BJP Foundation Day: ಭ್ರಷ್ಟಾಚಾರ, ಪರಿವಾರವಾದದ ವಿರುದ್ಧ ಹೋರಾಡಲು ಬಿಜೆಪಿ ಎಂಥಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಸಿದ್ಧ: ಮೋದಿ
ಭ್ರಷ್ಟಾಚಾರ, ಪರಿವಾರವಾದದ ವಿರುದ್ಧ ಹೋರಾಡಲು ಎಂಥಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಬಿಜೆಪಿ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭ್ರಷ್ಟಾಚಾರ(Corruption), ಪರಿವಾರವಾದದ ವಿರುದ್ಧ ಹೋರಾಡಲು ಎಂಥಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೂ ಬಿಜೆಪಿ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬಿಜೆಪಿಯ 44ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಹನುಮ ಜಯಂತಿ. ಇಂದು ಬಜರಂಗ ಬಲಿಯ ಹೆಸರು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಹನುಮಂತ ಅಪಾರ ಶಕ್ತಿಯನ್ನು ಹೊಂದಿದ್ದಾನೆ. ಹನುಮಂತ ಹೇಗೆ ರಾಕ್ಷಸರನ್ನು ಎದುರಿಸುತ್ತಿದ್ದನೋ ಹಾಗೆಯೇ ಬಿಜೆಪಿ ಕೂಡ ಭ್ರಷ್ಟಾಚಾರ ಹಾಗೂ ಪರಿವಾದದ, ಕಾನೂನು ಸುವ್ಯವಸ್ಥೆ ಬಗ್ಗೆ ಸಂಕಲ್ಪ ಬದ್ಧವಾಗುತ್ತದೆ.
ಭಾರತ ಮಾತೆಯ ರಕ್ಷಣೆಗೆ ಬಿಜೆಪಿ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಭ್ರಷ್ಟಾಚಾರ ಮತ್ತು ಕೌಟುಂಬಿಕತೆಯ ವಿರುದ್ಧ ಹೋರಾಡಲು ಹನುಮಂತನಂತೆ ಗಟ್ಟಿಯಾಗಬೇಕು ಎಂದು ಹೇಳಿದರು.
ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಿರುವಾಗ ಪ್ರಧಾನಿಯವರು ಪಕ್ಷದ ಕಾರ್ಯಕರ್ತರಿಗೆ ಒಂದಷ್ಟು ಚುನಾವಣಾ ಮಂತ್ರಗಳನ್ನೂ ನೀಡಬಹುದು.
ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಬಿಜೆಪಿ ನಾಯಕರು ವಿಶೇಷ ಸಿದ್ಧತೆ ನಡೆಸಿದ್ದಾರೆ. ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಧಾನ ಮಂತ್ರಿಗಳ ಭಾಷಣವನ್ನು ನೇರ ಪ್ರಸಾರ ಮಾಡಲಾಗುತ್ತದೆ. 1980ರ ಏಪ್ರಿಲ್ 6ರಂದು ಬಿಜೆಪಿ ಸ್ಥಾಪನೆಯಾಯಿತು. ಜನಸಂಘದ ಮುಖಂಡರು ಜನತಾ ಪಕ್ಷ ತೊರೆದು ಬಿಜೆಪಿ ರೂಪದಲ್ಲಿ ಹೊಸ ಪಕ್ಷ ಆರಂಭಿಸಿದರು.
ಬಿಜೆಪಿ ಸಂಸ್ಥಾಪನಾ ದಿನ ಅಂದರೆ ಇಂದಿನಿಂದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರವರೆಗೆ ಏಳು ದಿನಗಳ ಕಾಲ ಪಕ್ಷವು ‘ಸಾಮಾಜಿಕ ನ್ಯಾಯ ಸಪ್ತಾಹ’ವನ್ನು ಆರಂಭಿಸಿದೆ.
ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ, ಭಾರತ ಸಂವಿಧಾನದ ನಿರ್ಮಾತೃ ಹಾಗೂ ವಿಶೇಷವಾಗಿ ದಲಿತರ ಪ್ರತೀಕ ಬಿ.ಆರ್.ಅಂಬೇಡ್ಕರ್ ಅವರ ಸ್ಮರಣಾರ್ಥ ಬಿಜೆಪಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಏತನ್ಮಧ್ಯೆ, ಪಕ್ಷದ ಕಾರ್ಯಕರ್ತರು ಸಮಾಜ ಸುಧಾರಕ ಜ್ಯೋತಿಬಾ ಫುಲೆ ಅವರ ಜನ್ಮದಿನವನ್ನು ಏಪ್ರಿಲ್ 11 ರಂದು ಆಚರಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ