನ್ನು ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ಉಡಾವಣಾ ವಾಹನಗಳಂತೆಯೇ ಮತ್ತೆ ಮತ್ತೆ ಉಡಾವಣೆ ನಡೆಸಿ, ಖರ್ಚು ಕಡಿತಗೊಳಿಸುವ ಉದ್ದೇಶ ಹೊಂದಿದ್ದಾರೆ.

ಒಂದಕ್ಕಿಂತ ಹೆಚ್ಚು ಬಾರಿ ಉಡಾವಣೆಗೊಳಿಸುವ ರಾಕೆಟ್ ಅಭಿವೃದ್ಧಿ ಪಡಿಸುವ ಮೂಲಕ ಸ್ಪೇಸ್ ಎಕ್ಸ್ ಉಡಾವಣಾ ಉದ್ಯಮವನ್ನೇ ಬದಲಾಯಿಸಿದೆ.

ಈಗ 48 ಗಂಟೆಗಳ ಕಾಲ ಉಡಾವಣೆ ಸ್ಥಗಿತಗೊಳಿಸಿರುವ ಸ್ಟಾರ್ ಶಿಪ್‌ನಲ್ಲಿನ ತಾಂತ್ರಿಕ ದೋಷ ಅಂತಿಮ ಹಂತದಲ್ಲಿ ಗಮನಕ್ಕೆ ಬಂದಿದೆ. ಈ ಉಡಾವಣೆ 2 ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು ಒಂದು ಸೂಪರ್ ಹೆವಿ ಬೂಸ್ಟರ್ ಆಗಿದ್ದು, 230 ಅಡಿ ಎತ್ತರದಲ್ಲಿದ್ದು, 33 ಇಂಜಿನ್‌ಗಳನ್ನು ಹೊಂದಿದೆ. ಇದನ್ನು ಚಲಾಯಿಸಲು ದ್ರವ ಆಮ್ಲಜನಕ ಹಾಗೂ ಮಿಥೇನ್‌ಗಳ ಮಿಶ್ರಣವನ್ನು ಬಳಸಲಾಗುತ್ತದೆ. ಈ ಮಿಶ್ರಣ 17 ಮಿಲಿಯನ್ ಪೌಂಡ್ ಥ್ರಸ್ಟ್ ಉತ್ಪಾದಿಸುತ್ತದೆ. ಅಂದರೆ, ಅಪೋಲೋ ಗಗನಯಾತ್ರಿಗಳನ್ನು ಚಂದ್ರನ ಮೇಲೊಯ್ದ ಸ್ಯಾಟರ್ನ್ V ರಾಕೆಟ್‌ಗಿಂತ ಎರಡು ಪಟ್ಟಿಗೂ ಹೆಚ್ಚು ಥ್ರಸ್ಟ್ ಹೊಂದಿದೆ.

ಮತ್ತಷ್ಟು ಓದಿ: ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ

ಉಡಾವಣೆಗೊಂಡ ಮೂರು ನಿಮಿಷಗಳ ಬಳಿಕ ಈ ಹಂತ ಬೇರ್ಪಟ್ಟು, ನೌಕೆಯ ಮೇಲ್ಭಾಗದಲ್ಲಿರುವ, ಸ್ಟಾರ್ ಶಿಪ್ ಎಂದು ಕರೆಯಲಾಗುವ ಭಾಗದ ಆರು ಇಂಜಿನ್‌ಗಳು ಕಾರ್ಯಾಚರಣೆ ಆರಂಭಿಸುತ್ತವೆ.

ಸೂಪರ್ ಹೆವಿ ಬೂಸ್ಟರ್ ಭೂಮಿಗೆ ಮರಳುವ ಸಂದರ್ಭದಲ್ಲಿ ತನ್ನ ಬಾಲದ ಮೂಲಕ ಭೂಸ್ಪರ್ಶ ನಡೆಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಪರೀಕ್ಷಾ ಹಾರಾಟದ ಸಂದರ್ಭದಲ್ಲಿ ಈ ಏರ್‌ಕ್ರಾಫ್ಟ್ ಸಮುದ್ರದಲ್ಲಿ ಕ್ರ್ಯಾಷ್ ಲ್ಯಾಂಡ್ ನಡೆಸಲಿದೆ.

ಒಟ್ಟು ಉಡಾವಣಾ ವಾಹನ 390 ಅಡಿ ಎತ್ತರವಾಗಿದ್ದು, ಸ್ಟಾರ್ ಶಿಪ್ 164 ಅಡಿ ಎತ್ತರ ಮತ್ತು ಬೂಸ್ಟರ್ 230 ಅಡಿ ಎತ್ತರವಾಗಿವೆ.

ಸ್ಟಾರ್ ಶಿಪ್ ಸ್ಪೇಸ್ ಕ್ರಾಫ್ಟ್ ಭೂಮಿಗೆ ಸುತ್ತುವರಿದು, ಬಳಿಕ ಪೆಸಿಫಿಕ್‌ ಸಮುದ್ರಕ್ಕಿಳಿಯಲಿದೆ. ಇದರ ಅಂತಿಮ ಉದ್ದೇಶ ಗಗನಯಾತ್ರಿಗಳನ್ನು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಕರೆದೊಯ್ಯುವುದಾಗಿದೆ.

ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಂತಾರಾಷ್ಟ್ರೀಯಸ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ