India Digital Story: ಜಿ20 ರಾಷ್ಟ್ರಗಳನ್ನು ಆಕರ್ಷಿಸುತ್ತಿರುವ ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ: ಕ್ಯುಆರ್ ಕೋಡ್‌ಗಳ ಚಮತ್ಕಾರ

G20 Nations Keen On Indian Digital Payment System: ನಗದು ಕೇಂದ್ರಿತ ಆರ್ಥಿಕತೆಯನ್ನು ಹೊಂದಿದ್ದ ಭಾರತ ಈಗ ಕ್ಯು ಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್‌ಗಳ ಮೂಲಕ ನಗದು ರಹಿತ ವ್ಯವಹಾರ ನಡೆಸುವ ಸಮಾಜವಾಗಿ ಬದಲಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಕೈಯಲ್ಲಿ ನಗದು ಹಿಡಿದುಕೊಂಡು ಹೋಗುವ ಜನರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

India Digital Story: ಜಿ20 ರಾಷ್ಟ್ರಗಳನ್ನು ಆಕರ್ಷಿಸುತ್ತಿರುವ ಭಾರತದ ಡಿಜಿಟಲ್ ಪೇಮೆಂಟ್ ವ್ಯವಸ್ಥೆ: ಕ್ಯುಆರ್ ಕೋಡ್‌ಗಳ ಚಮತ್ಕಾರ
ಡಿಜಿಟಲ್ ಪಾವತಿ
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Apr 18, 2023 | 6:29 PM

ಬೆಂಗಳೂರಿನ ಹೊರವಲಯದಲ್ಲಿ ಕನಕಪುರ ರಸ್ತೆಯಲ್ಲಿರುವ, ಸೋಮನಹಳ್ಳಿ ಗ್ರಾಮದ, ಸುಬ್ಬಮ್ಮ ಎಂಬ ಮಹಿಳೆ ತನ್ನ ಸಣ್ಣ ಮಗುವನ್ನು ಹಿಡಿದುಕೊಂಡು ಮಣ್ಣಿನ ಪಾತ್ರೆಗಳನ್ನು ಮಾಡಿ, ಮಾರಾಟ ಮಾಡುತ್ತಾಳೆ. ಭಾರತದಲ್ಲಿ ಹೀಗೆಯೇ ಲಕ್ಷಾಂತರ ಜನರು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಜೀವನ ನಿರ್ವಹಿಸುತ್ತಾರೆ. ಆದರೆ, ನಗದು ಹಣ ಪಡೆದುಕೊಂಡು ಉತ್ಪನ್ನಗಳನ್ನು ಕೊಡುವ ಹಳೆ ಕಾಲದ ಅಭ್ಯಾಸ ಈಗ ಬದಲಾಗುತ್ತಾ ಬಂದಿದ್ದು, ಸಮಾಜ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದೆ. ಹಾಗೆಯೇ ಸುಬ್ಬಮ್ಮನ ಅಂಗಡಿಯ ಮುಂದೆಯೂ ಒಂದು ಕ್ಯು ಆರ್ ಕೋಡ್ ಮತ್ತು ಒಂದು ಸ್ಪೀಕರ್ ಕಾಣಿಸುತ್ತದೆ. ಈ ಸ್ಪೀಕರ್ ಒಳಗೆ ಒಂದು ಅಂತರ್ಗತ ಸಿಮ್ ಕಾರ್ಡ್ ಇದ್ದು, ಗ್ರಾಹಕರು ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದ ಹಾಗೆಯೇ ಆ ಸ್ಪೀಕರ್ ಎಷ್ಟು ಹಣ ಬಂದಿದೆ ಎನ್ನುವುದನ್ನು ಓದಿ ಹೇಳುತ್ತದೆ. ಆ ಮೂಲಕ ವ್ಯಾಪಾರಿಗೂ, ಗ್ರಾಹಕರಿಗೂ ಹಣ ಸಂದಾಯವಾಗಿದೆ ಎನ್ನುವುದು ಖಚಿತವಾಗುತ್ತದೆ.

ನಗದು ಕೇಂದ್ರಿತ ಆರ್ಥಿಕತೆಯನ್ನು ಹೊಂದಿದ್ದ ಭಾರತ ಈಗ ಕ್ಯು ಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್‌ಗಳ ಮೂಲಕ ನಗದು ರಹಿತ ವ್ಯವಹಾರ ನಡೆಸುವ ಸಮಾಜವಾಗಿ ಬದಲಾಗುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಕೈಯಲ್ಲಿ ನಗದು ಹಿಡಿದುಕೊಂಡು ಹೋಗುವ ಜನರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಸುಬ್ಬಮ್ಮ ಮತ್ತವಳ ಕುಟುಂಬ ಅದೇ ರಸ್ತೆಯ ಬದಿಯಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಸುಬ್ಬಮ್ಮನ ಬಳಿ ಬ್ಯಾಂಕ್ ಅಕೌಂಟ್ ಸಹ ಇಲ್ಲ. ಅವರ ಕುಟುಂಬದ ಸ್ನೇಹಿತರೊಬ್ಬರು ಕ್ಯು ಆರ್ ಕೋಡ್ ಬಗ್ಗೆ ತಿಳಿಸಿದ ಬಳಿಕ ಅವರು ಕಳೆದ ವರ್ಷ ಅದನ್ನು ಹಾಕಿಕೊಂಡರು. ಸುಬ್ಬಮ್ಮನಿಗೆ ಕ್ಯು ಆರ್ ಕೋಡ್ ಕೆಲಸ ಮಾಡುವಂತಾಗಲು ಅವರ ಸ್ನೇಹಿತ ಅವರದೇ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆ ಮತ್ತು ಸರ್ಕಾರ ಒದಗಿಸಿದ ಗುರುತಿನ ಕೋಡ್ ಬಳಸಿಕೊಂಡರು. ಒಂದು ಆ್ಯಪ್ ಮೂಲಕ ಈಗ ಸುಬ್ಬಮ್ಮ ತನ್ನ ಹಣದ ಮಾಹಿತಿ ಪಡೆಯುತ್ತಾ, ಅಗತ್ಯ ಬಿದ್ದಾಗ ನಗದು ಪಡೆಯುತ್ತಾರೆ.

ಆರಂಭದಲ್ಲಿ ನನಗೆ ಈ ವ್ಯವಸ್ಥೆ ಯಾಕೋ ತೊಂದರೆ ಕೊಡುತ್ತಿದ್ದ ಹಾಗೆ ಭಾಸವಾಗುತ್ತಿತ್ತು. ಆದರೆ ನಿಧಾನವಾಗಿ ನಾನು ಆ ಕಷ್ಟಗಳನ್ನು ಮೀರುವುದನ್ನು ಕಲಿತೆ. ಈಗ ಈ ವ್ಯವಸ್ಥೆ ನನಗೆ ನಗದು ಹಣದ ವ್ಯವಹಾರಕ್ಕಿಂತಲೂ ತುಂಬಾ ಸುಲಭ ಎನಿಸಿದೆಎನ್ನುತ್ತಾರೆ ಸುಬ್ಬಮ್ಮ.

ಭಾರತದಲ್ಲಿರುವ ಈ ಸ್ಕ್ಯಾನ್ ಮಾಡಿ ಹಣ ಪಾವತಿಸುವ ವ್ಯವಸ್ಥೆ ದೇಶದಲ್ಲಿ ಉದ್ಯಮಗಳು ಕಾರ್ಯಾಚರಿಸುವ ವಿಧಾನವನ್ನೇ ಬದಲಿಸಿದೆ. ಪೇಟಿಎಂ, ಫೋನ್‌ಪೇಯಂತಹ ಆ್ಯಪ್‌ಗಳನ್ನು ಬಳಸಿಕೊಂಡು ಮಿಲಿಯನ್‌ಗಟ್ಟಲೆ ಜನರು ದೇಶಾದ್ಯಂತ ಹಣದ ವ್ಯವಹಾರ ನಡೆಸುತ್ತಾರೆ.

ಇದನ್ನೂ ಓದಿ: ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೇಧಿಸುವಷ್ಟು ಸಮರ್ಥವಾಗಿದೆ ಚೀನಾದ ಹೈಪರ್‌ಸಾನಿಕ್ ಆಯುಧ!

1994ರಲ್ಲಿ ಡೆನ್ಸೋ ವೇವ್ (ಆಗ ಡೆನ್ಸೋ ಕಾರ್ಪೋರೇಷನ್ನಿನ ಅಂಗಸಂಸ್ಥೆ) ಸಂಸ್ಥೆ ತನ್ನ ಕ್ಯುಆರ್ ಕೋಡ್ ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು. ಕ್ಯುಆರ್ ಎನ್ನುವುದು ಕ್ವಿಕ್ ರೆಸ್ಪಾನ್ಸ್ಎನ್ನುವುದರ ಹೃಸ್ವ ರೂಪವಾಗಿದೆ.

ಸಿಂಗಾಪುರ, ದಕ್ಷಿಣ ಕೊರಿಯಾ, ಹಾಗೂ ಚೀನಾಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆಗೆ ಹಲವು ವರ್ಷಗಳ ಕಾಲ ಕ್ಯು ಆರ್ ಕೋಡ್ ಕೊರತೆ ಎದುರಾಗಿತ್ತು. 2000ನೇ ಇಸವಿಯ ಆರಂಭದ ಬಳಿಕ, ಚೀನಾ ಡಿಜಿಟಲ್ ಪಾವತಿಯನ್ನು ಜನಪ್ರಿಯಗೊಳಿಸಿತು. ಇದಕ್ಕಾಗಿ ಚೀನಾದ ಬಳಿ ಹಲವಾರು ಆ್ಯಪ್‌ಗಳಿದ್ದು, ಅಲಿಪೇ ಹಾಗೂ ವಿಚಾಟ್‌ಗಳೂ ಅವುಗಳಲ್ಲಿ ಸೇರಿವೆ. ಆ ಮೂಲಕ ಸಾಮಾಜಿಕ ಜಾಲತಾಣಗಳನ್ನೂ ಡಿಜಿಟಲ್ ಪಾವತಿಗೆ ಬಳಸಿಕೊಳ್ಳಲಾಗುತ್ತದೆ. ಈ ಆರ್ಥಿಕ ತಾಂತ್ರಿಕತೆಗೆ ಹೊಸ ಸೇರ್ಪಡೆಯಾದರೂ, ಭಾರತ 2016ರ ಬಳಿಕ ಈ ವಲಯದಲ್ಲಿ ಅಪಾರ ಅಭಿವೃದ್ಧಿ ಸಾಧಿಸಿದೆ. ಒಂದು ಕಾಲದಲ್ಲಿ ಕೇವಲ ನಗದು ವ್ಯವಹಾರದ ಆರ್ಥಿಕತೆಯಾಗಿದ್ದ ಭಾರತದಲ್ಲಿ ಈಗ 40% ವ್ಯವಹಾರಗಳು ಡಿಜಿಟಲ್ ಪಾವತಿಯ ಮೂಲಕ ನಡೆಯುತ್ತವೆ.

ಫೋನ್‌ಪೇ ಹಾಗೂ ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಅವರ ಇತ್ತೀಚಿನ ವರದಿಯ ಪ್ರಕಾರ, ಈ ಮೊತ್ತ ಬಹುತೇಕ 3 ಟ್ರಿಲಿಯನ್ ಡಾಲರ್‌ಗೆ ಸಮೀಪದಲ್ಲಿದೆ ಎನ್ನಲಾಗಿದೆ. 2026ರ ವೇಳೆಗೆ ಈ ಮೊತ್ತ 10 ಟ್ರಿಲಿಯನ್ ಡಾಲರ್‌ಗೆ ಏರುವ ನಿರೀಕ್ಷೆಗಳಿವೆ.

ಸಣ್ಣ ಸಂಕೇತಗಳು ಹಾಗೂ ಕ್ಯುಆರ್ ಕೋಡ್‌ ಇರುವ ಸೌಂಡ್ ಬಾಕ್ಸ್‌ಗಳನ್ನು ಭಾರತದಾದ್ಯಂತ ರಸ್ತೆ ಬದಿ ಅಂಗಡಿಗಳಲ್ಲೂ ಅಳವಡಿಸಲಾಗಿದ್ದು, ಸಿಗರೇಟ್ ಬೀಡಿಯಿಂದ ಮಣ್ಣಿನ ಮಡಕೆ ಮಾರಾಟ ಮಾಡುವ ತನಕ ಎಲ್ಲ ಅಂಗಡಿಗಳಲ್ಲೂ ಇವುಗಳನ್ನು ಬಳಸಲಾಗುತ್ತಿದೆ‌. ಇಂತಹ ಕೋಡ್‌ಗಳನ್ನು ಕಿರಾಣಿ ಅಂಗಡಿಗಳು, ಕ್ಯಾಂಟೀನ್ ಹೊಟೆಲ್‌ಗಳು, ಕ್ಲಿನಿಕ್‌ಗಳು, ಶಾಪಿಂಗ್ ಮಾಲ್‌ಗಳಲ್ಲೂ ಕಾಣಬಹುದು. ಬಹುತೇಕ 300 ಮಿಲಿಯನ್ ಗ್ರಾಹಕರು ಮತ್ತು 50 ಮಿಲಿಯನ್ ವರ್ತಕರು ಪ್ರಸ್ತುತ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಳಕೆದಾರರಾಗಿದ್ದಾರೆ.

ನನಸಾದ ಪ್ರಧಾನಿ ಮೋದಿಯವರ ಕನಸು

ಪ್ರಧಾನಿ ನರೇಂದ್ರ ಮೋದಿಯವರು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅನ್ನು ಪರಿಚಯಿಸುವ ಕನಸು ಕಾಣುತ್ತಿದ್ದ ಸಂದರ್ಭದಲ್ಲಿ, ವಿಪಕ್ಷಗಳು ಅವರನ್ನು ಆಡಿಕೊಂಡಿದ್ದವು. ಡಿಜಿಟಲ್ ಪಾವತಿಗಳನ್ನು ಜಾರಿಗೆ ತರುವುದಿರಲಿ, ಆ ಕುರಿತು ಆಲೋಚನೆ ಮಾಡಲೂ ಭಾರತ ಅತ್ಯಂತ ಬಡ ರಾಷ್ಟ್ರ ಎಂದು ಅವುಗಳು ಸರ್ಕಾರವನ್ನು ಟೀಕಿಸಿದ್ದವು. ಆದರೆ ಈಗ, ಮೋದಿಯವರ ನಿರ್ಧಾರ ಸರಿ ಎಂದು ಸಾಬೀತಾಗಿದೆ.

ಭಾರತ 2022ರ ಎರಡನೇ ತ್ರೈಮಾಸಿಕದಲ್ಲಿ 36.08 ಟ್ರಿಲಿಯನ್ ಮೌಲ್ಯದ 20.57 ಬಿಲಿಯನ್ ಆನ್‌ಲೈನ್ ಪಾವತಿಯನ್ನು ದಾಖಲಿಸಿತು. ಈ ಅವಧಿಯಲ್ಲಿ, ಯುಪಿಐ ಮೂಲಕ 30.4 ಟ್ರಿಲಿಯನ್ ಮೌಲ್ಯದ 17.4 ಬಿಲಿಯನ್ ವ್ಯವಹಾರಗಳನ್ನು ನಡೆಸಲಾಯಿತು.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ವ್ಯವಹಾರಗಳ ಸಂಖ್ಯೆ 118% ಹಾಗೂ ಮೌಲ್ಯ 98% ಹೆಚ್ಚಳ ಕಂಡವು. ಯುಪಿಐ ಈಗ 346 ಬ್ಯಾಂಕಿಂಗ್ ಸಹಯೋಗಿಗಳನ್ನು ಹೊಂದಿದೆ.

ಇದನ್ನೂ ಓದಿ: Xiaomi: ಅಂತಾರಾಷ್ಟ್ರೀಯ ಯುದ್ಧದ ಪ್ರಾಯೋಜಕ ಎಂಬ ಆರೋಪ ಎದುರಿಸುತ್ತಿರುವ ಶವೋಮಿ: ರಷ್ಯಾದಲ್ಲಿ ಸ್ಮಾರ್ಟ್ ಫೋನ್ ಮಾರಾಟದಿಂದ ಸಮಸ್ಯೆ ಎದುರಿಸುತ್ತಿರುವ ಸಂಸ್ಥೆ

ಈ ಮೊದಲು ಆನ್‌ಲೈನ್ ಪಾವತಿಗಳನ್ನು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸಲಾಗುತ್ತಿತ್ತು. ಪ್ರಿಪೇಡ್ ಪಾವತಿ ಮಾರ್ಗಗಳಾದ ಮೊಬೈಲ್ ವಾಲೆಟ್‌ಗಳು, ಹಾಗೂ ಯುಪಿಐಗಳು ಪಿ2ಎಂ (ಪರ್ಸನ್ ಟು ಮರ್ಚೆಂಟ್) ಹಾಗೂ ಪಿ2ಪಿ (ಪರ್ಸನ್ ಟು ಪರ್ಸನ್) ವ್ಯವಹಾರಗಳನ್ನು ಒಳಗೊಂಡಿವೆ. ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್‌ಗಳು 8% ದಷ್ಟು ಪ್ರಮಾಣದಲ್ಲಿ ಹಾಗೂ 14% ಮೌಲ್ಯದಲ್ಲಿ ವ್ಯವಹಾರದ ಪಾಲು ಹೊಂದಿದ್ದವು.

ಯುಪಿಐ ಪಿ2ಪಿ 49% ಪ್ರಮಾಣದಲ್ಲಿ ಮತ್ತು 67% ಮೌಲ್ಯದ ವ್ಯವಹಾರದಲ್ಲಿ ಬಳಕೆಯಾದವು. ಆದರೆ ಮಾರಾಟಗಾರರ ವ್ಯವಹಾರದಲ್ಲಿ, ಯುಪಿಐ ಪಿ2ಎಂ ಪ್ರಮುಖ ಪಾವತಿ ಆಯ್ಕೆಯಾಗಿದ್ದು, ಮಾರುಕಟ್ಟೆಯ ಪ್ರಮಾಣದಲ್ಲಿ 34% ಪಾಲು ಹಾಗೂ ಮೌಲ್ಯದಲ್ಲಿ 17%ದಷ್ಟು ಪಾಲು ಹೊಂದಿದ್ದವುಎಂದು ಇಂಡಿಯಾ ಡಿಜಿಟಲ್ ಪೇಮೆಂಟ್ಸ್ ರಿಪೋರ್ಟ್ ತಿಳಿಸಿದೆ.

ಹಿಂದೆಂದಿಗಿಂತಲೂ ಹೆಚ್ಚು ಆನ್‌ಲೈನ್

ಭಾರತದ ಡಿಜಿಟಲ್ ಕ್ರಾಂತಿಯ ಪರಿಣಾಮವಾಗಿ, ಭಾರತದ ಬೃಹತ್ ಜನಸಂಖ್ಯೆಯನ್ನು ಒಳಗೊಳ್ಳುವ ಒಂದು ವ್ಯವಸ್ಥೆಗೆ ಆನ್‌ಲೈನ್ ಪಾವತಿ ವ್ಯವಸ್ಥೆ ಉತ್ತಮ ಉದಾಹರಣೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಜನರು ಈ ಹೊಸ ತಂತ್ರಜ್ಞಾನವನ್ನು ಅತ್ಯಂತ ಶರವೇಗದಿಂದ ಅಪ್ಪಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯೂ ಈಗ 700 ಮಿಲಿಯನ್ ದಾಟಿದೆ ಎಂದು ರೇಟಿಂಗ್ ಸಂಸ್ಥೆ ಐಸಿಆರ್‌ಎ ವರದಿ ಮಾಡಿದೆ. ಅದರಲ್ಲೂ ಟೆಲಿಕಾಮ್ ಸಂಸ್ಥೆಗಳ ನಡುವಿನ ಅಪಾರ ಸ್ಪರ್ಧೆಯ ಪರಿಣಾಮವಾಗಿ ಭಾರತದಲ್ಲಿ ಅಂತರ್ಜಾಲದ ದರ ಜಗತ್ತಿನಲ್ಲೇ ಅತ್ಯಂತ ಕಡಿಮೆಯಿದೆ. ಭಾರತೀಯರು ಪ್ರತಿ ತಿಂಗಳೂ ಸರಾಸರಿ 17 ಗಿಗಾಬೈಟ್ ಅಂತರ್ಜಾಲ ಬಳಸುತ್ತಾರೆ ಎನ್ನಲಾಗಿದ್ದು, ಇದು ಉತ್ತರ ಅಮೆರಿಕಾದ 15 ಜಿಬಿ ಮತ್ತು ಚೀನಾದ 13 ಗಿಗಾಬೈಟ್‌ಗಿಂತ ಹೆಚ್ಚಾಗಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯ ಅತಿದೊಡ್ಡ ಕೊಡುಗೆ ಎಂದರೆ ಬ್ಯಾಂಕ್ ಖಾತೆಗಳನ್ನೇ ಹೊಂದಿರದ ಜನರು ಇದರ ಕಾರಣದಿಂದ ಆರ್ಥಿಕ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತಾಗಿದ್ದು, ಸುಲಭವಾಗಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಡಿಜಿಟಲ್ ವ್ಯವಹಾರಗಳಂತೂ ನಗದಿನಿಂದ ತುಂಬಿದ್ದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ತಂದಿವೆ.

ಭಾರತದ ಆರ್ಥಿಕ ಪ್ರಗತಿ ಬಹುತೇಕ ಖಾಸಗಿ ಬಳಕೆಯ ಮೇಲೆಯೇ ಅವಲಂಬಿತವಾಗಿದೆ. ಈಗ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರು ಸಮಾನವಾಗಿ ಎನ್ನುವಂತೆ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 2016ರಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣ ತಡೆಯುವ ನಿಟ್ಟಿನಲ್ಲಿ ನೋಟ್ ಬಂದಿ ನಿರ್ಧಾರ ಕೈಗೊಂಡ ಬಳಿಕ, ಡಿಜಿಟಲ್ ಪಾವತಿ ವ್ಯವಸ್ಥೆ ಇನ್ನಷ್ಟು ಅನಿವಾರ್ಯತೆ ಗಳಿಸಿಕೊಂಡಿತು.

ಭಾರತದ 86%ದಷ್ಟು ನೋಟುಗಳು ತಕ್ಷಣವೇ ಅಪಮೌಲ್ಯಗೊಂಡವು‌. ಆದರೆ ಈ ನಿರ್ಧಾರ ನಗದಿನ ಮೇಲೆ ಅವಲಂಬಿತವಾಗಿದ್ದ ಭಾರತೀಯ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿತು. ಆದ್ದರಿಂದ ಸರ್ಕಾರಕ್ಕೂ ಡಿಜಿಟಲ್ ಪಾವತಿಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಎನಿಸಿತು. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್ ಖರೀದಿಗಳೂ ಹೆಚ್ಚಾಗಿ, ಆನ್‌ಲೈನ್ ಪಾವತಿ ಇನ್ನಷ್ಟು ಹೆಚ್ಚಾಯಿತು.

ಡಿಜಿಟಲ್ ಪಾವತಿ ಹೇಗೆ ಕಾರ್ಯಾಚರಿಸುತ್ತದೆ?

ಭಾರತದ ಅಧಿಕಾರಿಗಳು 2015ರಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿಗೊಳಿಸಿದರು. ಇದರ ಮೂಲಕ ಪ್ರತಿಯೊಬ್ಬರಿಗೂ ಕಾಗದರಹಿತ, ನಗದು ರಹಿತ ಆರ್ಥಿಕ ವ್ಯವಹಾರ ನಡೆಸಲು ಅನುವು ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿತ್ತು. 2009ರಲ್ಲಿ ಜಾರಿಗೆ ತಂದ ಆಧಾರ್ ಯೋಜನೆಯ ಮೂಲಕ ಸಾರ್ವಜನಿಕರಿಗೆ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆ ಒದಗಿಸಲಾಯಿತು. ಈಗ 99% ಸಾರ್ವಜನಿಕರಿಗೆ ಆಧಾರ್ ಸಂಖ್ಯೆಯಿದ್ದು, ಅವರು ಸುಲಭವಾಗಿ ಬ್ಯಾಂಕ್ ಖಾತೆ ತೆರೆಯಬಹುದು.

2016ರಲ್ಲಿ ಆರಂಭಗೊಂಡ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬ್ಯಾಂಕ್‌ಗಳು ಮತ್ತು ಮೊಬೈಲ್ ಆ್ಯಪ್‌ಗಳು ಹಣದ ನೇರ ವರ್ಗಾವಣೆ ನಡೆಸಬಹುದು. ಯುಪಿಐ ಮಾರ್ಚ್ ತಿಂಗಳು ಒಂದರಲ್ಲೇ 170 ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ, 8.65 ಬಿಲಿಯನ್ ವ್ಯವಹಾರಗಳಿಗೆ ವೇದಿಕೆಯಾಯಿತು ಎಂದು ಯುಪಿಐ ಜವಾಬ್ದಾರಿ ನಿರ್ವಹಿಸುವ ಎನ್‌ಪಿಸಿಐ ವರದಿ ಮಾಡಿದೆ. ಯುಪಿಐ ಮೂಲಕ ಸಾರ್ವಜನಿಕರು ಅವರ ಮಾಹಿತಿಗಳು ಗೂಗಲ್ ಅಥವಾ ಮೆಟಾದಂತಹ ಸಂಸ್ಥೆಗೆ ಸಿಗದ ರೀತಿಯಲ್ಲಿ ವ್ಯವಹಾರ ನಿರ್ವಹಿಸಬಹುದಾಗಿದೆ.

ಡಿಜಿಟಲ್ ಪಾವತಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆ

ತಜ್ಞರು ಯುಪಿಐ ವ್ಯವಸ್ಥೆ ಈಗಾಗಲೇ ಚೀನಾದ ಬೃಹತ್ ಡಿಜಿಟಲ್ ಆರ್ಥಿಕತೆ ಎದುರಿಸುತ್ತಿರುವಂತಹ ಸಮಸ್ಯೆಗಳನ್ನು ಎದುರಿಸದಂಗೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. “ಚೀನಾದ ಡಿಜಿಟಲ್ ಆರ್ಥಿಕತೆಯ ಹರಡುವಿಕೆಯ ಕಾರಣದಿಂದ, ಚೀನಾ ಸರ್ಕಾರ ಅದನ್ನು ಹೇಗೆ ನಿಯಂತ್ರಿಸುತ್ತದೆ ಎನ್ನುವುದು ಒಂದು ಸವಾಲಾಗಿದೆ. ಅದರ ಖಾಸಗಿತನ ರಾಜಿಯಾಗುವ ಸಾಧ್ಯತೆಗಳು ದಟ್ಟವಾಗಿರುವುದರಿಂದ, ಮಾಹಿತಿ ಕಳವಾಗುವ ಅಪಾಯಗಳಿವೆ. ಆ ಮೂಲಕ ಬಳಕೆದಾರರು ತೊಂದರೆ ಎದುರಿಸುವಂತಾಗಲಿದೆಎಂದು ಅವರು ಎಚ್ಚರಿಸುತ್ತಾರೆ.

ಒಂದು ವೇಳೆ ಭಾರತ ಶಿಸ್ತಾದ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಿಕೊಂಡರೆ ಡಿಜಿಟಲ್ ಪಾವತಿಯಲ್ಲಿ ಭಾರತದ ಅನುಭವ ಚೀನಾಗಿಂತ ಸಂಪೂರ್ಣವಾಗಿ ಬದಲಾಗಬಹುದುಎಂದೂ ಅವರು ಅಭಿಪ್ರಾಯ ಪಡುತ್ತಾರೆ.

ಭಾರತ ಮತ್ತು ಸಿಂಗಾಪುರ ಸರ್ಕಾರಗಳು ಜಂಟಿಯಾಗಿ ಸೀಮಾತೀತವಾದ ಪೇನೌ ಎಂಬ ವ್ಯವಸ್ಥೆಯನ್ನು ಫೆಬ್ರವರಿ 21ರಂದು ಜಾರಿಗೆ ತಂದವು. ಇದು ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆಗೆ ನೆರವಾಗುತ್ತದೆ.

ಭಾರತದ ಜಿ20 ಆಯೋಜಕರಲ್ಲೊಬ್ಬರಾದ ಅಮಿತಾಭ್ ಕಾಂತ್ ಅವರ ಪ್ರಕಾರ, ಈ ವರ್ಷ ಜಿ20 ಶೃಂಗಸಭೆಯನ್ನು ಆಯೋಜಿಸಿರುವ ಭಾರತ ಮುಂದಿನ ದಿನಗಳಲ್ಲಿ ತನ್ನ ಡಿಜಿಟಲ್ ಪರಿವರ್ತನೆಯ ಹಾದಿಯನ್ನು ಜಗತ್ತಿನೊಡನೆ ಹಂಚಿಕೊಳ್ಳಲಿದೆ.

ಇದನ್ನೂ ಓದಿ: ಸ್ಪೇಸ್ ಶಿಪ್ ರಾಕೆಟ್ ಉಡಾವಣೆಯನ್ನು ಮುಂದೂಡಿದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್

ಒಟ್ಟಾರೆಯಾಗಿ, ಸಣ್ಣಪುಟ್ಟ ವ್ಯವಹಾರಗಳ ಮಾಲೀಕರೂ ಸ್ಥಳೀಯ ಮಟ್ಟದಲ್ಲಿ ಡಿಜಿಟಲ್ ಪಾವತಿಯನ್ನು ಜಾರಿಗೆ ತಂದಿದ್ದಾರೆ.

ಸುಬ್ಬಮ್ಮನವರ ಮಡಕೆ ಅಂಗಡಿಯಿಂದ ಸ್ವಲ್ಪವೇ ದೂರದಲ್ಲಿರುವ ಮಾದಯ್ಯ ಎಂಬ ಚಮ್ಮಾರ, ಡಿಜಿಟಲ್ ಪಾವತಿ ವ್ಯವಸ್ಥೆ ಅವರ ಶೂ ನಿರ್ಮಾಣ ಉದ್ಯಮವನ್ನು ಸುಧಾರಿಸಿದೆ ಎಂದಿದ್ದಾರೆ. ತಾನು ಪ್ರತಿದಿನವೂ ಮೊಬೈಲ್ ಅಪ್ಲಿಕೇಶನ್ ಬಳಸಿ ಹಣದ ವ್ಯವಹಾರವನ್ನು ಗಮನಿಸಲು, ಮನೆಯವರಿಗೆ ಹಣ ನೀಡುವುದಾಗಿ ತಿಳಿಸಿದ್ದಾರೆ.

“90%ಕ್ಕೂ ಹೆಚ್ಚಿನ ಗ್ರಾಹಕರು ಡಿಜಿಟಲ್ ಪಾವತಿ ಮಾಡುತ್ತಾರೆ. ಈ ಮೊದಲು ಗ್ರಾಹಕರಿಗೆ ಚಿಲ್ಲರೆ ನೀಡಲು ನಾನು ಕಷ್ಟಪಡಬೇಕಾಗಿತ್ತು. ಆದರೆ ಈಗ ಆ ಸಮಸ್ಯೆಗಳು ದೂರಾಗಿವೆ. ನಾನು ಹಳ್ಳಿಯಲ್ಲಿರುವ ಕುಟುಂಬದವರಿಗೆ ಹಣ ನೀಡುವಾಗಲೂ ಕಮಿಷನ್ ಮೂಲಕ ಹೆಚ್ಚಿನ ಹಣ ಕೊಡಬೇಕಾಗಿ ಬರುವುದಿಲ್ಲಎನ್ನುತ್ತಾರೆ ಮಾದಯ್ಯ.

ಹೈದರಾಬಾದ್​ನಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಸಭೆ

ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ‘ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ನ ಎರಡನೆಯ ಸಭೆಯನ್ನು ಹೈದರಾಬಾದ್‌‌ನಲ್ಲಿ ಎಪ್ರಿಲ್ 17ರಿಂದ 19ರ ತನಕ ಆಯೋಜಿಸುತ್ತಿದೆ. ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ (ಡಿಇಡಬ್ಲ್ಯುಜಿ) ನಲ್ಲಿ ಅಭಿವೃದ್ಧಿ ಸಾಧಿಸಲು, ಸಚಿವಾಲಯ ಈ ಎರಡನೆಯ ಸಭೆಯನ್ನು ಆಯೋಜಿಸುತ್ತಿದೆ. ಈ ಸಭೆ ಮೂಲತಃ ಡಿಜಿಟಲ್ ಸಂಪರ್ಕದ ಕುರಿತು ಗಮನ ಹರಿಸಲಿದ್ದು, ಹೈ ಸ್ಪೀಡ್ ಮೊಬೈಲ್ ಬ್ರಾಡ್‌ಬ್ಯಾಂಡ್‌ ಹಾಗೂ ಜನಜೀವನ, ಸಮಾಜ ಹಾಗೂ ಉದ್ಯಮಗಳ ಮೇಲೆ ಅದರ ಪರಿಣಾಮಗಳು, ‘ಡಿಜಿಟಲ್ ಒಳಗೊಳ್ಳುವಿಕೆ: ಸಂಪರ್ಕ ರಹಿತರಿಗೆ ಸಂಪರ್ಕ ಒದಗಿಸುವುದು‘, ‘ಸುಸ್ಥಿರ, ಹಸಿರು ಡಿಜಿಟಲ್ ಮೂಲಸೌಕರ್ಯ: ಸವಾಲುಗಳು ಮತ್ತು ಅವಕಾಶಗಳುಎಂಬ ವಿಚಾರಗಳಲ್ಲಿ ಮೂರು ಸಂವಾದಗಳೂ ನಡೆಯಲಿವೆ. ಜಾಗತಿಕ ವಿಷಯ ತಜ್ಞರು ಇದರಲ್ಲಿ ಭಾಗವಹಿಸಿ, ಬೆಳೆಯುತ್ತಿರುವ ಟೆಲಿಕಾಂ ತಂತ್ರಜ್ಞಾನದ ಕುರಿತು ಅವರ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 6:23 pm, Tue, 18 April 23

ತಾಜಾ ಸುದ್ದಿ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಮುಳುಗಡೆಯಾಗಿರುವ ಸೇತುವೆ ಮೇಲೆ ಪ್ರಾಣದೊಂದಿಗೆ ಬೈಕರ್ಸ್ ಚೆಲ್ಲಾಟ
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಬಸ್​ಗೆ ಚಾಲನೆ ನೀಡಿ ಜನರ ಕುಂದು-ಕೊರತೆ ಅಲಿಸಿದ ಶಾಸಕ ಸಿಮೆಂಟ್ ಮಂಜು
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ
ಹಾಸನ: ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ