‘ಕೂಲಿ’ ಸಿನಿಮಾ ಮೂಲಕ ರಚಿತಾ ರಾಮ್ಗೆ ಈಡೇರಿತು ಹಲವು ವರ್ಷಗಳ ವಿಚಿತ್ರ ಕನಸು
ರಚಿತಾ ರಾಮ್ ಅವರು 'ಕೂಲಿ' ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಇದು ಅವರ ಹಲವು ವರ್ಷಗಳ ಕನಸಾಗಿತ್ತು. ಈ ಚಿತ್ರದ ಭಾರೀ ಯಶಸ್ಸಿನೊಂದಿಗೆ, ರಚಿತಾ ಅವರ ನಟನಾ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 'ಕೂಲಿ' ಚಿತ್ರದ ಯಶಸ್ಸಿನಿಂದ ಅವರ ವೃತ್ತಿಜೀವನಕ್ಕೆ ಹೊಸ ಆಯಾಮ ಸೇರ್ಪಡೆಯಾಗಿದೆ.

ನಟಿ ರಚಿತಾ ರಾಮ್ (Rachita Ram) ಅವರು ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದು ಗೊತ್ತೇ ಇದೆ. ಅವರು ನಾಯಕಿಯಾಗಿ ಸಾಕಷ್ಟು ಇಷ್ಟ ಆಗುತ್ತಾರೆ. ಕ್ಯೂಟ್ ನಗು, ಡಿಂಪಲ್ ಕೆನ್ನೆ ಅವರ ಹೈಲೈಟ್. ಆದರೆ, ಅವರನ್ನು ವಿಲನ್ ಆಗಿ ನೋಡೋದು ಎಂದರೆ ಹೇಗೆ? ಈ ರೀತಿಯ ಪ್ರಶ್ನೆ ಅನೇಕರಿಗೆ ಮೂಡಬಹುದು. ಅದು ‘ಕೂಲಿ’ ಸಿನಿಮಾದಲ್ಲಿ ನಿಜವಾಗಿದೆ ಎಂದೇ ಹೇಳಬಹುದು. ಈ ರೀತಿಯ ಪಾತ್ರ ಮಾಡಬೇಕು ಎಂಬುದು ಅವರ ಬಹುವರ್ಷದ ಕನಸಾಗಿತ್ತು.
ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇದರ ಜೊತೆಗೆ ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ಅವರು ಕನ್ನಡದಲ್ಲಿ ದರ್ಶನ್ ಮೊದಲಾದ ಸ್ಟಾರ್ ಹಿರೋಗಳ ಜೊತೆ ಸಿನಿಮಾ ಮಾಡಿದ್ದಾರೆ. ಡಿಂಪಲ್ ಕ್ವೀನ್ ಎಂದೇ ಫೇಮಸ್ ಆದವರು ರಚಿತಾ. ಅವರಿಗೆ ‘ಕೂಲಿ’ ಸಿನಿಮಾ ಆಫರ್ ಸಿಕ್ಕಾಗ ಖುಷಿಯಿಂದ ನಟಿಸಿ ಒಪ್ಪಿದರು. ಮತ್ತು ಅದನ್ನು ಯಶಸ್ವಿಯಾಗಿ ಮಾಡಿದರು.
ಅನೇಕರು ರಚಿತಾ ಪಾತ್ರವನ್ನು ಹೊಗಳಿದ್ದಾರೆ. ಅಷ್ಟು ಒಳ್ಳೆಯ ರೀತಿಯಲ್ಲಿ ಅವರ ಪಾತ್ರ ಮೂಡಿ ಬಂದಿದೆ. ಉಪೇಂದ್ರ ಪಾತ್ರ ಕೂಡ ಹಿಡಿಸಿದೆ. ರಚಿತಾ ಅವರು ಈ ಮೊದಲು ವಿಷಯ ಒಂದನ್ನು ಹೇಳಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.
ರಚಿತಾ ಮಾತು
View this post on Instagram
‘ನನ್ನ ಪಾತ್ರ ನೆಗೆಟಿವ್ ಆಗಿ ಇರಬೇಕು. ಆ ಪಾತ್ರ ಯಾವ ರೀತಿಯಲ್ಲಿ ಇರಬೇಕು ಎಂದರೆ ನೋಡಿದ ಜನರು ತುಪುಕ್ ತುಪುಕ್ ಅಂತಾ ಉಗಿಯಬೇಕು’ ಎಂದು ರಚಿತಾ ರಾಮ್ ಅವರು ಆಸೆ ಹೊರಹಾಕಿದ್ದರು. ಆ ಆಸೆಯನ್ನು ಲೋಕೇಶ್ ಕನಗರಾಜ್ ಅವರು ಈಡೇರಿಸಿದ್ದಾರೆ ಎಂದೇ ಹೇಳಬಹುದು. ‘ಕೂಲಿ’ ಸಿನಿಮಾ ಎರಡೇ ದಿನಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್ನ ಎ1 ಆರೋಪಿ ಜೊತೆ ರಚಿತಾ ರಾಮ್; ಏನಿದರ ಅಸಲಿಯತ್ತು?
ರಚಿತಾ ರಾಮ್ ಅವರು ದರ್ಶನ್ ನಟನೆಯ ‘ಬುಲ್ ಬುಲ್’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ದರ್ಶನ್ ಜೊತೆ ಅವರು ಬಣ್ಣ ಹಚ್ಚಿದರು. ಇದಕ್ಕೂ ಮೊದಲು ಧಾರಾವಾಹಿಗಳಲ್ಲಿ ರಚಿತಾ ರಾಮ್ ನಟಿಸಿದ್ದರು. ಈಗ ಅವರು ಬೇಡಿಕೆಯ ಹೀರೋಯಿನ್ ಆಗಿದ್ದಾರೆ. ಪರ ಭಾಷೆಯಲ್ಲಿ ಅವರಿಗೆ ಈಗ ವಿವಿಧ ಆಫರ್ ಬರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







