AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್​ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ

ಕರ್ಣ ಧಾರಾವಾಹಿಯು ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ ಮತ್ತು ಇತರರ ನಟನೆಯಿಂದ ಸತತ ಮೂರು ವಾರಗಳಿಂದ ಟಿಆರ್ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡಬಲ್ ಡಿಜಿಟ್ ಟಿಆರ್ಪಿ ಸಾಧನೆ ಮಾಡಿರುವ ಈ ಧಾರಾವಾಹಿ ಕನ್ನಡ ಪ್ರೇಕ್ಷಕರ ಮನಗೆದ್ದಿದೆ. ಲಕ್ಷ್ಮೀ ನಿವಾಸ, ಅಣ್ಣಯ್ಯ, ಶ್ರಾವಣಿ ಸುಬ್ರಮಣ್ಯ ಮುಂತಾದ ಧಾರಾವಾಹಿಗಳು ಸ್ಥಾನಗಳನ್ನು ಪಡೆದಿವೆ.

ಸತತ ಮೂರನೇ ವಾರ ಡಬಲ್ ಡಿಜಿಟ್ ಟಿಆರ್​ಪಿ, ನಂಬರ್ 1 ಸ್ಥಾನ ಪಡೆದ ‘ಕರ್ಣ’ ಧಾರಾವಾಹಿ
ಕರ್ಣ
ರಾಜೇಶ್ ದುಗ್ಗುಮನೆ
|

Updated on: Jul 26, 2025 | 2:56 PM

Share

ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ನಾಗಾಭರಣ ಹಾಗೂ ಮೊದಲಾದವರು ನಟಿಸಿರುವ ‘ಕರ್ಣ’  ಧಾರಾವಾಹಿ (Karna Serial) ಸತತ ಮೂರನೇ ವಾರ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂರುವಾರ ಈ ಧಾರಾವಾಹಿಗೆ ಡಬಲ್ ಡಿಜಿಟ್ ಟಿಆರ್​ಪಿ ಸಿಕ್ಕಿದೆ ಅನ್ನೋದು ವಿಶೇಷ. ಈ ಧಾರಾವಾಹಿಯನ್ನು ಕನ್ನಡ ಜನತೆ ಒಪ್ಪಿ ಮೆಚ್ಚಿದೆ. ಹೀಗಾಗಿ ಟಿಆರ್​ಪಿಯಲ್ಲಿ ಏರಿಕೆ ಕಂಡಿದೆ.

ಕರ್ಣ ಧಾರಾವಾಹಿ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಇನ್ನೂ ಊಹಿಸೋಕೆ ಆಗುತ್ತಿಲ್ಲ. ‘ಕರ್ಣ’ನ ಪಾತ್ರದಲ್ಲಿರೋ ಕಿರಣ್ ರಾಜ್ ವೈದ್ಯನಾದರೆ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ ವೈದ್ಯ ವಿದ್ಯಾರ್ಥಿನಿ ಪಾತ್ರದಲ್ಲಿದ್ದಾರೆ. ಇವರ ಮಧ್ಯೆ ಪ್ರೀತಿ ಮೂಡುತ್ತಿದೆ. ಆದರೆ, ಧಾರಾವಾಹಿಯಲ್ಲಿ ಕಿರಣ್ ರಾಜ್ ವಿವಾಹ ಆಗೋದು ನಮ್ರತಾ ಗೌಡನ್ನು ಎನ್ನುವ ಊಹೆ ಪ್ರೇಕ್ಷಕರದ್ದು. ಸದ್ಯ ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದೆ.

ಸತತ ಮೂರು ವಾರಗಳಿಂದ ಈ ಧಾರಾವಾಹಿ 10+ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಜನರು ಧಾರಾವಾಹಿಗೆ ಎಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ರೇಟಿಂಗ್ ಪಡೆಯೋ ಸಾಧ್ಯತೆ ಇದೆ.  ‘ಲಕ್ಷ್ಮೀ ನಿವಾಸ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಕನ್ನಡಿಗರ ಮೆಚ್ಚುಗೆ ಪಡೆದಿದೆ. ಈ ಮೊದಲು ಅನೇಕ ಬಾರಿ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ
Image
ಕಡಿಮೆ ಶೋ ಕೊಟ್ಟರೂ ಸು ಫ್ರಮ್ ಸೋ ಆರ್ಭಟದ ಕಲೆಕ್ಷನ್; ಬಾಕ್ಸ್ ಆಫೀಸ್ ಉಡೀಸ್
Image
ಹರಿ ಹರ ವೀರ ಮಲ್ಲು ಕಲೆಕ್ಷನ್; ಮೊದಲ ದಿನ ಭರ್ಜರಿ ಎರಡನೇ ದಿನ ಒಂದಂಕಿ ಗಳಿಕೆ
Image
Su from So Review: ನಗುವಿನ ಅಲೆಯಲ್ಲಿ ತೇಲಿಸೋ ಸುಲೋಚನಾ
Image
Exclusive: ಅಳಿಯ ಚಂದು ಚಿತ್ರಕ್ಕೆ ವಿಲನ್ ಆದ ದರ್ಶನ್; ದಿನಕರ್ ನಿರ್ದೇಶನ

ಇದನ್ನೂ ಓದಿ: ಎರಡನೇ ವಾರವೂ ಎರಡಂಕಿ ಟಿಆರ್​ಪಿ ಪಡೆದ ‘ಕರ್ಣ’; ಟಾಪ್ ಐದು ಧಾರಾವಾಹಿಗಳಿವು

ಮೂರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೆಲವು ವಾರ ಮೊದಲ ಸ್ಥಾನ ಪಡೆದುಕೊಂಡ ಉದಾಹರಣೆ ಇದೆ. ಇದರಲ್ಲಿ ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್ ನಟಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’, ಐದನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಹಾಗೂ ಆರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.