AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ 24ರಂದು ಶುರು ಆಗಲಿದೆ ಬಿಗ್ ಬಾಸ್ ಹೊಸ ಸೀಸನ್; ಬಂತು ಪ್ರೋಮೋ

‘ಜಿಯೋ ಹಾಟ್ ಸ್ಟಾರ್’ ಒಟಿಟಿ ಹಾಗೂ ‘ಕಲರ್ಸ್’ ಟಿವಿಯಲ್ಲಿ ಆಗಸ್ಟ್ 24ರಿಂದ ‘ಬಿಗ್ ಬಾಸ್ 19’ ಪ್ರಸಾರ ಆಗಲಿದೆ. ‘ಸಿಕ್ಕಾಪಟ್ಟೆ ಫನ್ ಆಗಿರಲಿದೆ’ ಎಂದು ಸಲ್ಮಾನ್ ಖಾನ್ ಅವರು ಹೊಸ ಪ್ರೋಮೋದ ಮೂಲಕ ಭರವಸೆ ನೀಡಿದ್ದಾರೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಆಗಸ್ಟ್ 24ರಂದು ಶುರು ಆಗಲಿದೆ ಬಿಗ್ ಬಾಸ್ ಹೊಸ ಸೀಸನ್; ಬಂತು ಪ್ರೋಮೋ
Bigg Boss 19
ಮದನ್​ ಕುಮಾರ್​
|

Updated on: Jul 31, 2025 | 8:34 PM

Share

ಕಿರುತೆರೆ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ‘ಬಿಗ್ ಬಾಸ್’ (Bigg Boss) ಶೋ ಹಲವು ಭಾಷೆಯಲ್ಲಿ ಜನಪ್ರಿಯವಾಗಿದೆ. ಹಿಂದಿಯಲ್ಲಿ 18 ಸೀಸನ್​​ಗಳು ಯಶಸ್ವಿಯಾಗಿ ಮುಗಿದಿದ್ದು, 19ನೇ ಸೀಸನ್ ನೋಡಲು ಪ್ರೇಕ್ಷಕರು ಕಾದಿದ್ದಾರೆ. ಈ ಬಾರಿ ಕೂಡ ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡಲಿದ್ದಾರೆ. ಕೆಲವೇ ದಿನಗಳ ಹಿಂದೆ ಹೊಸ ಲೋಗೋ ಬಿಡುಗಡೆ ಮಾಡಲಾಗಿತ್ತು. ಈಗ ಪ್ರೋಮೋ ರಿಲೀಸ್ ಆಗಿದೆ. ಅಲ್ಲದೇ, ‘ಬಿಗ್ ಬಾಸ್ 19’ (Bigg Boss 19) ಪ್ರೀಮಿಯರ್ ದಿನಾಂಕವನ್ನೂ ತಿಳಿಸಲಾಗಿದೆ. ಆಗಸ್ಟ್ 24ರಂದು ಅದ್ದೂರಿಯಾಗಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲಿದೆ.

ಈ ಬಾರಿ ಬಿಗ್ ಬಾಸ್ ಕೊಂಚ ಡಿಫರೆಂಟ್ ಆಗಿರಲಿದೆ. ಪ್ರತಿ ಬಾರಿಯಂತೆ ಈ ಸಲ ಕೂಡ ಕೆಲವು ಪ್ರಯೋಗಳನ್ನು ಮಾಡಲು ತೀರ್ಮಾನಿಸಲಾಗಿದೆಯಂತೆ. ವರದಿಗಳ ಪ್ರಕಾರ, ಬಿಗ್ ಬಾಸ್ 19ನೇ ಸೀಸನ್​ ಬರೋಬ್ಬರಿ ಐದೂವರೆ ತಿಂಗಳು ನಡೆಯಲಿದೆ. ಇಷ್ಟು ವರ್ಷ ಕೇವಲ ಮೂರು ಅಥವಾ ಮೂರುವರೆ ತಿಂಗಳು ನಡೆಯುತ್ತಿತ್ತು. ಈ ಬಾರಿ ವೀಕ್ಷಕರಿಗೆ ಹೆಚ್ಚುವರಿ ಮನರಂಜನೆ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ
Image
ಸಲ್ಲು ಜೊತೆ ಪ್ರೇಮ, ಇಬ್ಬರು ಮಕ್ಕಳ ತಂದೆಯ ಜೊತೆ ವಿವಾಹ, ಆ ಬಳಿಕ ವಿಚ್ಛೇದನ
Image
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
Image
ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
Image
ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು

ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಗೆ ಬಿಗ್ ಬಾಸ್ ಆಫರ್​ ನೀಡಲಾಗಿದೆ. ಆ ಪೈಕಿ ಯಾರಿಗೆ ದೊಡ್ಮನೆ ಪ್ರವೇಶಿಸುವ ಚಾನ್ಸ್ ಸಿಗಲಿ ಎಂಬುದನ್ನು ತಿಳಿಯಲು ವೀಕ್ಷಕರಿಗೆ ಸಖತ್ ಕುತೂಹಲ ಇದೆ. ಬಿಗ್ ಬಾಸ್ 19ನೇ ಸೀಸನ್ ಆರಂಭಕ್ಕೆ ಒಂದು ತಿಂಗಳು ಕೂಡ ಬಾಕಿ ಇಲ್ಲ. ಸಲ್ಮಾನ್ ಖಾನ್ ಅವರು ಕಾಣಿಸಿಕೊಂಡಿರುವ ಪ್ರೋಮೋ ನೋಡಿದ ಮೇಲೆ ಫ್ಯಾನ್ಸ್ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ.

‘ಬಿಗ್ ಬಾಸ್ 19’ ಪ್ರೋಮೋ:

ಸಲ್ಮಾನ್ ಖಾನ್ ಅವರು ಸಿನಿಮಾ ಮತ್ತು ಬಿಗ್ ಬಾಸ್ ಎರಡನ್ನೂ ನಿಭಾಯಿಸಬೇಕಿದೆ. 5 ತಿಂಗಳು ಬಿಗ್ ಬಾಸ್ ನಡೆದರೆ ಎಲ್ಲ ವಾರ ಅವರೇ ನಿರೂಪಣೆ ಮಾಡುವುದು ಕಷ್ಟ. ಸಿನಿಮಾ ಶೂಟಿಂಗ್ ಇದ್ದಾಗ ಬೇರೆ ನಟರು ಬಿಗ್ ಬಾಸ್ ನಡೆಸಿಕೊಡಬೇಕಾಗಬಹುದು. ಆ ಜವಾಬ್ದಾರಿ ನಿಭಾಯಿಸಲು ಕೆಲವು ಸೆಲೆಬ್ರಿಟಿಗಳ ಜೊತೆ ಮಾತುಕಥೆ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡೋದು ಒಬ್ಬರಲ್ಲ, ಮೂವರು ಸೆಲೆಬ್ರಿಟಿಗಳು

ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ರಾಜಕಾರಣಿಯ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಬಾರಿ ಮನೆಯವರ ಸರ್ಕಾರ’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಹೊಸ ಸೀಸನ್​ನ ಥೀಮ್ ಏನು ಎಂಬುದರ ಸುಳಿವನ್ನು ಅವರು ನೀಡಿದ್ದಾರೆ. ‘ಜಿಯೋ ಹಾಟ್​ ಸ್ಟಾರ್’ ಮತ್ತು ‘ಕಲರ್ಸ್’ ವಾಹಿನಿಯಲ್ಲಿ ಬಿಗ್ ಬಾಸ್ 19ನೇ ಸೀಸನ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು