ರಶ್ಮಿಕಾ ವೃತ್ತಿ ಜೀವನದ ವಿಶೇಷ ಸಿನಿಮಾ ಬಿಡುಗಡೆ ಆಗಿ ಏಳು ವರ್ಷ, ಇಲ್ಲಿವೆ ಚಿತ್ರಗಳು
Rashmika Mandanna: ನಟಿ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆದರೆ ಈಗ ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ.ರಶ್ಮಿಕಾ ಮಂದಣ್ಣ ಹೇಳಿಕೊಂಡಿರುವಂತೆ ಅವರ ವೃತ್ತಿ ಜೀವನದ ಬಲು ವಿಶೇಷವಾದ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳು ಆಗಿವೆ. ಇಲ್ಲಿವೆ ಚಿತ್ರಗಳು...
Updated on: Aug 15, 2025 | 11:14 PM

ನಟಿ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆದರೆ ಈಗ ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿಕೊಂಡಿರುವಂತೆ ಅವರ ವೃತ್ತಿ ಜೀವನದ ಬಲು ವಿಶೇಷವಾದ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳು ಆಗಿವೆ.

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಗೀತಾ ಗೋವಿಂದಂ’ ಬಿಡುಗಡೆ ಆಗಿ ಇಂದಿಗೆ ಏಳು ವರ್ಷ.

‘ಗೀತಾ ಗೋವಿಂದಂ’ ಸಿನಿಮಾ ಆಗಸ್ಟ್ 15, 2018 ರಂದು ಬಿಡುಗಡೆ ಆಗಿತ್ತು, ಐದು ಕೋಟಿ ಬಜೆಟ್ನ ಈ ಸಿನಿಮಾ 132 ಕೋಟಿ ರೂಪಾಯಿ ಗಳಿಸಿತ್ತು.

ಈ ಸಿನಿಮಾ ಹಿಟ್ ಆಗುವ ಮೂಲಕ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾದರು. ಜೊತೆಗೆ ವಿಜಯ್ ದೇವರಕೊಂಡಗೆ ಗೆಳತಿಯೂ ಆದರು.

ಏಳು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದಿರುವ ರಶ್ಮಿಕಾ, ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರೂ ಚೆನ್ನಾಗಿದ್ದಾರೆಂದು ಭಾವಿಸುವೆ ಎಂದಿದ್ದಾರೆ.

ಏಳು ವರ್ಷಗಳ ಬಳಿಕ ಇದೀಗ ‘ಗೀತ ಗೋವಿಂದಂ 2’ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.




