AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲಗಲಿ ಬೇಡರ ನಾಯಕನಾಗಿ ಡಾಲಿ, ‘ಹಲಗಲಿ’ ಟೀಸರ್ ಇಲ್ಲಿದೆ

Daali Dhananjay Movie: ಬ್ರಿಟೀಷರ ವಿರುದ್ಧದ ಕರ್ನಾಟಕದ ಮೊದಲ ಸಶಸ್ತ್ರ ಹೋರಾಟದ ಕತೆ ಹಲಗಲಿ ಬೇಡರ ಕತೆ ಇದೀಗ ಸಿನಿಮಾ ಆಗುತ್ತಿದೆ. ಡಾಲಿ ಧನಂಜಯ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕತೆಯುಳ್ಳ ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಆಗಿದೆ. ಟೀಸರ್ ಹೇಗಿದೆ?

ಹಲಗಲಿ ಬೇಡರ ನಾಯಕನಾಗಿ ಡಾಲಿ, ‘ಹಲಗಲಿ’ ಟೀಸರ್ ಇಲ್ಲಿದೆ
Halagali
ಮಂಜುನಾಥ ಸಿ.
|

Updated on:Aug 15, 2025 | 6:08 PM

Share

ಹಲಗಲಿ ಬೇಡರ ಸಶಸ್ತ್ರ ಹೋರಾಟದ ಕತೆ ಸಿನಿಮಾ ಆಗುತ್ತಿರುವುದು ಹಳೆಯ ಸುದ್ದಿ, ಇದೀಗ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ ಅವರು ಬೇಡರ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹಲಗಲಿ ಬೇಡರ ಹೋರಾಟದ ಕತೆ ಬೆಳ್ಳಿ ತೆರೆಯ ಮೇಲೆ ಸಿನಿಮಾ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಸಿನಿಮಾದ ಟೀಸರ್ ಇಂದು (ಆಗಸ್ಟ್ 15) ಗಮನ ಸೆಳೆಯುತ್ತಿದೆ. ವಿಶೇಷವಾಗಿ ಡಾಲಿ ಧನಂಜಯ್ ಹೊಸ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ದುಹಾರಾ ಮೂವೀಸ್ ಯೂಟ್ಯೂಬ್​​ ಚಾನೆಲ್​​ನಲ್ಲಿ ‘ಹಲಗಲಿ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಬುಡಕಟ್ಟು ಸಮುದಾಯದವರು ಕೋಪೋದ್ರಿಕ್ತರಾಗಿ ಕೈಯಲ್ಲಿ ತಮ್ಮ ಆಯುಧಗಳಾದ ಭರ್ಜಿ, ಕೊಡಲಿ, ಮಚ್ಚು, ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಬ್ರಿಟೀಷರ ಆಡಳಿತ ಭವನದ ಕಡೆಗೆ ನುಗ್ಗುತ್ತಿರುವ ದೃಶ್ಯ ಟೀಸರ್​​ನಲ್ಲಿದೆ. ಆ ಗುಂಪಿನ ಮುಖ್ಯಸ್ಥ ಜಡಗಣ ಹಾರಿ ನೆಗೆದು ಎಸೆದ ಭರ್ಜಿ, ಬ್ರಿಟೀಷರ ಬಾವುಟವನ್ನು ತುಂಡು ಮಾಡಿ ಕೆಳಗೆ ಬೀಳಿಸುತ್ತದೆ. ಬಾವುಟ ಕೆಳಗೆ ಬೀಳುತ್ತಿದ್ದಂತೆ ನಾಯಕ ಡಾಲಿ ಧನಂಜಯ್ ಮುಖ ಕಾಣಿಸಿಕೊಳ್ಳುತ್ತದೆ. ಸಿನಿಮೀಯವಾದ ಈ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ

ಹಲಗಲಿ ಬೇಡರ ಹೋರಾಟದ ಕತೆಯನ್ನು ಸಿನಿಮಾ ಮಾಡಲಾಗುತ್ತಿದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟೀಷರು ನಿಶ್ಯಸ್ತ್ರೀಕರಣ ಕಾಯ್ದೆ ಜಾರಿಗೊಳಿಸಿದರು. ಅದರಂತೆ ಭಾರತೀಯರೆಲ್ಲ ತಮ್ಮ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಬೇಕಾಯ್ತು. ಆದರೆ ಆಯುಧಗಳನ್ನು ಜೀವನಕ್ಕಾಗಿ ಬಳಸುತ್ತಿದ್ದ, ಆಯುಧಗಳನ್ನು ದೇವರೆಂದು ನಂಬಿದ್ದ ಹಲಗಲಿಯ ಬೇಡರು ಇದಕ್ಕೆ ಒಪ್ಪಲಿಲ್ಲ. ಅದೇ ಆಯುಧಗಳನ್ನು ಬಳಸಿ ಬ್ರಿಟೀಷರ ವಿರುದ್ಧ ದಂಗೆಗೆ ಇಳಿದರು. ಅದೇ ಕತೆಯನ್ನು ಈಗ ಸಿನಿಮಾ ಮಾಡಲಾಗುತ್ತಿದೆ. ಹಲಗಲಿ ಬೇಡರ ನಾಯಕ ಜಡಗಣನ ಡಾಲಿ ಧನಂಜಯ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಹಲಗಲಿ’ ಸಿನಿಮಾವನ್ನು ಸುಕೇಶ್ ನಾಯಕ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಕಲ್ಯಾಣ್ ಚಕ್ರವರ್ತಿ ಡಿ, ಯರಲಗಡ್ಡ ಲಕ್ಷ್ಮಿ ಶ್ರೀನಿವಾಸ್ ಸಹ ನಿರ್ಮಾಪಕ, ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾನಲ್ಲಿ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ, ಬಿ ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್, ವೀಣಾ ಸುಂದರ್ ಇನ್ನೂ ಹಲವರು ನಟಿಸುತ್ತಿದ್ದಾರೆ. ಶಿವೇಂದರ್ ಸಾಯಿ ಶ್ರೀರಾಮ್ ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಲಾ ನಿರ್ದೇಶನ ರಾಮಾಂಜನೇಯಲು ಅವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Fri, 15 August 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!