ಜೂ. ಎನ್ಟಿಆರ್ಗೆ ಸಿದ್ಧತೆಯೇ ಬೇಡ; ಡ್ಯಾನ್ಸ್ ಸ್ಟೆಪ್ ನೋಡಿ ದಂಗಾದ ಹೃತಿಕ್
'ವಾರ್ 2' ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರ ಅದ್ಭುತ ನೃತ್ಯ ಪ್ರತಿಭೆಗೆ ಹೃತಿಕ್ ರೋಷನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಅವರನ್ನು ಪ್ರತಿಭಾನ್ವಿತ ನಟ ಮತ್ತು ಅಸಾಧಾರಣ ಡ್ಯಾನ್ಸರ್ ಎಂದು ಹೊಗಳಿದ್ದಾರೆ. ರಿಹರ್ಸಲ್ ಇಲ್ಲದೆ ಅದ್ಭುತ ನೃತ್ಯ ಮಾಡುವ ಜೂನಿಯರ್ ಎನ್ಟಿಆರ್ ಅವರನ್ನು ನೋಡಿ ತಾನು ಬೆರಗಾಗಿದ್ದೇನೆ ಎಂದು ಹೃತಿಕ್ ಹೇಳಿದ್ದಾರೆ.

ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಸಾಕಷ್ಟು ಪ್ರ್ಯಾಕ್ಟಿಸ್ ಕೂಡ ಮಾಡಬೇಕು. ಆದರೆ, ಕೆಲವು ಹೀರೋಗಳಿಗೆ ಇದು ಬೇಕಾಗುವುದೇ ಇಲ್ಲ. ಈ ಸಾಲಿನಲ್ಲಿ ಜೂನಿಯರ್ ಎನ್ಟಿಆರ್ ಕೂಡ ಇದ್ದಾರೆ. ಅವರನ್ನು ಹೃತಿಕ್ ರೋಷನ್ (Hrithik Roshan) ಅವರು ಹಾಡಿ ಹೊಗಳಿದ್ದಾರೆ. ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಹೃತಿಕ್ ಹಾಗೂ ಜೂ. ಎನ್ಟಿಆರ್ ‘ವಾರ್ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ.
ಹೃತಿಕ್ ರೋಷನ್ ಅವರು ದೊಡ್ಡ ಸ್ಟಾರ್ ಹೀರೋ. ಅವರು ಜೂನಿಯರ್ ಎನ್ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಅದರಲ್ಲೂ ಹೃತಿಕ್ ಕೂಡ ಒಳ್ಳೆಯ ಡ್ಯಾನ್ಸರ್. ಹೀಗಾಗಿ, ಒಳ್ಳೆಯ ಡ್ಯಾನ್ಸ್ ಸಾಂಗ್ನ ಜನರು ಈ ಸಿನಿಮಾದಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಆ ರೀತಿಯ ಹಾಡು ‘ವಾರ್ 2’ ಚಿತ್ರದಲ್ಲಿ ಇದೆ ಎನ್ನಲಾಗಿದೆ.
ಶ್ರೀಲಂಕಾದಲ್ಲಿ ನಡೆದ ಈವೆಂಟ್ ಒಂದರಲ್ಲಿ ಹೃತಿಕ್ ಮಾತನಾಡಿದ್ದಾರೆ. ಜೂನಿಯರ್ ಎನ್ಟಿಆರ್ ಡ್ಯಾನ್ಸ್ ಸ್ಕಿಲ್ನ ಅವರು ಹಾಡಿ ಹೊಗಳಿದ್ದಾರೆ. ‘ಜೂನಿಯರ್ ಎನ್ಟಿಆರ್ ಅವರು ಅದ್ಭುತ ನಟ, ಡ್ಯಾನ್ಸರ್. ಅವರು ನಿಜವಾದ ಚಾಂಪಿಯನ್’ ಎಂದು ಹಾಡಿ ಹೊಗಳಿದ್ದಾರೆ.
‘ನಾನು ಕೆಲಸ ಮಾಡಿದ ಸಹನಟರಲ್ಲಿ ರಿಹರ್ಸಲ್ ಅಗತ್ಯವಿಲ್ಲದ ಮೊದಲ ನಟ ಎಂದರೆ ಅದು ಜೂನಿಯರ್ ಎನ್ಟಿಆರ್. ಅವರೊಳಗೆ ಪ್ರತಿ ಹೆಜ್ಜೆಯೂ ಇದೆ. ಅದು ನನ್ನನ್ನು ಸಂಪೂರ್ಣವಾಗಿ ಬೆರಗುಗೊಳಿಸಿತು. ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಡ್ಯಾನ್ಸ್ ಮಾಡೋದು ಒಂದೊಳ್ಳೆಯ ಅನುಭವ ಆಗಿತ್ತು. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ಅದನ್ನು ನಾನು ಈಗ ಅಳವಡಿಸಿಕೊಳ್ಳುತ್ತೇನೆ’ ಎಂದರು ಹೃತಿಕ್.
ಇದನ್ನೂ ಓದಿ: War 2: ಜೂ. ಎನ್ಟಿಆರ್ಗಿಂತಲೂ ಕಡಿಮೆ ಸಂಭಾವನೆ ಪಡೆದ ಹೃತಿಕ್ ರೋಷನ್; ಆದರೆ ಒಂದು ಟ್ವಿಸ್ಟ್
‘ವಾರ್ 2’ ಸಿನಿಮಾ ಹಿಂದಿ ಜೊತೆಗೆ ತೆಲುಗು, ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ (ಆಗಸ್ಟ್ 14) ಸಿನಿಮಾ ಅಬ್ಬರಿಸಲು ರೆಡಿ ಆಗಿದೆ. ಜೂನಿಯರ್ ಎನ್ಟಿಆರ್ ಅವರು ಹಲವು ಕಷ್ಟದ ದೃಶ್ಯಗಳನ್ನು ಸುಲಭದಲ್ಲಿ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಡದ ಡ್ಯಾನ್ಸ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಹೀರೋ ಆದರೆ, ಜೂನಿಯರ್ ಎನ್ಟಿಆರ್ ವಿಲನ್ ಎನ್ನಲಾಗಿದೆ. ಕಿಯಾರಾ ಅಡ್ವಾಣಿ ಚಿತ್ರದ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







