ಮಾಜಿ ಸಚಿವ ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ನಿರಾಕರಿಸಿದ ದೆಹಲಿ ಹೈಕೋರ್ಟ್
ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನಿರಾಕರಿಸಿದೆ.

ದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಮೇ 30, 2022ರಿಂದ ಸೆರೆವಾಸದಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ (Satyendra Jain) ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನಿರಾಕರಿಸಿದೆ. ಇದರ ಜತೆಗೆ ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಜಾಮೀನು ನೀಡಲು ನಿರಾಕರಿಸಲಾಗಿದೆ. ಮೂವರು ಆರೋಪಿಗಳು ಪಿಎಂಎಲ್‌ಎ ಅಡಿಯಲ್ಲಿ ಜಾಮೀನಿಗೆ ಎರಡು ಷರತ್ತುಗಳನ್ನು ನೀಡಲಾಗಿತ್ತು, ಆದರೆ ಅದನ್ನು ಪಾಲಿಸದ ಕಾರಣ ಈ ಇಬ್ಬರ ಜಾಮೀನನ್ನು ನ್ಯಾಯಾಲಯ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿಚಾರಣಾ ನ್ಯಾಯಾಲಯವು ಕೂಡ ಸತ್ಯೇಂದ್ರ ಜೈನ್‌ಗೆ ಜಾಮೀನು ನಿರಾಕರಿಸಿತ್ತು. ಸತ್ಯೇಂದ್ರ ಜೈನ್ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಪಿಎಂಎಲ್‌ಎ ಅಡಿಯಲ್ಲಿ ಅವಳಿ ಷರತ್ತುಗಳನ್ನು ತೆರವುಗೊಳಿಸಿದ್ದಾರೆ ಎಂದು ಅವರು ಭಾವಿಸುವ ಅಗತ್ಯ ಇಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಹೇಳಿದ್ದಾರೆ. ಸತ್ಯೇಂದ್ರ ಜೈನ್‌ಗೆ ಸಂಬಂಧಿಸಿದ ಆರೋಪಿತ ಕಂಪನಿಗಳು ಅವರು ನಿಯಂತ್ರಣ ಮಾಡಬಹುದು ಎಂದು ಹೇಳಿದೆ.
ದೆಹಲಿಯ ಮದ್ಯದ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ ಹೊರತುಪಡಿಸಿ, ಎಎಪಿಯ ಸಿಸೋಡಿಯಾ ಕೂಡ ಬಂಧನದಲ್ಲಿರುವಾಗ ಈ ತೀರ್ಪು ಬಂದಿದೆ, ಇದು ಎಎಪಿ ಪಕ್ಷಕ್ಕೆ ದೊಡ್ಡ ಹೊಡೆತ ಎಂದು ಹೇಳಲಾಗಿದೆ. ಸಿಸೋಡಿಯಾ ಬಂಧನದ ನಂತರ, ಸತ್ಯೇಂದ್ರ ಜೈನ್ ಮತ್ತು ಸಿಸೋಡಿಯಾ ಇಬ್ಬರೂ ಅರವಿಂದ್ ಕೇಜ್ರಿವಾಲ್ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಇದನ್ನೂ ಓದಿ: ಅಮಾನತಿನಲ್ಲಿರುವ ಜೈಲು ಅಧೀಕ್ಷಕ, ಅತಿಥಿಗಳ ಜತೆ ಸತ್ಯೇಂದ್ರ ಜೈನ್ ಸಭೆ; ಮತ್ತೊಂದು ವಿಡಿಯೊ ಬಹಿರಂಗ
ಸತ್ಯೇಂದ್ರ ಜೈನ್ ಅವರಿಗೆ ನಿಕಟ ನಂಟು ಹೊಂದಿರುವ ನಾಲ್ಕು ಕಂಪನಿಗಳ ಮೂಲಕ ಹಣ ವಂಚನೆ ಮಾಡಿರುವ ಆರೋಪವಿದೆ. ಮಾರ್ಚ್ 21 ರಂದು, ಹೈಕೋರ್ಟ್ ಇಡಿ ಮತ್ತು ಸತ್ಯೇಂದ್ರ ಜೈನ್ ಅವರ ವಾದವನ್ನು ಆಲಿಸಿತು, ತೀರ್ಪನ್ನು ಏಪ್ರಿಲ್ 6 ಕ್ಕೆ ಕಾಯ್ದಿರಿಸಿತ್ತು. ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಅಕ್ರಮ ಅಥವಾ ದೌರ್ಬಲ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಬಿಜೆಪಿ ಈ ಆದೇಶವನ್ನು ಸ್ವಾಗತಿಸಿದ್ದು, ಕೇಜ್ರಿವಾಲ್ ಅವರ ‘ಭ್ರಷ್ಟಾಚಾರ ಪದವಿ’ ಮತ್ತೆ ಹೊರಬಿದ್ದಿದೆ ಎಂದು ಹೇಳಿದೆ. ಮತ್ತೊಮ್ಮೆ ದೆಹಲಿ ಹೈಕೋರ್ಟ್ ಈಗ ಸತ್ಯಂದರ್ ಜೈನ್‌ಗೆ ಜಾಮೀನು ನಿರಾಕರಿಸಿದೆ. ಅವರು ಕಳೆದ 10 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಇದು ಸೇಡು? ಮತ್ತು ಅವರನ್ನು ಕಟ್ಟರ್ ಇಮಾಂದಾರ್ ಎಂದು ಕರೆಯುವ ಮೂಲಕ ಅವರನ್ನು ಸಮರ್ಥಿಸಿಕೊಳ್ಳಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ.
Published On - 11:20 am, Thu, 6 April 23




