ಜೈಲಿನಲ್ಲಿ ದರ್ಶನ್ ವಿಲ ವಿಲ ಒದ್ದಾಟ: 24 ಗಂಟೆಯೂ ಜೈಲು ಸಿಬ್ಬಂದಿ ಹದ್ದಿನ ಕಣ್ಣು
ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಕಡು ಕಷ್ಟದ ದಿನಗಳು ಎದುರಾಗಿದೆ. ದರ್ಶನ್ ಅವರ ಮೇಲೆ ದಿನದ 24 ಗಂಟೆ ಕೂಡ ಜೈಲಿನ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ. ಕಾರಿಡಾರ್ನಲ್ಲಿ ವಾಕ್ ಮಾಡಲು ಕೂಡ ಅವರಿಗೆ ಅನುಮತಿ ನೀಡಿಲ್ಲ. ದರ್ಶನ್ ವಿಲವಿಲ ಒದ್ದಾಡುವಂತಾಗಿದೆ.

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಈ ಮೊದಲು ಪರಪ್ಪನ ಅಗ್ರಗಾರ ಜೈಲು ಸೇರಿದ್ದ ನಟ ದರ್ಶನ್ (Darshan) ಅವರಿಗೆ ರಾಜಾಥಿತ್ಯ ನೀಡಲಾಗಿತ್ತು. ಆದರೆ ಈ ಬಾರಿ ಸುಪ್ರೀಂ ಕೋರ್ಟ್ ಚಾಟಿ ಬೀಸಿರುವುದರಿಂದ ಜೈಲು ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದಾಗಿ ಕತ್ತಲ ಕೋಣೆಯಲ್ಲಿ ದರ್ಶನ್ ವಿಲ ವಿಲ ಒದ್ದಾಡುವಂತಾಗಿದೆ. ಜೈಲಿನಲ್ಲಿ ಅವರಿಗೆ ಯಾವುದೇ ವಿಐಪಿ ಟ್ರೀಟ್ಮೆಂಟ್ ಸಿಗುತ್ತಿಲ್ಲ. ದರ್ಶನ್ ಮಾತ್ರವಲ್ಲದೇ ಅವರ ಪೂರ್ತಿ ಗ್ಯಾಂಗ್ ಮೇಲೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನ ಸಿಬ್ನಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ.
ಜೈಲಿನಲ್ಲಿ ನಟ ರ್ಶನ್ ಅವರ ಜೀವನ ಶೈಲಿ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ನೂತನ ಮಹಿಳಾ ಕೇಂದ್ರ ಕಾರಗೃಹ ಕೊಠಡಿ ಸಂಖ್ಯೆ 1ರಲ್ಲಿ ಡಿ ಗ್ಯಾಂಗ್ ಇದೆ. ಮಹಿಳೆಯರಿಗಾಗಿ ನೂತನವಾಗಿ ನಿರ್ಮಾಣಗೊಂಡಿರುವ ಕಾರಾಗೃಹ ಇದು. 500 ಖೈದಿಗಳ ಸಾಮರ್ಥ್ಯ ಇರುವ ಕೊಠಡಿಗಳಿವೆ. ಆದರೆ ಇನ್ನೂ ಉದ್ಘಾಟನೆಗೊಂಡು ಮಹಿಳಾ ಖೈದಿಗಳಿಗೆ ನೀಡಲಾಗಿಲ್ಲ. ಕೊವಿಡ್ ಸಮಯದಲ್ಲಿ ಇದು ಕ್ವಾರಂಟೈನ್ ಜೈಲಾಗಿತ್ತು. ಸದ್ಯ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಇದೇ ಸೆಲ್ನಲ್ಲಿ ಇರಿಸಲಾಗಿದೆ.
ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳೆಯಬೇಕಿದೆ. ಕಾರಿಡಾರ್ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ. ದರ್ಶನ್ ಇರುವ ಕೊಠಡಿಗೆ ಸಿಬ್ಬಂದಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಇದೆ. ದಿನದ 24 ಗಂಟೆ ಕೂಡ ಜೈಲು ಸಿಬ್ಬಂದಿಗಳಿಂದ ಹದ್ದಿನ ಕಣ್ಣು ಇಡಲಾಗಿದೆ.
ಕರ್ತವ್ಯ ನಿರತ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬ್ಬಂದಿಗಳು ಕೂಡ ದರ್ಶನ್ ಬಳಿ ಮಾತಾಡುವ ಹಾಗಿಲ್ಲ! ಓರ್ವ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಅವರಿಂದ ನಿಗಾವಹಿಸಲಾಗಿದೆ. ಇಬ್ಬರು ಜೈಲರ್, ಇಬ್ಬರು ಅಸಿಸ್ಟೆಂಟ್ ಜೈಲರ್ ಉಸ್ತುವಾರಿ ವಹಿಸುತ್ತಿದ್ದಾರೆ. ಸೆಲ್ ಬಳಿ ಇಬ್ಬರು ಹೆಡ್ ವಾರ್ಡರ್ ಮತ್ತು ಇಬ್ಬರು ವಾರ್ಡರ್ಗಳ ನಿಯೋಜನೆ ಮಾಡಲಾಗಿದೆ. ಜೈಲಿನಲ್ಲಿ ದರ್ಶನ್ಗೆ ಯಾರ ಭೇಟಿಗೂ ಅವಕಾಶವಿಲ್ಲ.
ಇದನ್ನೂ ಓದಿ: ಜೈಲು ಸೇರುವ ಮುನ್ನ ಹೀಗಿದ್ದರು ಸುಬ್ಬ-ಸುಬ್ಬಿ: ದರ್ಶನ್ ಲುಕ್ ಬದಲಾಗಿದ್ದು ಹೇಗೆ?
ಕಳೆದ ಬಾರಿ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಅದು ಬಹಿರಂಗ ಆದ ನಂತರ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಜೈಲಿನಲ್ಲಿ ನಿಯಮ ಉಲ್ಲಂಘನೆ ಆಗಿದ್ದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಎಲ್ಲದರ ಪರಿಣಾಮವಾಗಿ ದರ್ಶನ್ ಈಗ ಕಡು ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Sun, 17 August 25







