AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹ ವಾರ್ಷಿಕೋತ್ಸವಕ್ಕೆ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್ ಸುಧೀರ್  

Sonal And Tarun Sudhir Wedding Anniversary: ತರುಣ್ ಸುಧೀರ್ ಮತ್ತು ಸೋನಲ್ ಅವರ ಮೊದಲ ವಿವಾಹ ವಾರ್ಷಿಕೋತ್ಸ ಸಮೀಪಿಸಿದೆ. 'ಮಹಾನಟಿ ಸೀಸನ್ 2' ವೇದಿಕೆಯಲ್ಲಿ ಈ ದಿನವನ್ನು ವಿಶೇಷವಾಗಿ ಆಚರಿಸಲಾಗಿದೆ. ಸೋನಲ್ ತಮ್ಮ ಪತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ತರುಣ್ ಕೂಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ವಿವಾಹ ವಾರ್ಷಿಕೋತ್ಸವಕ್ಕೆ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್ ಸುಧೀರ್  
ಸೋನಲ್
ರಾಜೇಶ್ ದುಗ್ಗುಮನೆ
|

Updated on:Aug 07, 2025 | 7:05 AM

Share

ತರುಣ್ ಸುಧೀರ್ ಹಾಗೂ ಸೋನಲ್ ಮೊಂತೇರೋ (Sonal Monteiro) ವಿವಾಹ ವಾರ್ಷಿಕೋತ್ಸವ ಸಮೀಪಿಸಿದೆ. ಆಗಸ್ಟ್ 11ರಂದು ಇವರ ಸುಖ ಸಂಸಾರಕ್ಕೆ ಒಂದು ವರ್ಷ ತುಂಬಲಿದೆ. ಇವರು ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಮೊದಲನೇ ವಿವಾಹ ವಾರ್ಷಿಕೋತ್ಸವ ಯಾವಾಗಲೂ ಸ್ಪೆಷಲ್ ಆಗಿರುತ್ತದೆ. ತರುಣ್ ಹಾಗೂ ಸೋನಲ್​ಗೂ ದಂಪತಿಗೂ ಈ ದಿನ ಸಾಕಷ್ಟು ವಿಶೇಷ ಆಗಿದೆ. ಪತಿಗೆ ಎಂದೂ ಮರೆಯಲಾರದ ಗಿಫ್ಟ್​​ನ ನೀಡಿದ್ದಾರೆ ಸೋನಲ್. ಈ ವಿಡಿಯೋ ವೈರಲ್ ಆಗಿದೆ.

‘ಮಹಾನಟಿ ಸೀಸನ್ 2’ ನಡೆಯುತ್ತಿದೆ. ಜಡ್ಜ್ ಸ್ಥಾನದಲ್ಲಿ ತರುಣ್ ಸುಧೀರ್ ಕೂಡ ಇದ್ದಾರೆ. ರಮೇಶ್ ಅರವಿಂದ್, ಪ್ರೇಮಾ, ನಿಶ್ವಿಕಾ ನಾಯ್ಡು ಜೊತೆ ಅವರಿಗೂ ಈ ಪ್ಯಾನಲ್​ನಲ್ಲಿ ಅವಕಾಶ ಸಿಕ್ಕಿದೆ. ಜೀ ಕನ್ನಡ ವಾಹಿನಿಯವರು ಮಹಾನಟಿ ವೇದಿಕೆ ಮೇಲೆ ಈ ದಂಪತಿಯ ವಿವಾಹ ವಾರ್ಷಿಕೋತ್ಸವ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕ್ಷಣ ತುಂಬಾನೇ ವಿಶೇಷವಾಗಿತ್ತು.

ಇದನ್ನೂ ಓದಿ
Image
ಜೂ. ಎನ್​ಟಿಆರ್​ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
Image
ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್​​ಗಳು; ಇಲ್ಲಿದೆ ವಿವರ
Image
‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ತರುಣ್ ಸುಧೀರ್​ಗೆ ಸೋನಲ್ ಮೇಲೆ ವಿಶೇಷ ಪ್ರೀತಿ ಇದೆ. ಅವರು ವೇದಿಕೆ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ‘12 ತಿಂಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಈ ಹೂವಿನಂತೆ ನಮ್ಮ ಜೀವನ ಅರಳಲಿ. ನೀನು ನನ್ನ ಕುಟುಂಬವನ್ನು ಕಾಪಾಡ್ತೀಯಾ ಎಂಬ ನಂಬಿಕೆ ನನಗೆ ಇದೆ. ಹಿಂದಿನದ್ದನ್ನು ನಾನು ಯೋಚನೆ ಮಾಡುವುದಿಲ್ಲ. ಈ ಸಮಯವನ್ನು ಖುಷಿಯಾಗಿ ಇಡುತ್ತೇನೆ’ ಎಂದು ತರುಣ್ ಪ್ರಾಮಿಸ್ ಮಾಡಿದರು. ಜೊತೆಗೆ ಹೂಗುಚ್ಛ, ಸೀರೆ ಮತ್ತಿತ್ಯಾದಿ ಉಡುಗೊರೆ ನೀಡಿದರು.

ಇದನ್ನೂ ಓದಿ: ಮನೆಯಲ್ಲಿ ನನ್ನದೇ ಡೈರೆಕ್ಷನ್, ಹೇಳಿದಂತೆ ತರುಣ್ ಕೇಳಬೇಕು: ಸೋನಲ್

ಸೋನಲ್ ನೀಡಿದ್ದ ಉಡುಗೊರೆ ಮತ್ತಷ್ಟು ವಿಶೇಷ ಆಗಿತ್ತು. ಅವರು ಪತಿಗಾಗಿ ವಿಶೇಷ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ‘ಹಾಡನ್ನು ರೆಕಾರ್ಡ್ ಮಾಡೋಕೆ ಬಂದಿದ್ದೇನೆ. ಈ ಹಾಡು ನಿಮಗಾಗಿ’ ಎಂದು ಸೋನಲ್ ವಿಟಿ ಪ್ಲೇ ಮಾಡಲಾಯಿತು. ಇದನ್ನು ಕೇಳಿ ತರುಣ್ ಸುಧೀರ್ ಭಾವುಕರಾದರು. ಸೋನಲ್​ಗೆ ಖುಷಿಯಿಂದ ತರುಣ್ ಕೈ ಮುಗಿದು ಬಿಟ್ಟರು. ಸದ್ಯ ಈ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಜೀ ಕನ್ನಡ ವಾಹಿನಿ ಪ್ರೋಮೋ

View this post on Instagram

A post shared by Zee Kannada (@zeekannada)

2021ರಲ್ಲಿ ರಿಲೀಸ್ ಆದ ‘ಕಾಟೇರ’ ಸಿನಿಮಾಗೆ ತರುಣ್ ನಿರ್ದೇಶನ ಇತ್ತು. ಈ ಚಿತ್ರದಲ್ಲಿ ಸೋನಲ್ ನಟಿಸಿದ್ದರು. ಈ ಸಮಯದಲ್ಲಿ ಒಳ್ಳೆಯ ಪರಿಚಯ ಬೆಳೆಯಿತು. ಆ ಬಳಿಕ ಅದು ಪ್ರೀತಿಗೆ ತಿರುಗಿತು. ಕುಟುಂಬದ ಸಮ್ಮುಖದಲ್ಲಿ ಇವರು ಮದುವೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Thu, 7 August 25