Sign In

By signing in or creating an account, you agree with Associated Broadcasting Company's Terms & Conditions and Privacy Policy.

LCA Trainer: ಎಲ್‌ಸಿಎ ತೇಜಸ್ ಯೋಜನೆಗೆ ಬಹುದೊಡ್ಡ ಉತ್ತೇಜನ: ಆಗಸಕ್ಕೇರಿದ ಮೊದಲ ಉತ್ಪಾದನಾ ಸರಣಿಯ ಎಲ್‌ಸಿಎ ಟ್ರೈನರ್

India's first series standard LCA Trainer: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಾಣದ, ಭಾರತದ ಮೊತ್ತ ಮೊದಲ ಸರಣಿಯ ಎಲ್‌ಸಿಎ ಟ್ರೈನರ್ (ಎಲ್‌ಟಿ 5201) ತನ್ನ ಮೊದಲ ಹಾರಾಟವನ್ನು ಎಪ್ರಿಲ್ 5, 2023ರಂದು ಎಚ್ಎಎಲ್ ವಿಮಾನ ನಿಲ್ದಾಣದಿಂದ ನೆರವೇರಿಸಿತು. ಈ ಬಗ್ಗೆ ರಕ್ಷಣಾ ವಲಯದ ವಿಶ್ಲೇಷಕ ಗಿರೀಶ್ ಲಿಂಗಣ್ಣ ಬರೆದ ಲೇಖನ ಇಲ್ಲಿದೆ.

LCA Trainer: ಎಲ್‌ಸಿಎ ತೇಜಸ್ ಯೋಜನೆಗೆ ಬಹುದೊಡ್ಡ ಉತ್ತೇಜನ: ಆಗಸಕ್ಕೇರಿದ ಮೊದಲ ಉತ್ಪಾದನಾ ಸರಣಿಯ ಎಲ್‌ಸಿಎ ಟ್ರೈನರ್
ಎಲ್‌ಸಿಎ ತೇಜಸ್ ಟ್ರೈನರ್ ವಿಮಾನ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Apr 06, 2023 | 10:31 AM

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಾಣದ, ಭಾರತದ ಮೊತ್ತ ಮೊದಲ ಸರಣಿಯ ಎಲ್‌ಸಿಎ ಟ್ರೈನರ್ (ಎಲ್‌ಟಿ 5201) ತನ್ನ ಮೊದಲ ಹಾರಾಟವನ್ನು ಎಪ್ರಿಲ್ 5, 2023ರಂದು ಎಚ್ಎಎಲ್ ವಿಮಾನ ನಿಲ್ದಾಣದಿಂದ ನೆರವೇರಿಸಿತು. ಈ ಮೂಲಕ ಭಾರತ ತನ್ನ ರಕ್ಷಣಾ ವಲಯದಲ್ಲಿ ಒಂದು ಬೃಹತ್ ಮೈಲಿಗಲ್ಲು ನಿರ್ಮಿಸಿತು. ಈ ವಿಮಾನ 35 ನಿಮಿಷಗಳ ಸಾರ್ಟೀಯನ್ನು (Sortie) ಪೂರ್ಣಗೊಳಿಸಿ, ದೇಶಕ್ಕಾಗಿ ನೂತನ ದಾಖಲೆ ನಿರ್ಮಿಸಿತು. ಇಲ್ಲಿ ಸಾರ್ಟೀ ನಡೆಸುವುದೆಂದರೆ ರಕ್ಷಣಾ ಹಂತದಿಂದ ಆಕ್ರಮಣ ನಡೆಸುವುದು. ಎಲ್‌ಸಿಎ ಯಶಸ್ವಿ ಹಾರಾಟ ಭಾರತದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಸಾಧನೆಗೆ ಇನ್ನಷ್ಟು ಉತ್ತೇಜನ ನೀಡಿದೆ. ಈ ಸಾಧನೆ ಎಚ್ಎಎಲ್ ಎಲ್‌ಸಿಎ ತೇಜಸ್ (HAL’s LCA Tejas Aircraft) ತಂಡದ ಅವಿರತ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಎಲ್‌ಸಿಎ ತೇಜಸ್ ಟ್ರೈನರ್: ಒಂದು ನೋಟ

ಎಲ್‌ಸಿಎ ತೇಜಸ್ ಯೋಜನೆಯನ್ನು ಹಳೆಯದಾಗುತ್ತಿದ್ದ ಭಾರತದ ಮಿಗ್-21 ಯುದ್ಧ ವಿಮಾನಗಳ ಬದಲಿಗೆ 1980ರ ದಶಕದಲ್ಲಿ ಆರಂಭಿಸಲಾಯಿತು. ಆದರೆ ಬಳಿಕ ಇದು ಸಾಮಾನ್ಯ ವಿಮಾನ ಪಡೆಯ ಆಧುನೀಕರಣದ ಭಾಗವಾಯಿತು. ಎಚ್ಎಎಲ್ ತೇಜಸ್ ಒಂದು ಒಂಟಿ ಇಂಜಿನ್, ಡೆಲ್ಟಾ ವಿಂಗ್, ಹಗುರ ಬಹುಪಾತ್ರಗಳ ವಿಮಾನವಾಗಿದ್ದು, ಇದನ್ನು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಭಾರತೀಯ ವಾಯುಸೇನೆ ಮತ್ತು ನೌಕಾಪಡೆಗಾಗಿ ಎಚ್ಎಎಲ್‌ನ ಏರ್‌ಕ್ರಾಫ್ಟ್ ರಿಸರ್ಚ್ ಆ್ಯಂಡ್ ಡಿಸೈನ್ ಸೆಂಟರ್ (ಎಆರ್‌ಡಿಸಿ) ಸಹಯೋಗದೊಂದಿಗೆ ವಿನ್ಯಾಸಗೊಳಿಸಿದೆ.

ಎಲ್‌ಸಿಎ ತೇಜಸ್ ಟ್ರೈನರ್ ಭಾರತೀಯ ವಾಯುಪಡೆಯ ಅವಳಿ ಆಸನಗಳ ಟ್ರೈನರ್ ಏರ್‌ಕ್ರಾಫ್ಟ್ ಆಗಿದ್ದು, ತೇಜಸ್ ಮಾರ್ಕ್ 1 ಹಾಗೂ ಮಾರ್ಕ್ 1ಎ ಯುದ್ಧ ವಿಮಾನಗಳು ಸೇರಿದಂತೆ ಮೂರು ಎಚ್ಎಎಲ್ ತೇಜಸ್ ಉತ್ಪಾದನಾ ಮಾದರಿಗಳಲ್ಲಿ ಒಂದಾಗಿದೆ. ವಿಮಾನ 13.2 ಮೀಟರ್ ಉದ್ದವಿದ್ದು, 8.2 ಮೀಟರ್ ಅಗಲ ಹಾಗೂ 4.4 ಮೀಟರ್ ಎತ್ತರವಿದೆ. ಇದರ ಗರಿಷ್ಠ ಹಾರಾಟ ತೂಕ 13,500 ಕೆಜಿಯಾಗಿದ್ಸು, 85ಕೆಎನ್ ಥ್ರಸ್ಟ್‌ನ ಜಿಇ ಎಫ್404-ಐಎನ್20 ಇಂಜಿನ್ ಹೊಂದಿದೆ.

ಇದನ್ನೂ ಓದಿ: ಇಸ್ರೋದ ಆರ್‌ಎಲ್‌ವಿ-ಟಿಡಿ ಕಾರ್ಯಾಚರಣೆ: ಭವಿಷ್ಯದ ಬಾಹ್ಯಾಕಾಶ ಪ್ರವಾಸಕ್ಕೆ ಮುನ್ನುಡಿಯೇ?

ವಿಮಾನ ಗರಿಷ್ಠ 1.6 ಮ್ಯಾಕ್ ವೇಗ ಹೊಂದಿದ್ದು, 50,000 ಅಡಿಗಳಷ್ಟು ಎತ್ತರದಲ್ಲಿ ಹಾರಾಡಬಲ್ಲದು. ಇದರಲ್ಲಿ ಆಯುಧ ಅಳವಡಿಕೆಗೆ 9 ಹಾರ್ಡ್ ಪಾಯಿಂಟ್‌ಗಳಿವೆ. ತೇಜಸ್ ಮಾರ್ಕ್ 1ಎ ವಿಮಾನ ತೇಜಸ್ ಮಾರ್ಕ್ 1ರ ಅಭಿವೃದ್ಧಿ ಹೊಂದಿದ ಮಾದರಿಯಾಗಿದ್ದು, ಇಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್, ಅಡ್ವಾನ್ಸ್ಡ್ ಇಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್ಎ) ರೇಡಾರ್, ಬಿಯಾಂಡ್ ವಿಶುವಲ್ ರೇಂಜ್ (ಬಿವಿಆರ್) ಕ್ಷಿಪಣಿಗಳು, ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೋ (ಎಸ್‌ಡಿಆರ್) ಹೊಂದಿರುವ ನೆಟ್‌ವರ್ಕ್ ವಾರ್‌ಫೇರ್ ಸಿಸ್ಟಮ್ ಹೊಂದಿದೆ.

ಭಾರತ ಕಳೆದ ಹಲವು ವರ್ಷಗಳಿಂದ ತನ್ನ ಯುದ್ಧ ವಿಮಾನಗಳ ಪಡೆಯನ್ನು ಆಧುನೀಕರಿಸಲು ಪ್ರಯತ್ನಿಸುತ್ತಿದ್ದು, ಎಲ್‌ಸಿಎ ತೇಜಸ್ ಟ್ರೈನರ್ ಅದರ ಪ್ರಮುಖ ಭಾಗವಾಗಿದೆ. ಎಲ್‌ಟಿ 5201 ವಿಮಾನದ ಮೊದಲ ಸಾರ್ಟಿ ಯಶಸ್ವಿಯಾಗಿದ್ದು ಯೋಜನೆಯಲ್ಲಿ ಒಂದು ಮಹತ್ವದ ಘಟ್ಟವಾಗಿದೆ. ಇದರೊಂದಿಗೆ ಎಲ್‌ಸಿಎ ತೇಜಸ್ ಟ್ರೈನರ್ ಸರಣಿಯ ಉತ್ಪಾದನೆಯೂ ಆರಂಭಗೊಂಡಿದೆ.

ಎಲ್‌ಸಿಎ ಟ್ರೈನರ್ ವಿಮಾನವನ್ನು ಭಾರತೀಯ ವಾಯುಪಡೆಯ ಪೈಲಟ್‌ಗಳನ್ನು ತರಬೇತಿಗೊಳಿಸಲು ಬಳಸಿಕೊಂಡು, ಆ ಮೂಲಕ ದೇಶೀಯ ವೈಮಾನಿಕ ಉದ್ಯಮದ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಎಲ್‌ಸಿಎ ತೇಜಸ್ ಟ್ರೈನರ್ ಭಾರತೀಯ ಪೈಲಟ್‌ಗಳಿಗೆ ಆಧುನಿಕ ಯುದ್ಧ ವಿಮಾನಗಳನ್ನು ಚಲಾಯಿಸಲು ಅಗತ್ಯವಿರುವ ಅನುಭವ ಹಾಗೂ ಕೌಶಲ್ಯಗಳನ್ನು ಒದಗಿಸಲಿದೆ.

ಎಲ್‌ಟಿ 5201ರ ಮೊದಲ ಹಾರಾಟ ಪರೀಕ್ಷೆಯನ್ನು ಎಚ್ಎಎಲ್‌ನ ಅನುಭವಿ ಟೆಸ್ಟ್ ಪೈಲಟ್‌ಗಳಾದ ಗ್ರೂಪ್ ಕ್ಯಾಪ್ಟನ್ (ನಿವೃತ್ತ) ವೇಣು ಹಾಗೂ ವಿಂಗ್ ಕಮಾಂಡರ್ (ನಿವೃತ್ತ) ಅವಸ್ಥಿ ಅವರು ನಡೆಸಿದರು. ಈ ಯೋಜನೆಯ ಯಶಸ್ಸಿನಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ), ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶೂರೆನ್ಸ್ (ಡಿಜಿಎಕ್ಯುಎ), ಸೆಂಟರ್ ಫಾರ್ ಮಿಲಿಟರಿ ಏರ್ ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಶನ್ (ಸಿಇಎಂಐಎಲ್ಎಸಿ) ಹಾಗೂ ಇತರ ಸಂಸ್ಥೆಗಳು ಪಾತ್ರ ವಹಿಸಿದ್ದವು.

ಇದನ್ನೂ ಓದಿ: ಅಪಾಯದಲ್ಲಿದೆ ಡಾಲರ್ ಭವಿಷ್ಯ: ನಮಗೆ ತಿಳಿದಿರಬೇಕಾದ ಅಂಶಗಳು

ಎಲ್‌ಸಿಎ ತೇಜಸ್ ಟ್ರೈನರ್ ವಿಮಾನದ ಬೆಲೆ ಅಂದಾಜು 280 ಕೋಟಿಯಾಗಿದ್ದು, ಇದು ಅತ್ಯಂತ ಕಡಿಮೆ ಬೆಲೆಯ 4.5ನೇ ತಲೆಮಾರಿನ ಯುದ್ಧ ವಿಧಾನವಾಗಿದೆ. ಎಚ್ಎಎಲ್ ಈಗಾಗಲೇ ಎಂಟು ಎಲ್‌ಸಿಎ ಟ್ರೈನರ್ ವಿಮಾನಗಳ ಖರೀದಿ ಆದೇಶ ಪಡೆದುಕೊಂಡಿದ್ದು, ಅವುಗಳನ್ನು ಕ್ಷಿಪ್ರವಾಗಿ ಪೂರೈಸಲಿದೆ. ಟ್ರೈನರ್ ವಿಮಾನದ ಸ್ಪರ್ಧಾತ್ಮಕ ಬೆಲೆಯ ಕಾರಣದಿಂದ ಹಲವು ದೇಶಗಳು ಇದರ ಖರೀದಿಗೆ ಆಸಕ್ತಿ ತೋರಿಸಿವೆ. ಇದು ಭಾರತದ ರಕ್ಷಣಾ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡಲಿದೆ.

ಎಚ್ಎಎಲ್ ಎಲ್‌ಸಿಎ ತಂಡದ ಈ ಸಾಧನೆ ಎಚ್ಎಎಲ್ ನಿರ್ಮಾಣದ ಇತರ ತರಬೇತಿ ವಿಮಾನಗಳಾದ ಹಿಂದೂಸ್ತಾನ್ ಟರ್ಬೋ ಟ್ರೈನರ್ 40 (ಎಚ್‌ಟಿಟಿ – 40) ಇತ್ಯಾದಿಗಳಿಗೆ ಪ್ರಚೋದನೆ ನೀಡಲಿದೆ.

ಎಲ್​ಸಿಎ ತೇಜಸ್ ಟ್ರೈನರ್: ದೇಶೀಯ ಸಾಮರ್ಥ್ಯದ ಅಭಿವೃದ್ಧಿ

ಎಲ್‌ಸಿಎ ತೇಜಸ್ ಟ್ರೈನರ್ ಸರಣಿಯ ಉತ್ಪಾದನೆ ವೈಮಾನಿಕ ಉದ್ಯಮದಲ್ಲಿ ದೇಶೀಯ ನಿರ್ಮಾಣ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ನೆರವಾಗಲಿದ್ದು, ಭಾರತೀಯ ಪೈಲಟ್‌ಗಳಿಗೆ ಯುದ್ಧ ವಿಮಾನಗಳನ್ನು ಇನ್ನಷ್ಟು ಸಮರ್ಥವಾಗಿ, ಸುರಕ್ಷಿತವಾಗಿ ಚಲಾಯಿಸಲು ಅಗತ್ಯ ಅನುಭವ ಒದಗಿಸಲಿದೆ.

ಎಲ್‌ಸಿಎ ತೇಜಸ್ ಟ್ರೈನರ್ ಭಾರತದ ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಮುಖ ಭಾಗವಾಗಿದ್ದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿ, ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿದೆ. ಎಲ್‌ಸಿಎ ತೇಜಸ್ ಟ್ರೈನರ್ ವಿಮಾನದಲ್ಲಿ 55%ಕ್ಕೂ ಹೆಚ್ಚು ದೇಶೀಯ ನಿರ್ಮಾಣವನ್ನು ಸಾಧಿಸಲಾಗಿದೆ.

ಇದನ್ನೂ ಓದಿ: ನ್ಯಾಟೋ ಒಕ್ಕೂಟಕ್ಕೆ ಸೇರ್ಪಡೆಯಾದ ಫಿನ್‌ಲ್ಯಾಂಡ್: ಕಿಡಿ ಹಚ್ಚಿದ ಪುಟಿನ್‌ಗೆ ಜಾಗತಿಕ ರಾಜಕಾರಣದಲ್ಲಿ ಹೊಸ ದುಃಸ್ವಪ್ನ

ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿರುವುದರಿಂದ ಭಾರತೀಯ ವಾಯುಪಡೆಗೆ ಎಲ್‌ಸಿಎ ತೇಜಸ್ ಟ್ರೈನರ್ ವಿಮಾನದ ಮೇಲೆ ಹೆಚ್ಚಿನ ವಿಶ್ವಾಸ ಮೂಡಿದ್ದು, ಈ ವಿಮಾನ ಭಾರತದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಆಧುನಿಕ ಆಯುಧಗಳು ಸೇರಿದಂತೆ, ಈ ವಿಮಾನದ ಆಧುನಿಕ ವೈಶಿಷ್ಟ್ಯಗಳು ಭಾರತೀಯ ವಾಯುಪಡೆಗೆ ಗಾಳಿಯಿಂದ ಗಾಳಿ ಮತ್ತು ಗಾಳಿಯಿಂದ ಭೂಮಿಯ ಮೇಲಿನ ಕಾರ್ಯಾಚರಣೆಗಳಿಗೆ ಹೆಚ್ಚಿನ ಸಾಮರ್ಥ್ಯ ಒದಗಿಸಲಿವೆ.

ಎಲ್‌ಸಿಎ ಟ್ರೈನರ್ ವಿಮಾನದ ಮೊದಲ ನಿರ್ಮಾಣ ಮಾದರಿ ತನ್ನ ಮೊದಲ ಸಾರ್ಟಿಯನ್ನು ಯಶಸ್ವಿಯಾಗಿ ಪೂರೈಸಿರುವುದು ಭಾರತಕ್ಕೆ, ದೇಶದ ವೈಮಾನಿಕ ಉದ್ಯಮಕ್ಕೆ, ಹಾಗೂ ಎಲ್‌ಸಿಎ ತೇಜಸ್ ಯೋಜನೆಗೆ ಮಹತ್ವದ ಮೈಲಿಗಲ್ಲಾಗಿದೆ. ಇದು ವೈಮಾನಿಕ ಉದ್ಯಮದಲ್ಲಿ ದೇಶೀಯ ನಿರ್ಮಾಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಈ ಯೋಜನೆಯ ಯಶಸ್ಸಿಗಾಗಿ ಕಾರ್ಯ ನಿರ್ವಹಿಸಿದ ಭಾರತೀಯ ಇಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

ಎಲ್‌ಸಿಎ ತೇಜಸ್ ಟ್ರೈನರ್ ವಿಮಾನದ ಮೊದಲ ಯಶಸ್ವಿ ಹಾರಾಟ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಮತ್ತು ಮತ್ತು ರಕ್ಷಣಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಭಾರತದ ಪ್ರಯತ್ನಕ್ಕೆ ಹೊಸ ಅಧ್ಯಾಯವಾಗಿ ಹೊರಹೊಮ್ಮಿದೆ.

Girish Linganna

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ರಾಜ್ಯ ನಾಯಕರೆಲ್ಲ ಬೆಳಗಾವಿಯಲ್ಲಿದ್ದರೂ ರಮೇಶ್ ಜಾರಕಿಹೊಳಿ ನಾಪತ್ತೆ!
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಜಿಲ್ಲೆಯ ಮುಖಂಡರನ್ನು ಮನೆಗೆ ಕರೆಸಿ ಮಾತಾಡಿದ ಮಾಜಿ ಸಚಿವ ಪಟ್ಟಣಶೆಟ್ಟಿ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ