ರೊನಾಲ್ಡೊವನ್ನು ಹಿಂದಿಕ್ಕಿದ ದೀಪಿಕಾ ಪಡುಕೋಣೆ, ಬರೆದರು ಹೊಸ ವಿಶ್ವ ದಾಖಲೆ
Deepika Padukone: ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತದ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಮಾಡಿರುವ ವಿಶ್ವ ದಾಖಲೆ ಏನು? ರೊನಾಲ್ಡೊ ಅನ್ನೂ ಸಹ ನಟಿ ದೀಪಿಕಾ ಹಿಂದಿಕ್ಕಿದ್ದು ಹೇಗೆ? ಇಲ್ಲಿದೆ ಮಾಹಿತಿ.

ದೀಪಿಕಾ ಪಡುಕೋಣೆ (Deepika Padukone) ಭಾರತದ ಸ್ಟಾರ್ ನಟಿ. ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅಟ್ಲಿ ನಿರ್ದೇಶಿಸಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾನಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತದ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಸುಮಾರು ಎಂಟು ಕೋಟಿ ಫಾಲೋವರ್ಗಳನ್ನು ದೀಪಿಕಾ ಪಡುಕೋಣೆ ಹೊಂದಿದ್ದಾರೆ. ತಮ್ಮ ಚಿತ್ರಗಳು, ಫೋಟೊಶೂಟ್, ಸಿನಿಮಾ ಮಾಹಿತಿ ಮತ್ತು ಜಾಹೀರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದ ರೀಲ್ ಒಂದು ಈಗ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್ ಎನಿಸಿಕೊಂಡಿದೆ.
ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ‘ಹಿಲ್ಟನ್’ನ ಜಾಹೀರಾತಿನ ವಿಡಿಯೋ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ಅಂದರೆ ಬರೋಬ್ಬರಿ 190 ಕೋಟಿ ಬಾರಿ ದೀಪಿಕಾರ ಆ ವಿಡಿಯೋ ಅನ್ನು ವೀಕ್ಷಿಸಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಪಟ್ಟ ಇನ್ನೊಂದು ವಿಡಿಯೋ ಇಲ್ಲ.
ಇದನ್ನೂ ಓದಿ:ಮತ್ತೊಂದು ತೆಲುಗು ಸಿನಿಮಾ ಅವಕಾಶ ಕಳೆದುಕೊಂಡರೇ ದೀಪಿಕಾ ಪಡುಕೋಣೆ
ಈ ಹಿಂದೆ ಹಾರ್ದಿಕ್ ಪಾಂಡ್ಯಾರ ರೀಲ್ ಒಂದು 1.6 ಬಿಲಿಯನ್ ವೀಕ್ಷಣೆ ಕಂಡಿತ್ತು. ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್ ಒಂದು 1.5 ಬಿಲಿಯನ್ ವೀಕ್ಷಣೆ ಕಂಡಿತ್ತು. ಆದರೆ ದೀಪಿಕಾ ಪಡುಕೋಣೆಯ ರೀಲ್ಸ್ ಎಲ್ಲ ದಾಖಲೆಗಳನ್ನು ಮುರಿದು ಬಿಸಾಡಿದೆ. ಆಗಸ್ಟ್ 4ಕ್ಕೆ ದೀಪಿಕಾ ಪಡುಕೋಣೆಯ ರೀಲ್ಸ್ 190 ಕೋಟಿ ವೀವ್ಸ್ ಪಡೆದುಕೊಂಡಿತ್ತು. ಸುಮಾರು 11 ಲಕ್ಷ ಲೈಕ್ಸ್ಗಳನ್ನು ಸಹ ಈ ವಿಡಿಯೋ ಪಡೆದುಕೊಂಡಿದೆ.
ತಾಯ್ತನಕ್ಕಾಗಿ ಬ್ರೇಕ್ ಪಡೆದುಕೊಂಡಿದ್ದ ದೀಪಿಕಾ ಪಡುಕೋಣೆಯ ಕಮ್ಬ್ಯಾಕ್ ಬಗ್ಗೆ ಕೆಲವು ಅನುಮಾನಗಳು ಎದ್ದಿದ್ದವು. ದೀಪಿಕಾ ಪಡುಕೋಣೆಯನ್ನು ಜನ ಮರೆತಿದ್ದಾರೆ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ದೀಪಿಕಾ ಇಷ್ಟವಾಗುವುದಿಲ್ಲ ಎಂಬ ಚರ್ಚೆಗಳು ಹುಟ್ಟುಕೊಂಡಿದ್ದವು. ಆದರೆ ಈಗ ಈ ಹೊಸ ವಿಶ್ವ ದಾಖಲೆಯೊಟ್ಟಿಗೆ ಎಲ್ಲರ ಬಾಯಿ ಮುಚ್ಚಿಸಿದ್ದಾರೆ ದೀಪಿಕಾ ಪಡುಕೋಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Tue, 5 August 25




