AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋಂಡಾ, ಬಜ್ಜಿ, ಕರಿದ ತಿಂಡಿಗಳ ಸವಿಯುವ ಮುನ್ನ ಎಚ್ಚರ: ಬೆಂಗಳೂರಿನ ಬಹುತೇಕ ಕಡೆ ಕಳಪೆ ಅಡುಗೆ ಎಣ್ಣೆ ಬಳಕೆ

ರಸ್ತೆ ಬದಿಯಲ್ಲಿ ಅಥವಾ ಹೋಟೆಲ್​​ಗಳಲ್ಲಿ ಕರಿದ ತಿಂಡಿಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಆರೋಗ್ಯದ ಬಗ್ಗೆ ಕೊಂಚ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ, ನೀವು ತಿನ್ನುವ ಬಿಸಿ ಬಿಸಿ ಬಜ್ಜಿ, ಸ್ನ್ಯಾಕ್ಸ್​​ಗಳು ಕರಿಯುವ ಅಡುಗೆ ಎಣ್ಣೆ ಶುದ್ಧವಾಗಿಲ್ಲ. ಇದು ನಿಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಬಹುದು.

ಬೋಂಡಾ, ಬಜ್ಜಿ, ಕರಿದ ತಿಂಡಿಗಳ ಸವಿಯುವ ಮುನ್ನ ಎಚ್ಚರ: ಬೆಂಗಳೂರಿನ ಬಹುತೇಕ ಕಡೆ ಕಳಪೆ ಅಡುಗೆ ಎಣ್ಣೆ ಬಳಕೆ
ಸಾಂದರ್ಭಿಕ ಚಿತ್ರ
Vinay Kashappanavar
| Updated By: Ganapathi Sharma|

Updated on:Aug 07, 2025 | 7:00 AM

Share

ಬೆಂಗಳೂರು, ಆಗಸ್ಟ್ 7: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್​ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ​ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ, ಕಬಾಬ್​​ನಂತಹ ತಿನಿಸುಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ​ಆದರೆ ಇವುಗಳನ್ನು ತಿನ್ನುವಾಗ ಇದು ಎಷ್ಟು ಸುರಕ್ಷಿತ ಎಂಬುದನ್ನು ಯಾರು ಕೂಡಾ ಯೋಚನೆ ಮಾಡಿರುವುದಿಲ್ಲ. ಆದರೆ, ಇನ್ಮುಂದೆ ನೀವು ಇದನ್ನು ಯೋಚಿಸಲೇ ಬೇಕು.

ಬೆಂಗಳೂರಿನ ಅನೇಕ ಕಡೆಗಳಲ್ಲಿ ತಿನಿಸುಗಳಿಗೆ ಬಳಸುವ ಅಡುಗೆ ಎಣ್ಣೆ ಸುರಕ್ಷಿತ ಅಲ್ಲ ಎಂಬುದು ಕಂಡು ಬಂದಿದೆ. ರಸ್ತೆ ಬದಿಯಲ್ಲಿ, ಹೋಟೆಲ್​​ಗಳಲ್ಲಿ ಕರಿಯುವ ಎಣ್ಣೆಯನ್ನು ಎರಡಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿರುವುದು ಕಂಡು ಬಂದಿದೆ. ಹಲವು ಬಾರಿ ಮರುಬಳಕೆ ಮಾಡಿರುವ ಅಡುಗೆ ಎಣ್ಣೆಯಲ್ಲಿ ಟ್ರಾನ್ಸ್​ಫ್ಯಾಟ್​ ಅಂಶ ಕಂಡು ಬಂದಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.

ಅಡುಗೆ ಎಣ್ಣೆಯಲ್ಲಿ ಟ್ರಾನ್ಸ್​ಫ್ಯಾಟ್​ ಅಂಶ

ಯಾವುದೇ ಅಡುಗೆ ಎಣ್ಣೆಯಲ್ಲಿ ಶೇ 2 ಕ್ಕಿಂತ ಕಡಿಮೆ ಟ್ರಾನ್ಸ್​ಫ್ಯಾಟ್ ಇದ್ದರೆ ಮಾತ್ರ ಅದು ಬಳಕೆಗೆ ಯೋಗ್ಯ. ಇಲ್ಲವಾದರೆ ಇದರಲ್ಲಿ ವಿಷಕಾರಿ, ಅಂದರೆ ಕಾರ್ಸಿನೋಜನಿಕ್​​ನಂತಹ ಅಂಶಗಳು ಉತ್ಪತ್ತಿಯಾಗುತ್ತವೆ. ಅಂತಹ ಅಡುಗೆ ಎಣ್ಣೆಯನ್ನು ಬಳಸಿ ಮಾಡಿದ ತಿನಿಸು ಸೇವಿಸಿದರೆ ಮನುಷ್ಯನ ದೇಹದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತದೆ. ಇದಕ್ಕಾಗಿ ಇಂತಹ ಮರು ಬಳಕೆಯೆ ಅಡುಗೆ ಎಣ್ಣೆಯನ್ನು ಬಳಸಬಾರದು ಎಂದು ಆಹಾರ ಇಲಾಖೆ ಹೇಳಿದೆ.

ಮರುಬಳಕೆ ಎಣ್ಣೆಯಿಂದ ಏನೆಲ್ಲಾ ದುಷ್ಪರಿಣಾಮ?

  • ನ್ಯೂರೋಲಾಜಿಕಲ್ ಡಿಸಾರ್ಡರ್
  • ದೇಹದಲ್ಲಿ ನ್ಯೂರೋಟಾಕ್ಸಿನ್ಸ್​ ಹೆಚ್ಚಾಗುತ್ತದೆ
  • ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ
  • ದೇಹದ ಉತ್ತಮ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
  • ಹೃದಯಾಘಾತ, ಹೃದಯಸ್ಥಂಭನ ಸಂಭವಿಸುತ್ತದೆ

ಇದನ್ನೂ ಓದಿ: ಇರುವ ಕ್ಯಾಂಟೀನ್ ನಿರ್ವಹಣೆ ಬಿಟ್ಟು 20 ಕೋಟಿ ರೂ. ವೆಚ್ಚದಲ್ಲಿ ಹೊಸ ಇಂದಿರಾ ಕ್ಯಾಂಟೀನ್​ಗಳ ಆರಂಭಿಸಲು ಮುಂದಾದ ಬಿಬಿಎಂಪಿ

ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಒಂದು ಅಥವಾ ಎರಡು ಬಾರಿ ಅಡುಗೆ ಎಣ್ಣೆ ಬಳಸಿದರೆ ಅದನ್ನ ಬಯೋ ಡೀಸೆಲ್ ತಯಾರಿಕಾ ಘಟಕಕ್ಕೆ ನೀಡಬೇಕೆಂದು ಆರ್​ಯುಸಿಓ ಏಜೆನ್ಸಿಗಳಿಗೆ ಹಾಗೂ ಹೋಟೆಲ್​ ಉದ್ದಿಮೆದಾರರಿಗೆ ಸೂಚನೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 am, Thu, 7 August 25