ಕದ್ದು-ಮುಚ್ಚಿ ‘ವಾರ್ 2’-‘ಕೂಲಿ’ ಸಿನಿಮಾ ವೀಕ್ಷಿಸಿದ ಸ್ಟಾರ್ ನಟ
Coolie vs War 2: ರಜನೀಕಾಂತ್ ನಟನೆಯ ‘ಕೂಲಿ’ ಮತ್ತು ಹೃತಿಕ್ ರೋಷನ್-ಜೂ ಎನ್‌ಟಿಆರ್ ನಟನೆಯ ‘ವಾರ್ 2’ ಸಿನಿಮಾ ಎರಡೂ ಒಂದೇ ದಿನ ಬಿಡುಗಡೆ ಆಗಿವೆ. ಮೂವರು ಸ್ಟಾರ್ ನಟರುಗಳಿಗೂ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರ ಅಭಿಮಾನಿಗಳ ಪಟ್ಟಿಯಲ್ಲಿ ಸಿನಿಮಾ ಸ್ಟಾರ್ಗಳು ಸಹ ಇದ್ದಾರೆ. ಇದೀಗ ಸ್ಟಾರ್ ನಟರೊಬ್ಬರು ಕದ್ದು ಮುಚ್ಚಿ ಈ ಎರಡೂ ಸಿನಿಮಾಗಳನ್ನು ನೋಡಿದ್ದಾರೆ. ಯಾರವರು?

ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆಯಾಗಿ ಗುರುವಾರ (ಆಗಸ್ಟ್ 14) ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗಿವೆ. ಸೂಪರ್‌ಸ್ಟಾರ್ ರಜನಿಕಾಂತ್ ನಾಯಕನಾಗಿ ಮತ್ತು ನಾಗಾರ್ಜುನ ಖಳನಾಯಕನಾಗಿ ‘ಕೂಲಿ’ ಚಿತ್ರದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ ‘ವಾರ್ 2′ ಕೂಡ ರಿಲೀಸ್ ಆಗಿದೆ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ, ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು. ಏತನ್ಮಧ್ಯೆ, ಸ್ಟಾರ್ ನಾಯಕರು ಇತ್ತೀಚೆಗೆ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಇದಕ್ಕೆ ನಾನಿ ಕೂಡ ಹೊರತಾಗಿಲ್ಲ.
ಸೆಲೆಬ್ರಿಟಿಗಳಿಗೂ ಸ್ಟಾರ್ ಹೀರೋಗಳ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬೇಕು ಎಂದಿರುತ್ತದೆ. ಆದರೆ, ಹಾಗೆ ನೋಡೋದು ಎಂದರೆ ಅದು ಅಷ್ಟು ಸುಲಭ ಅಲ್ಲ. ಇದಕ್ಕಾಗಿ ಅನೇಕ ಸೆಲೆಬ್ರಿಟಿಗಳು ಮುಖ ಮುಚ್ಚಿಕೊಂಡು ಬರುತ್ತಾರೆ. ಈ ಮೊದಲು ರಶ್ಮಿಕಾ ಮಂದಣ್ಣ ಮುಖವಾಡ ಹಾಕಿಕೊಂಡು ಥಿಯೇಟರ್‌ಗೆ ಹೋಗಿ ‘ಕಿಂಗ್‌ಡಮ್’ ಸಿನಿಮಾ ವೀಕ್ಷಿಸಿದ್ದಾರೆ ಎಂಬ ವರದಿಗಳು ಬಂದವು. ಈಗ ನಾನಿ ‘ವಾರ್ 2’ ಹಾಗೂ ‘ಕೂಲಿ ಸಿನಿಮಾಗಳನ್ನು ರಹಸ್ಯವಾಗಿ ವೀಕ್ಷಿಸಿದ್ದಾರೆ.
ನಾನಿ ಕಪ್ಪು ಬಣ್ಣದ ಮಾಸ್ಕ್ ಜೊತೆ ಮತ್ತು ಕಪ್ಪು ಬಣ್ಣದ ಡ್ರೆಸ್, ಕಪ್ಪು ಕ್ಯಾಪ್ ಮತ್ತು ಮುಖವಾಡ ಧರಿಸಿದ್ದರಯ, ಅಭಿಮಾನಿಗಳು ಅವರನ್ನು ಗುರುತಿಸಲಿಲ್ಲ. ಕೆಲವರು ಅವರಬ್ಬಯ ಗುರುತಿಸಿದರು. ಕೆಲವರು ನಾನಿ ಥಿಯೇಟರ್‌ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:‘ಕೂಲಿ’ಗೂ ಜಗ್ಗಲಿಲ್ಲ, ‘ವಾರ್ 2’ಗೂ ಬಗ್ಗಲಿಲ್ಲ; ಹೌಸ್ಫುಲ್ ಶೋಗಳಿಂದ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
ಗುರುವಾರ ರಾತ್ರಿ, ನಾನಿ ಎಎಂಬಿ ಮಾಲ್‌ನಲ್ಲಿ ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳನ್ನು ಒಂದರ ನಂತರ ಒಂದರಂತೆ ವೀಕ್ಷಿಸಿದರು. ಆದರೆ, ಯಾರೂ ಗುರುತಿಸದಂತೆ ಮುಖವನ್ನು ಸಂಪೂರ್ಣವಾಗಿ ಮುಖವಾಡದಿಂದ ಮುಚ್ಚಿಕೊಂಡು ಕಾಣಿಸಿಕೊಂಡರು. ಆದರೆ ಅವರು ಎಷ್ಟೇ ರಹಸ್ಯವಾಗಿ ಹೋದರೂ, ಅಭಿಮಾನಿಗಳು ಗುರುತಿಸುತ್ತಾರೆ. ನಾನಿಯನ್ನು ಕೆಲವರು ಗುರುಸಿದ್ದಾರೆ. ಆದರೆ, ಅವರು ಮುಖ ಮುಚ್ಚಿಕೊಳ್ಳದೆ ಬಂದಿದ್ದರೆ ಖಂಡಿತವಾಗಿಯೂ ಅಭಿಮಾನಿಗಳು ಮುತ್ತಿಕೊಳ್ಳುತ್ತದೆ. ಆದರೆ, ಮುಖ ಮುಚ್ಚಿಕೊಂಡಿದ್ದರಿಂದ ಆ ರೀತಿ ಆಗಿಲ್ಲ ಎಂಬುದು ಖುಷಿಯ ವಿಚಾರ.
ನಾನಿ ಅವರು ಕೊನೆಯದಾಗಿ ‘ಹಿಟ್ 3’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾನ ಫ್ಯಾನ್ಸ್ ಅಷ್ಟಾಗಿ ಇಷ್ಟಪಟ್ಟಿಲ್ಲ. ಅವರು ‘ದಿ ಪ್ಯಾರಡೈಸ್’ ಚಿತ್ರದ ಭಾಗವಾಗುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



