AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ನಾಲ್ಕನೇ ವಾರ ನಂಬರ್ 1 ಆದ ‘ಕರ್ಣ’ ಧಾರಾವಾಹಿ; ಟಾಪ್ 5 ಸೀರಿಯಲ್ಸ್ ಪಟ್ಟಿ

ಜೀ ಕನ್ನಡ ಮತ್ತು ಕಲರ್ಸ್ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಟಿಆರ್‌ಪಿ ಹೊರ ಬಿದ್ದಿದೆ. ‘ಕರ್ಣ’ಧಾರಾವಾಹಿ ನಾಲ್ಕನೇ ವಾರವೂ ಮೊದಲ ಸ್ಥಾನದಲ್ಲಿದ್ದರೆ, ‘ಲಕ್ಷ್ಮೀ ನಿವಾಸ’ ಎರಡನೇ ಸ್ಥಾನದಲ್ಲಿದೆ. ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಅಭಿನಯಿಸಿರುವ ‘ಕರ್ಣ’ ಧಾರಾವಾಹಿಯ ಜನಪ್ರಿಯತೆ ಹೆಚ್ಚಾಗಿದೆ.

ಸತತ ನಾಲ್ಕನೇ ವಾರ ನಂಬರ್ 1 ಆದ ‘ಕರ್ಣ’ ಧಾರಾವಾಹಿ; ಟಾಪ್ 5 ಸೀರಿಯಲ್ಸ್ ಪಟ್ಟಿ
ಕರ್ಣ
ರಾಜೇಶ್ ದುಗ್ಗುಮನೆ
|

Updated on: Jul 31, 2025 | 2:54 PM

Share

ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮೊದಲಾದವರು ನಟಿಸಿರೋ ‘ಕರ್ಣ’ ಧಾರಾವಾಹಿ (Karna Serial) ಸತತ ನಾಲ್ಕನೇ ವಾರ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಧಾರಾವಾಹಿ ಎಲ್ಲರ ಫೇವರಿಟ್ ಎನಿಸಿಕೊಂಡಿದೆ. ಕಳೆದ ಮೂರು ವಾರಗಳಿಂದ ಧಾರಾವಾಹಿಗೆ 10+ ಟಿಆರ್​ಪಿ ಸಿಗುತ್ತಿತ್ತು. ಆದರೆ, ನಾಲ್ಕನೇ ವಾರದ ಟಿಆರ್​ಪಿಯಲ್ಲಿ ಧಾರಾವಾಹಿ ಮೊದಲಿಗಿಂತ ಕೊಂಚ ಕಡಿಮೆ ಟಿವಿಆರ್ ಪಡೆದುಕೊಂಡಿದೆ.

ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಈ ಮೂವರು ಒಟ್ಟಾಗಿ ಧಾರಾವಾಹಿ ಮಾಡುತ್ತಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಮೂಡೋದು ಸಹಜ. ನಿರೀಕ್ಷೆಗೆ ತಕ್ಕಂತೆ ಧಾರಾವಾಹಿ ಮೂಡಿ ಬಂದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಈ ಕಾರಣಕ್ಕೆ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂದಿನ ವಾರಗಳಲ್ಲಿ ಈ ಧಾರಾವಾಹಿ ಪ್ರೇಕ್ಷಕರನ್ನು ಇದೇ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿ ಕೂಡ ಜನರಿಂದ ಮೆಚ್ಚುಗೆ ಪಡೆದಿದ್ದು, ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಮುಂದಿನ ದಿನಗಳಲ್ಲಿ ನಂಬರ್ 1 ಸ್ಥಾನಕ್ಕೆ ‘ಲಕ್ಷ್ಮೀ ನಿವಾಸ’ ಹಾಗೂ ‘ಕರ್ಣ’ ಧಾರಾವಾಹಿ ಮಧ್ಯೆ ಕಾಂಪಿಟೇಷನ್ ಮೂಡಿದರೂ ಅಚ್ಚರಿ ಏನಿಲ್ಲ. ಮೂರನೇ ಸ್ಥಾನದಲ್ಲಿ ‘ಅಣ್ಣಯ’ ಧಾರಾವಾಹಿ ಇದೆ. ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಹಾಗೂ ಐದನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಇದೆ. ‘ಅಮೃತಧಾರೆ’ ಧಾರಾವಾಹಿ ಆರನೇ ಸ್ಥಾನದಲ್ಲಿ ಇದೆ. ಈ ಎಲ್ಲಾ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಅನ್ನೋದು ವಿಶೇಷ.

ಇದನ್ನೂ ಓದಿ
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?
Image
ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
Image
ಫೇಕ್ ಅಕೌಂಟ್ ಮಾಡಿದವರಿಗೆ ಸೂರ್ಯವಂಶ ಸ್ಟೈಲ್​ನಲ್ಲಿ ಎಸ್. ನಾರಾಯಣ್ ಕೌಂಟರ್
Image
ವಾರದ ಮಧ್ಯವೂ ‘ಸು ಫ್ರಮ್ ಸೋ’ ಅಬ್ಬರದ ಕಲೆಕ್ಷನ್; ಹಲವು ದಾಖಲೆಗಳು ಉಡೀಸ್

ಇದನ್ನೂ ಓದಿ: ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್​ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ

 ಕಲರ್ಸ್ ಸೀರಿಯಲ್ ರ್ಯಾಂಕಿಂಗ್

ಕಲರ್ಸ್ ಕನ್ನಡದ ಧಾರಾವಾಹಿಗಳ ರ್ಯಾಂಕಿಂಗ್ ಅಷ್ಟೇ ನೋಡೋದಾದರೆ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಮುದ್ದು ಸೊಸೆ’ ಇದೆ. ಮೂರನೇ ಸ್ಥಾನದಲ್ಲಿ ‘ಭಾರ್ಗವಿ ಎಲ್​ಎಲ್​ಬಿ’ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ