ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್ಗೆ ಬಾರದೆ ಮಂಕಾಗಿ ಕುಳಿತ ದರ್ಶನ್; ಹೇಳಿದ್ದೇನು?
ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಧ್ಯಂತರ ಜಾಮೀನು ಪಡೆದು ಹಲವು ಷರತ್ತುಗಳನ್ನು ಉಲ್ಲಂಘಿಸಿರೋದು ಇದಕ್ಕೆ ಕಾರಣ. ಬೆನ್ನು ನೋವು ಎಂದು ವಿಚಾರಣೆಗೆ ಗೈರು ಹಾಜರಾಗಿದ್ದರೂ, ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ.

ನಟ ದರ್ಶನ್ (Darshan) ಅವರು ಸದ್ಯ ಜೈಲು ಹಕ್ಕಿ ಆಗಿದ್ದಾರೆ. ಇಷ್ಟು ದಿನ ಜಾಮೀನು ಪಡೆದು ಹಾಯಾಗಿ ಓಡಾಡಿಕೊಂಡಿದ್ದ ಅವರಿಗೆ ಈಗ ಮತ್ತೆ ಜೈಲಿನೂಟ ಮಾಡುವ ಪರಿಸ್ಥಿತಿ ಬಂದಿದೆ. ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ದ ಅವರು, ನಂತರ ಪೂರ್ತಿ ಪ್ರಮಾಣದ ಜಾಮೀನು ಪಡೆದರು. ಶೂಟಿಂಗ್ಗಾಗಿ ಹಾಯಾಗಿ ಸುತ್ತಾಡಿಕೊಂಡಿದ್ದರು. ವಿದೇಶಕ್ಕೂ ಕೂಡ ಹೋಗಿ ಬಂದರು. ಇದೆಲ್ಲವನ್ನೂ ಸುಪ್ರೀಂಕೋರ್ಟ್ ಪರಿಗಣಿಸಿದೆ. ಹೀಗಾಗಿ, ಅವರ ಜಾಮೀನು ರದ್ದಾಗಿದೆ. ಇದರಿಂದ ದರ್ಶನ್ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ.
ದರ್ಶನ್ ಅವರು ಜಾಮೀನು ಪಡೆದ ಬಳಿಕ ಮಾಡಿದ ತಪ್ಪು ಒಂದೆರಡಲ್ಲ. ಅವರು ಬೇಕಾಬಿಟ್ಟಿ ನಡೆದುಕೊಂಡಿದ್ದೇ ಅವರಿಗೆ ಮುಳುವಾಯಿತು. ಪ್ರಕರಣದ ಸಾಕ್ಷಿ ಚಿಕ್ಕಣ್ಣ ಜೊತೆ ದರ್ಶನ್ ಸುತ್ತಾಟ ಮಾಡಿಕೊಂಡಿದ್ದರು. ಬೆನ್ನು ನೋವಿನ ಕಾರಣ ನೀಡಿ ವಿಚಾರಣೆಗೆ ಗೈರಾಗೋ ಅವರು, ಮರುದಿನವೇ ಸಿನಿಮಾ ಪ್ರದರ್ಶನದಲ್ಲಿ ಭಾಗಿ ಆಗಿದ್ದರು. ಇದೆಲ್ಲವೂ ಕೋರ್ಟ್ ಕಣ್ಣು ಕುಕ್ಕಿದೆ. ಹೀಗಾಗಿ, ಕೋರ್ಟ್ ಮತ್ತೆ ಅವರನ್ನು ಜೈಲಿಗೆ ಕಳುಹಿಸಿದೆ.
ಸದ್ಯ ದರ್ಶನ್ ಜೈಲಿನಲ್ಲಿ ಮಂಕಾಗಿ ಕುಳಿತಿದ್ದಾರೆ ಎನ್ನಲಾಗಿದೆ. ಆಗಸ್ಟ್ 15ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ವತಂತ್ರ್ಯೋತ್ಸವದ ಸೆಲೆಬ್ರೇಷನ್ ನಡೆದಿದೆ. ಆದರೆ, ಇದರಲ್ಲಿ ಭಾಗಿ ಅವರು ನಿರಾಕರಿಸಿದ್ದಾರೆ. ಕರೆದಾಗ ‘ನಾನು ಬರಲ್ಲ’ ಎಂದಷ್ಟೇ ಹೇಳಿ ಮತ್ತೆ ಮೌನಕ್ಕೆ ಜಾರಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ದರ್ಶನ್ ಬಂಧನದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ‘ಡೆವಿಲ್’ ನಿರ್ದೇಶಕ ಪ್ರಕಾಶ್
ದರ್ಶನ್ ಅವರಿಗೆ ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಅವರ ಕೈದಿ ಸಂಖ್ಯೆ 7314, ಪವಿತ್ರಾ ಗೌಡ ಕೈದಿ ಸಂಖ್ಯೆ 7313. ದರ್ಶನ್ಗೆ ಜಾಮೀನು ರದ್ದು ಮಾಡಿರೋದು ಸುಪ್ರೀಂಕೋರ್ಟ್. ಹೀಗಾಗಿ, ಅವರು ಸುಪ್ರೀಂಕೋರ್ಟ್ನ ವಿಸ್ತ್ರತ ಪೀಠಕ್ಕೆ ತೆರಳಿ ಜಾಮೀನು ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಆದೇಶದಲ್ಲಿ ತಪ್ಪಿದೆ ಎಂಬುದನ್ನು ತೋರಿಸಿದರೆ ಮಾತ್ರ ಕೋರ್ಟ್ ವಿಚಾರಣೆಗೆ ಒಪ್ಪುತ್ತದೆ. ಇದು ಸಾಧ್ಯವಾಗದ ಮಾತು. ಇನ್ನು, ಅವರು ಮತ್ತೊಮ್ಮೆ ಕೆಳ ಹಂತದ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ, ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿರುವುದರಿಂದ ಇಲ್ಲಿಯೂ ಅಷ್ಟು ಸುಲಭದಲ್ಲಿ ಜಾಮೀನು ಸಿಗೋದಿಲ್ಲ. ಬೆನ್ನು ನೋವಿನ ಕಾರಣ ನೀಡಿದರೂ ಅದು ಈ ಬಾರಿ ಕೆಲಸ ಮಾಡೋದು ಅನುಮಾನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








