ಬಿಗ್ ಬಾಸ್ಗೆ ಹೋಗೋಕೆ ದರ್ಶನ್ ಫ್ಯಾನ್ಸ್ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಸೋನು ಶೆಟ್ಟಿ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಫ್ಯಾನ್ಸ್ ಮಾಡಿದ ಅಸಭ್ಯ ಕಮೆಂಟ್, ಮೆಸೇಜ್ಗಳನ್ನು ಸೋನು ಶೆಟ್ಟಿ ಖಂಡಿಸಿದ್ದಾರೆ. ಸೋನು ಶೆಟ್ಟಿ ಇಷ್ಟೆಲ್ಲ ಮಾಡುತ್ತಿರುವುದು ಪ್ರಚಾರಕ್ಕಾಗಿಯೇ? ಬಿಗ್ ಬಾಸ್ ಶೋಗೆ ಹೋಗುವ ಸಲುವಾಗಿ ಈ ರೀತಿ ಮಾಡಿದ್ದಾರಾ ಎಂದು ಕೂಡ ಕೆಲವರು ಪ್ರಶ್ನಿಸಿದ್ದಾರೆ.
ಮಾಡೆಲ್ ಸೋನು ಶೆಟ್ಟಿ ಅವರು ದರ್ಶನ್ ಅಭಿಮಾನಿಗಳ (Darshan Fans) ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಫ್ಯಾನ್ಸ್ ಮಾಡಿದ ಅಸಭ್ಯ ಕಮೆಂಟ್ ಮತ್ತು ಮೆಸೇಜ್ಗಳನ್ನು ಸೋನು ಶೆಟ್ಟಿ ಖಂಡಿಸಿದ್ದಾರೆ. ಹಾಗಾದ್ರೆ ಸೋನು ಶೆಟ್ಟಿ ಅವರು ಇಷ್ಟೆಲ್ಲ ಮಾಡುತ್ತಿರುವುದು ಪ್ರಚಾರಕ್ಕಾಗಿಯೇ? ಬಿಗ್ ಬಾಸ್ (Bigg Boss Kannada) ಶೋಗೆ ಹೋಗುವ ಸಲುವಾಗಿ ಅವರು ಈ ರೀತಿ ಮಾಡಿದ್ದಾರಾ ಎಂದು ಕೂಡ ಕೆಲವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸೋನು ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಗ್ ಬಾಸ್ಗೆ ಹೋಗಬೇಕು ಎಂಬುದಾಗಿದ್ರೆ ನಾನು ಈ ಮೊದಲೇ ದರ್ಶನ್ ಪರ ಮಾತನಾಡುತ್ತಿರಲಿಲ್ಲ. ನನಗೆ ಪ್ರತಿಭೆ ಇದೆ, ಸ್ಕಿಲ್ ಇದೆ. ಬೇರೆಯವರ ಹೆಸರು ತೆಗೆದುಕೊಂಡು ಮುಂದೆ ಹೋಗುವ ಅವಶ್ಯಕತೆ ನನಗೆ ಇಲ್ಲ’ ಎಂದು ಸೋನು ಶೆಟ್ಟಿ (Sonu Shetty) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
