ರಾಜ್ ಬಿ. ಶೆಟ್ಟಿ ಬಳಿ ಇವೆ ಮೂರು ಅದ್ಭುತ ಪ್ರಾಜೆಕ್ಟ್ಗಳು; ಇಲ್ಲಿದೆ ವಿವರ
ರಾಜ್ ಬಿ. ಶೆಟ್ಟಿ ಅವರ 'ಸು ಫ್ರಮ್ ಸೋ' ಚಿತ್ರದ ಭಾರೀ ಯಶಸ್ಸು ಕಂಡಿದೆ. ಅವರ ಮುಂದಿನ ಯೋಜನೆಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. '45' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ಇನ್ನೂ ಎರಡು ಪ್ರಾಜೆಕ್ಟ್ಗಳು ಅವರ ಬಳಿ ಇವೆ.

‘ಸು ಫ್ರಮ್ ಸೋ’ ಸಿನಿಮಾದಿಂದ ರಾಜ್ ಬಿ. ಶೆಟ್ಟಿ ಹೆಸರು ಎಲ್ಲ ಕಡೆಗಳಲ್ಲೂ ಹಬ್ಬಿದೆ. ಬಾಲಿವುಡ್ ಮಂದಿ ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಮಲಯಾಳಂನಲ್ಲಿ ಈಗಾಗಲೇ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ತೆಲುಗು ರಾಜ್ಯಕ್ಕೂ ಸಿನಿಮಾ ಕಾಲಿಡುತ್ತಿದೆ. ಹೀಗಿರುವಾಗಲೇ ರಾಜ್ ಬಿ. ಶೆಟ್ಟಿ (Raj B Shetty) ಅವರ ಮುಂದಿನ ಪ್ರಾಜೆಕ್ಟ್ಗಳು ಯಾವವು ಎನ್ನುವ ಬಗ್ಗೆ ಅನೇಕರಿಗೆ ಕುತೂಹಲ ಇದೆ. ಆ ಬಗ್ಗೆ ಅವರ ಕಡೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ತೆರೆ ಕಂಡಿತು. ಈ ಚಿತ್ರದಿಂದ ನಿರ್ಮಾಪಕನಾಗಿ ರಾಜ್ ಬಿ. ಶೆಟ್ಟಿ ಯಶಸ್ಸು ಕಂಡಿದ್ದಾರೆ. ‘ಲಾಫಿಂಗ್ ಬುದ್ಧ’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಇದರಿಂದ ನಿರ್ಮಾಪಕರು ಭಾರೀ ಲಾಭ ಕಂಡಿದ್ದಾರೆ. ಈ ಸಿನಿಮಾ ಗೆದ್ದ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಮಾಡೋ ಕೆಲಸವನ್ನು ಅವರು ಮಾಡುತ್ತಿಲ್ಲ. ಬದಲಿಗೆ ಬೇರೆ ರೀತಿಯ ಚಿತ್ರಗಳನ್ನು ಮಾಡುತ್ತಿದ್ದಾರೆ.
45 ಚಿತ್ರ
ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದ ಭಾಗ ಆಗಿದ್ದಾರೆ. ಇದರಲ್ಲಿ ರಾಜ್ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗಾಗಲೇ ‘ಸು ಫ್ರಮ್ ಸೋ’ ಸಿನಿಮಾ ಕನ್ನಡದಲ್ಲಿ ಅಬ್ಬರಿಸುತ್ತಿದೆ. ಈ ಕಾರಣಕ್ಕೆ ‘45’ ಸಿನಿಮಾನ ಸೆಪ್ಟೆಂಬರ್ನಲ್ಲಿ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಂಡದ ಕಡೆಯಿಂದ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಹೊಸ ದಾಖಲೆ; ಸತತ 9 ದಿನ 3+ ಕೋಟಿ ರೂಪಾಯಿ ಕಲೆಕ್ಷನ್
ಇನ್ನೂ ಎರಡು ಪ್ರಾಜೆಕ್ಟ್ಗಳು
ಹಾಸ್ಯದ ಬಳಿಕ ರಾಜ್ ಬಿ. ಶೆಟ್ಟಿ ಅವರು ಒಂದು ಥ್ರಿಲ್ಲರ್ ಸಿನಿಮಾ ಬರೆಯುತ್ತಿದ್ದಾರೆ. ಈ ಚಿತ್ರದ ಬರವಣಿಗೆ ಸದ್ಯ ಪ್ರಗತಿಯಲ್ಲಿ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇನ್ನು, ಒಂದು ವೆಬ್ ಸೀರಿಸ್ ಮಾಡುವ ಆಲೋಚನೆ ಕೂಡ ಅವರಿಗೆ ಇದೆ. ಇದರ ಮಾತುಕತೆ ಕೂಡ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








