India Covid Updates: ಭಾರತದಲ್ಲಿ ಮತ್ತೆ ಏರಿಕೆಯತ್ತ ಕೊರೊನಾ ಪ್ರಕರಣಗಳು, ಕಳೆದ 24 ಗಂಟೆಗಳಲ್ಲಿ 5,300 ಮಂದಿಗೆ ಸೋಂಕು
ಭಾರತದಲ್ಲಿ ಮತ್ತೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 5,300 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಮತ್ತೆ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 5,300 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಸಕ್ರಿಯ ಪ್ರಕರಣಗಳು 25,587 ಕ್ಕೆ ಏರಿದೆ. ಕಳೆದ ವರ್ಷ ಸೆಪ್ಟೆಂಬರ್ 23 ರಿಂದ ಮೊದಲ ಬಾರಿಗೆ, ದೈನಂದಿನ ಪ್ರಕರಣಗಳು 5,000 ಗಡಿ ದಾಟಿದೆ.
ಅದೇ ಸಮಯದಲ್ಲಿ, ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರವು 3.32 ಪ್ರತಿಶತದಷ್ಟಿದೆ. ದೆಹಲಿಯಲ್ಲಿ ಬುಧುವಾರದಂದು 509 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ, ಆದಾಗ್ಯೂ ಧನಾತ್ಮಕತೆಯ ದರ (ಪ್ರತಿ 100 ಪರೀಕ್ಷೆಗಳಿಗೆ ದೃಢಪಡಿಸಿದ ಪ್ರಕರಣಗಳು) ಒಂದು ದಿನದ ಮೊದಲು 15.64% ರಿಂದ 26% ಕ್ಕೆ ಹೆಚ್ಚಳವಾಗಿದೆ.
ಮತ್ತಷ್ಟು ಓದಿ: ಕೋವಿಡ್, ಹೃದಯಾಘಾತಕ್ಕೆ ಸಂಬಂಧವಿದೆಯೇ; ಆರೋಗ್ಯ ಸಚಿವರು ಹೇಳಿದ್ದೇನು?
ಹೊಸ ಪ್ರಕರಣಗಳೊಂದಿಗೆ ನಗರದ ಸೋಂಕಿತರ ಸಂಖ್ಯೆ 20,12,064 ಕ್ಕೆ ಏರಿದೆ.ಮಂಗಳವಾರ 1,918 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಡೇಟಾದಲ್ಲಿ ಉಲ್ಲೇಖಿಸಲಾಗಿದೆ.
ಸಮುದಾಯದ ಮೂಲಕ ರೋಗವು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದರ ಸೂಚಕವಾಗಿ ಧನಾತ್ಮಕ ದರವನ್ನು ತೆಗೆದುಕೊಳ್ಳಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ