ಟ್ರಂಪ್ ಇಬ್ಬಗೆ ನೀತಿಯ ಬಣ್ಣ ಬಯಲು! ರಷ್ಯಾ ಜತೆ ಅಮೆರಿಕದ ವಹಿವಾಟು ಭಾರೀ ಹೆಚ್ಚಳ
ಡೊನಾಲ್ಡ್ ಟ್ರಂಪ್ ನರಿ ಬುದ್ಧಿ ಈಗ ಜಗಜ್ಜಾಹೀರಾಗಿದೆ. ಅದನ್ನು ಇನ್ಯಾರೋ ಬಹಿರಂಗಪಡಿಸಿದ್ದಲ್ಲ, ಬದಲಿಗೆ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರೇ ಬಹಿರಂಗಪಡಿಸಿದ್ದಾರೆ! ಹೌದು, ಅಮೆರಿಕದಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿದ ನಂತರ ಈವರೆಗೆ ರಷ್ಯಾ ಜತೆ ಆ ದೇಶದ ವಹಿವಾಟು ಶೇ 20 ರಷ್ಟು ಹೆಚ್ಚಾಗಿದೆ!
ಅಲಾಸ್ಕಾ, ಆಗಸ್ಟ್ 16: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಜತೆ ಯಾವ ದೇಶವೂ ವ್ಯಾಪಾರ ಒಪ್ಪಂದ ಹೊಂದಬಾರದು. ರಷ್ಯಾದಿಂದ ಆಮದು ಕಡಿತಗೊಳಿಸಬೇಕು ಎಂದು ಆಗ್ರಹಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜಬಣ್ಣ ಈಗ ಬಯಲಾಗಿದೆ. ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಉಭಯ ನಾಯಕರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲೇ ಈ ವಿಚಾರ ಬಹಿರಂಗವಾಗಿದೆ. ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಈವರೆಗೆ ರಷ್ಯಾ ಜತೆಗಿನ ಅಮೆರಿಕದ ವ್ಯಾಪಾರ ವಹಿವಾಟು ಶೇ 20ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ರಷ್ಯಾ ಜತೆ ವ್ಯಾಪಾರ ಮಾಡಿಕೊಳ್ಳುವುದಕ್ಕಾಗಿ, ಮುಖ್ಯವಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸುತ್ತಿದೆ. ಭಾರತದ ಉತ್ಪನ್ನಗಳ ಮೇಲೂ ಕೆಲವು ದಿನಗಳ ಹಿಂದೆ ಅಮೆರಿಕ ಸುಂಕವನ್ನು ಶೇ 25 ರಷ್ಟು ಹೆಚ್ಚಿಸಿದೆ. ಅದರೊಂದಿಗೆ, ಮೂಲ ಸುಂಕ ಶೇ 25 ಹಾಗೂ ಹೆಚ್ಚುವರಿ ಸುಂಕ ಶೇ 25 ಸೇರಿ ಒಟ್ಟು ಆಮದು ಸುಂಕ ಶೇ 50 ಆಗಿದೆ.
ಸದ್ಯ ವ್ಲಾಡಿಮಿರ್ ಪುಟಿನ್ ಹಾಗೂ ಟ್ರಂಪ್ ನಡುವಣ ದ್ವಿಪಕ್ಷೀಯ ಮಾತುಕತೆಯಲ್ಲಿ ಉಕ್ರೇನ್ ಯುದ್ಧ ಸಂಬಂಧ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲಿನ ಹೆಚ್ಚುವರಿ ಸುಂಕದ ಬಗ್ಗೆ ಮುಂದಿನ 2-3 ವಾರಗಳಲ್ಲಿ ಮತ್ತೆ ಪರಿಶೀಲನೆ ನಡೆಸುವುದಾಗಿಯೂ ಹೇಳಿದ್ದಾರೆ. ಆದರೆ, ಪುಟಿನ್ – ಟ್ರಂಪ್ ಜಂಟಿ ಪತ್ರಿಕಾಗೋಷ್ಠಿಯಿಂದ ಟ್ರಂಪ್ ಇಬ್ಬಗೆ ನೀತಿ ಬಹಿರಂಗವಾಗಿದ್ದು ಸುಳ್ಳಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು

