ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ

ಜಾಗತಿಕ ರಾಜಕಾರಣದ ಚಿತ್ರದಲ್ಲಿ ಕಿಡಿ ಹಚ್ಚಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌‌ ಪುಟಿನ್(Vladimir Putin) ಅವರಿಗೆ ಈಗ ಹೊಸ ದುಸ್ವಪ್ನ ಎದುರಾಗಿದೆ.

ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ
ವ್ಲಾಡಿಮಿರ್ ಪುಟಿನ್
Follow us
|

Updated on: Apr 05, 2023 | 12:45 PM

ಜಾಗತಿಕ ರಾಜಕಾರಣದ ಚಿತ್ರದಲ್ಲಿ ಕಿಡಿ ಹಚ್ಚಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌‌ ಪುಟಿನ್(Vladimir Putin) ಅವರಿಗೆ ಈಗ ಹೊಸ ದುಃಸ್ವಪ್ನ ಎದುರಾಗಿದೆ. ಫಿನ್‌ಲ್ಯಾಂಡ್ ಅಧಿಕೃತವಾಗಿ ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಈ ಮೂಲಕ ರಷ್ಯಾದೊಡನೆ ಸುದೀರ್ಘ ಗಡಿ ಹಂಚಿಕೊಳ್ಳುವ ಶಕ್ತಿಶಾಲಿ ರಾಷ್ಟ್ರವೊಂದು ನ್ಯಾಟೋ ತೆಕ್ಕೆಗೆ ಬಿದ್ದಂತಾಗಿದೆ. ಪುಟಿನ್ ನ್ಯಾಟೋವನ್ನು ತನ್ನ ಪ್ರದೇಶದಿಂದ ಹಿಂದೆ ತಳ್ಳುವ ಉದ್ದೇಶದಿಂದ ಉಕ್ರೇನ್ ಮೇಲೆ ದಾಳಿ ನಡೆಸಿದ್ದರು. ಆದರೆ ಈಗ ಫಿನ್ಲ್ಯಾಂಡ್ ನ್ಯಾಟೋಗೆ ಸೇರ್ಪಡೆಯಾಗಿರುವುದು ರಷ್ಯಾದ ಉದ್ದೇಶಕ್ಕೆ ವಿರುದ್ಧವಾದ ಫಲ ನೀಡಿದಂತಾಗಿದೆ.

ಮಂಗಳವಾರ, ಎಪ್ರಿಲ್ 4ರಂದು ನ್ಯಾಟೋದ ಹೊಸ ಸದಸ್ಯನಾಗಿ ಫಿನ್‌ಲ್ಯಾಂಡ್ ಅಧಿಕೃತವಾಗಿ ಸೇರ್ಪಡೆಯಾಯಿತು. ಇದರ ಸಲುವಾಗಿ, ಮಂಗಳವಾರ ಅಪರಾಹ್ನ ಒಂದು ಸಮಾರಂಭ ಮತ್ತು ದಾಖಲಾತಿಗಳ ಬದಲಾವಣೆ ನಡೆದು, ಅಧಿಕೃತ ಒಪ್ಪಂದ ನೆರವೇರಿತು.

ಫಿನ್‌ಲ್ಯಾಂಡ್ ಪಾಶ್ಚಾತ್ಯ ಮಿಲಿಟರಿ ಒಕ್ಕೂಟಗಳೊಡನೆ ಕೈ ಜೋಡಿಸುವುದನ್ನು ರಷ್ಯಾ ಬಲವಾಗಿ ವಿರೋಧಿಸುತ್ತಾ ಬಂದಿತ್ತು. ರಷ್ಯಾ ನ್ಯಾಟೋ ಒಕ್ಕೂಟವನ್ನು ತನ್ನ ಅತಿದೊಡ್ಡ ಶತ್ರು ಎಂದೇ ನಂಬಿಕೊಂಡಿದೆ. ಆದರೆ, ಹಲವಾರು ಕಾರಣಗಳಿಂದ, ಫಿನ್‌ಲ್ಯಾಂಡ್ ನ್ಯಾಟೋಗೆ ಸೇರ್ಪಡೆಯಾಗಿರುವುದು ರಷ್ಯಾದ ಕ್ರಮಗಳ ನೇರ ಪರಿಣಾಮವೇ ಆಗಿದೆ.

ಮತ್ತಷ್ಟು ಓದಿ: Russia Ukraine War: ಪೊಲೆಂಡ್​ ಮೇಲೆ ಕ್ಷಿಪಣಿ ದಾಳಿ; ಆಕಸ್ಮಿಕ ಎಂದ ನ್ಯಾಟೊ, ರಷ್ಯಾ ಕಾರಣ ಎಂದ ಉಕ್ರೇನ್, ನಿಟ್ಟುಸಿರು ಬಿಟ್ಟ ಜಗತ್ತು

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2022ರ ಫೆಬ್ರವರಿಯಲ್ಲಿ ನಡೆದ ಉಕ್ರೇನ್ ಮೇಲಿನ ದಾಳಿಯನ್ನು ಸಮರ್ಥಿಸುತ್ತಾ, ನ್ಯಾಟೋ ಒಕ್ಕೂಟ ದೊಡ್ಡಾಗುವುದನ್ನು, ರಷ್ಯಾದ ಗಡಿಗಳಿಗೆ ಹತ್ತಿರಾಗುವುದನ್ನು ತಡೆಯಲು ಇದು ಅನಿವಾರ್ಯವಾಗಿತ್ತು ಎಂದಿದ್ದರು.

ಆದರೆ ರಷ್ಯಾದ ಈ ಕ್ರಮಗಳ ಪರಿಣಾಮವಾಗಿ, ದೀರ್ಘಕಾಲ ತಟಸ್ಥವಾಗಿ ಉಳಿದಿದ್ದ ಫಿನ್ಲ್ಯಾಂಡ್ ಮತ್ತು ನೆರೆಯ ರಾಷ್ಟ್ರ ಸ್ವೀಡನ್‌ಗಳು ತಮ್ಮ ತಟಸ್ಥ ನೀತಿಯನ್ನು ದೂರ ಮಾಡುವಂತೆ ಮಾಡಿತು.

ಎರಡೂ ರಾಷ್ಟ್ರಗಳಲ್ಲೂ ನಾಗರಿಕರು ನ್ಯಾಟೊ ಸದಸ್ಯತ್ವ ಪಡೆದುಕೊಳ್ಳಲು ಆಗ್ರಹಿಸಿದರು. ಎರಡೂ ರಾಷ್ಟ್ರಗಳೂ ಮೇ 2022ರಲ್ಲಿ ನ್ಯಾಟೋ ಸದಸ್ಯತ್ವವನ್ನು ಕೋರಿದವು.

ಇದೊಂದು ಐತಿಹಾಸಿಕ ಬದಲಾವಣೆಯಾಗಿದ್ದು, ಸೋವಿಯತ್ ಒಕ್ಕೂಟದ ಪತನಾನಂತರ ನ್ಯಾಟೋದ ಸಹಯೋಗಿಗಳಾಗಿದ್ದರೂ, ಈ ಎರಡೂ ರಾಷ್ಟ್ರಗಳು ತಟಸ್ಥವಾಗಿಯೇ ಉಳಿದಿದ್ದವು.

ಫಿನ್ಲ್ಯಾಂಡ್ ಮಾಜಿ ಪ್ರಧಾನಿ ಅಲೆಕ್ಸಾಂಡರ್ ಸ್ಟಬ್ಬ್ ಅವರು ತನ್ನ ರಾಷ್ಟ್ರ ನ್ಯಾಟೋ ಸದಸ್ಯತ್ವ ಪಡೆಯಬೇಕೆಂದು ಮೊದಲಿನಿಂದಲೇ ಆಗ್ರಹಿಸಿದ್ದರು. ಫಿನ್ಲ್ಯಾಂಡ್ ನ್ಯಾಟೋ ಸದಸ್ಯತ್ವಕ್ಕೆ ಆಗ್ರಹಿಸಿದ ಕುರಿತು ಪ್ರತಿಕ್ರಿಯಿಸುತ್ತಾ, ಸ್ಟಬ್ಬ್ ಅವರು  ವಿಚಾರದಲ್ಲಿ ಪುಟಿನ್ ಅವರೇ ಜವಾಬ್ದಾರರಷ್ಟೇ. ಫಿನ್ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆಯುವಂತಾಗಿದ್ದಕ್ಕೆ ನಾನು ಪುಟಿನ್ ಅವರಿಗೆ ಆಭಾರಿಯಾಗಿದ್ದೇನೆ! ಎಂದಿದ್ದರು.

ಫಿನ್ಲ್ಯಾಂಡ್ ಈಗ ನ್ಯಾಟೋ ಸದಸ್ಯನಾಗಿರುವುದರಿಂದ, ಈ ಒಕ್ಕೂಟ ಈಗ ರಷ್ಯಾಗೆ ಇನ್ನಷ್ಟು ಸಮೀಪಿಸಿದೆ.

ಫಿನ್ಲ್ಯಾಂಡ್ ಮತ್ತು ರಷ್ಯಾಗಳು 800 ಮೈಲಿಗೂ ಹೆಚ್ಚಿನ ದೀರ್ಘ ಗಡಿಯನ್ನು ಹಂಚಿಕೊಳ್ಳುತ್ತವೆ. ಈಗ ಫಿನ್ಲ್ಯಾಂಡ್ ನ್ಯಾಟೋ ಸದಸ್ಯನಾದ ಬಳಿಕ, ರಷ್ಯಾ ಮತ್ತು ನ್ಯಾಟೋ ರಾಷ್ಟ್ರಗಳ ಗಡಿ 750 ಮೈಲಿಯಿಂದ 1,600 ಮೈಲಿಗಳಿಗೆ ಹೆಚ್ಚಾಗಲಿದೆ. ಫಿನ್ಲ್ಯಾಂಡ್ ನ್ಯಾಟೋ ಸದಸ್ಯತ್ವ ಪಡೆದಿರುವುದನ್ನು ಅದರ ನೆರೆಯ ರಾಷ್ಟ್ರಗಳು ಸ್ವಾಗತಿಸಿವೆ.

ಎಸ್ಟೋನಿಯಾದ ಅಧ್ಯಕ್ಷರು ಫಿನ್ಲ್ಯಾಂಡ್ ನ್ಯಾಟೋ ಸದಸ್ಯನಾಗುವುದು ಬಾಲ್ಟಿಕ್ ಸಮುದ್ರ ಪ್ರಾಂತ್ಯದ ಸುರಕ್ಷತೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.

ಆದರೆ ರಷ್ಯಾ ಈ ಕ್ರಮ ರಷ್ಯಾ – ಫಿನ್ಲ್ಯಾಂಡ್ ಗಡಿಯಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಲು ಪೂರಕವಾಗಿದೆ ಎಂದಿದೆ. ರಷ್ಯಾದ ಉಪ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಗ್ರುಶ್ಕೋ ಅವರು ರಷ್ಯಾದ ಮಾಧ್ಯಮಗಳೊಡನೆ ಮಾತನಾಡುತ್ತಾ, “ಇದರ ಪರಿಣಾಮವಾಗಿ ರಷ್ಯಾದ ದಕ್ಷಿಣ ಮತ್ತು ವಾಯುವ್ಯ ದಿಕ್ಕಿನಲ್ಲಿ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಲಿದೆ” ಎಂದಿದ್ದಾರೆ.

ಒಂದು ವೇಳೆ ಇತರ ನ್ಯಾಟೋ ರಾಷ್ಟ್ರಗಳು ತಮ್ಮ ಆಯುಧಗಳನ್ನು ಫಿನ್ಲ್ಯಾಂಡ್ ನಲ್ಲಿ ಇಡುವ ಯೋಜನೆ ಕೈಗೊಂಡರೆ, ಆಗ ರಷ್ಯಾದ ಮಿಲಿಟರಿ ಭದ್ರತೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕಳೆದ ವರ್ಷ ಫಿನ್ಲ್ಯಾಂಡ್ ಮತ್ತು ಸ್ವೀಡನ್‌ಗಳಿಗೆ ರಷ್ಯಾ ಎಚ್ಚರಿಕೆ ರವಾನಿಸಿ, ಅವುಗಳೇನಾದರೂ ನ್ಯಾಟೋ ಮಿಲಿಟರಿ ಒಕ್ಕೂಟಕ್ಕೆ ಸೇರ್ಪಡೆಯಾದರೆ ಪರಿಣಾಮ ಎದುರಿಸಬೇಕಾದೀತು ಎಂದಿತ್ತು.

ಸ್ವೀಡನ್ನಿನ ರಷ್ಯಾದ ರಾಯಭಾರಿ ಕಳೆದ ತಿಂಗಳು ಈ ಕುರಿತು ಪ್ರತಿಕ್ರಿಯೆ ನೀಡಿ, ಸ್ವೀಡನ್ ಮತ್ತು ಫಿನ್ಲ್ಯಾಂಡ್ ರಾಷ್ಟ್ರಗಳು ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಬಳಿಕ ಕಾನೂನುಬದ್ಧ ಗುರಿಗಳಾಗಿವೆ ಎಂದರು.

ನ್ಯಾಟೋ ಸದಸ್ಯ ರಾಷ್ಟ್ರವಾದ ಟರ್ಕಿ ಫಿನ್ಲ್ಯಾಂಡ್ ನ್ಯಾಟೋಗೆ ಸೇರ್ಪಡೆಯಾಗುವುದನ್ನು ವಿರೋಧಿಸಿದ ಪರಿಣಾಮವಾಗಿ ಈ ಸೇರ್ಪಡೆ ತಡವಾಗಿತ್ತು. ತಾನು ಉಗ್ರ ಸಂಘಟನೆಗಳು ಎಂದು ಪರಿಗಣಿಸುವ ಗುಂಪುಗಳನ್ನು ಫಿನ್ಲ್ಯಾಂಡ್ ಮತ್ತು ಸ್ವೀಡನ್ ಬೆಂಬಲಿಸುತ್ತಿವೆ ಎಂದು ಟರ್ಕಿ ಆರೋಪಿಸಿತ್ತು.

ಆದರೆ ಕಳೆದ ತಿಂಗಳು ಫಿನ್ಲ್ಯಾಂಡ್ ಈ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ಅಧ್ಯಕ್ಷರು ಹೇಳಿಕೆ ನೀಡಿದ್ದರು. ಇದರ ಬಳಿಕ ಟರ್ಕಿ ಸಂಸತ್ತು ಫಿನ್ಲ್ಯಾಂಡ್ ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾಗಲು ಅನುಮತಿ ನೀಡಿತು. ಆದರೆ ಟರ್ಕಿ ಇನ್ನೂ ಸ್ವೀಡನ್ನಿನ ಸೇರ್ಪಡೆಗೆ ತನ್ನ ಅನುಮೋದನೆ ನೀಡಿಲ್ಲ.

ಲೇಖನ: ಗಿರೀಶ್​ ಲಿಂಗಣ್ಣ- ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ