AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೂಲಿ’ಗೂ ಜಗ್ಗಲಿಲ್ಲ, ‘ವಾರ್ 2’ಗೂ ಬಗ್ಗಲಿಲ್ಲ; ಹೌಸ್​ಫುಲ್ ಶೋಗಳಿಂದ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್

ರಜನಿಕಾಂತ್ ನಟನೆಯ ಕೂಲಿ ಮತ್ತು ಜೂನಿಯರ್ ಎನ್ಟಿಆರ್ ನಟನೆಯ ವಾರ್ 2 ಚಿತ್ರಗಳ ಹೊರತಾಗಿಯೂ ‘ಸು ಫ್ರಮ್ ಸೋ’ ಸಿನಿಮಾ ಅನಿರೀಕ್ಷಿತ ಯಶಸ್ಸು ಕಂಡಿದೆ. ನಾಲ್ಕನೇ ವಾರದಲ್ಲೂ ಚಿತ್ರ ಹೌಸ್‌ಫುಲ್ ಆಗಿವೆ. 67.36 ಕೋಟಿ ರೂಪಾಯಿಗಳ ಕನ್ನಡ ಕಲೆಕ್ಷನ್ ಮತ್ತು 97.34 ಕೋಟಿ ರೂಪಾಯಿಗಳ ವಿಶ್ವವ್ಯಾಪಿ ಕಲೆಕ್ಷನ್‌ನೊಂದಿಗೆ ಚಿತ್ರ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರಲಿದೆ.

‘ಕೂಲಿ’ಗೂ ಜಗ್ಗಲಿಲ್ಲ, ‘ವಾರ್ 2’ಗೂ ಬಗ್ಗಲಿಲ್ಲ; ಹೌಸ್​ಫುಲ್ ಶೋಗಳಿಂದ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on: Aug 16, 2025 | 9:03 AM

Share

ರಜನಿಕಾಂತ್ ನಟನೆಯ ಕೂಲಿ, ಜೂನಿಯರ್ ಎನ್​ಟಿಆರ್ ಅಭಿನಯದ ‘ವಾರ್ 2’ ಚಿತ್ರಗಳಿಂದ ‘ಸು ಫ್ರಮ್ ಸೋ’ ಸಿನಿಮಾದ (Su From So Movie) ಗಳಿಕೆ ಕಡಿಮೆ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಊಹೆ ತಪ್ಪಾಗಿದೆ. ಸಿನಿಮಾ ಕಲ್ಪನೆಗೂ ಮೀರಿ ಯಶಸ್ಸು ಕಂಡಿದೆ. 23ನೇ ದಿನವೂ ಸಿನಿಮಾಗೆ ಟಿಕೆಟ್ ಸಿಗುತ್ತಿಲ್ಲ ಎಂದರೆ ಈ ಚಿತ್ರದ ತಾಕತ್ತು ಎಷ್ಟಿದೆ ಎಂಬುದನ್ನು ಊಹಿಸಿ. ಈ ಸಿನಿಮಾ ಇನ್ನೂ ಕೆಲ ವಾರ ಯಶಸ್ವಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

‘ವಾರ್ 2’ ಸಿನಿಮಾ ಹಾಗೂ ‘ಕೂಲಿ’ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿವೆ. ಈ ಎರಡೂ ಸಿನಿಮಾಗಳು ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಈ ಎರಡೂ ಸಿನಿಮಾಗಳ ಅಬ್ಬರದ ಮಧ್ಯೆಯೂ ‘ಸು ಫ್ರಮ್ ಸೋ’ ತನ್ನ ಕಲೆಕ್ಷನ್ ಮುಂದುವರಿಸಿದೆ. ಈ ಚಿತ್ರ ಕನ್ನಡಿಗರ ಜೊತೆ ಪರಭಾಷಿಗರಿಗೂ ಹೆಚ್ಚು ಇಷ್ಟ ಆಗಿದೆ.  ಈ ಚಿತ್ರವನ್ನು ಜನರು ಕೈ ಬಿಟ್ಟಿಲ್ಲ.

‘ಸು ಫ್ರಮ್ ಸೋ’ ಸಿನಿಮಾ ಆಗಸ್ಟ್ 15ರಂದು 2.50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆಗಸ್ಟ್ 14ರಂದು ಈ ಸಿನಿಮಾ 1.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅಂದರೆ ಸಿನಿಮಾದ ಕಲೆಕ್ಷನ್ ಮತ್ತೆ ಹೆಚ್ಚಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ನಾಲ್ಕನೇ ವಾರವೂ ಸಿನಿಮಾ ಅಬ್ಬರ ಮುಂದುವರಿದಿದೆ.

ಇದನ್ನೂ ಓದಿ
Image
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ
Image
ಸೈಫ್ ಅಲಿ ಖಾನ್ ಜನ್ಮದಿನ; ನಟನ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ
Image
ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್​ಗೆ ಬಾರದೆ ಮಂಕಾಗಿ ಕುಳಿತ ದರ್ಶನ್
Image
‘ಕೂಲಿ’, ‘ವಾರ್ 2’ 2ನೇ ದಿನದ ಗಳಿಕೆ ಇಷ್ಟೊಂದಾ? ಅಬ್ಬಬ್ಬಾ ಊಹಿಸಲೂ ಅಸಾಧ್ಯ

ಇದನ್ನೂ ಓದಿ:  ‘ಕೂಲಿ’, ‘ವಾರ್ 2’ ಚಿತ್ರದ ಅಬ್ಬರದ ಮಧ್ಯೆಯೂ ಸ್ಥಿರವಾಗಿ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’

ಸದ್ಯ ಸಿನಿಮಾದ ಕನ್ನಡದ ಕಲೆಕ್ಷನ್ 67.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಸಿನಿಮಾದ ಕಲೆಕ್ಷನ್ 97.34 ಕೋಟಿ ರೂಪಾಯಿ ಆಗಿದೆ. ಈ ಚಿತ್ರಕ್ಕೆ ವಿದೇಶದಿಂದ 11 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಹರಿದು ಬಂದಿದೆ. ಇದು ಸಿನಿಮಾದ ಹೆಚ್ಚುಗಾರಿಕೆ. ಇಂದು ಅಥವಾ ನಾಳೆ ವೇಳೆಗೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು